ರಾಜ್ಯಪಾಲರ ನಡೆ ನೋವಿನ ಸಂಗತಿ. ರಾಜ್ಯಪಾಲರು ಸಂವಿಧಾನದ ಮುಖ್ಯಸ್ಥರಾಗಿ ಬಿಜೆಪಿ ಸಹಚರರಾಗಿ ಕೆಲಸ ಮಾಡ್ತಿದ್ದಾರೆ. ಖರ್ಗೆ ಹಾಗೂ ರಾಹುಲ್ ಗಾಂಧೀ ಅವರೊಂದಿಗೆ ಚರ್ಚೆ ಮಾಡಲು ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದಾರೆ‌ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.

ನಗರದಲ್ಲಿಂದು ‌ಮಾತನಾಡಿದ ಅವರು, ಬಿಜೆಪಿಯವರು ವಿರೋಧ ಪಕ್ಷದ ಎಲ್ಲಾ ನಾಯಕರನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ. ಬಿಜೆಪಿ ಅಧಿಕಾರಕ್ಕಾಗಿ ಎಲ್ಲಾ ತಪ್ಪು ಮಾಡೋಕು ತಯಾರಿದೆ. ಧರ್ಮ, ಸಿದ್ದಾಂತ, ದೇಶ ಭಕ್ತಿ ಎಲ್ಲಾ ಸುಮ್ಮನೆ, ಅವರದ್ದು ಕಪಟ ನಡುವಳಿಕೆ. ಜಾಸ್ತಿ ತೋರಿಸಿಕೊಳ್ಳೋರೆ ತಪ್ಪು ಮಾಡೋದು. ದೇಶಪ್ರೇಮ ಎಂದು ಕಪಟತನ ಎಂದು ದೂರಿದರು.

ಐಟಿ, ಸಿಬಿಐ ಎಲ್ಲಾ ಬೇರೆ ಪಕ್ಷದವರ ಮೇಲೇನೆ ದಾಳಿ ಮಾಡ್ತವೆ. ಖಾಸಗಿ ದೂರಿನ ಮೇಲೆ ರಾಜ್ಯಪಾಲರು ಅದೇ ದಿನ ಶೋಕಾಸ್ ನೋಟಿಸ್ ನೀಡ್ತಾರೆ. ಕುಮಾರಸ್ವಾಮಿ, ಜೊಲ್ಲೆ, ಜನಾರ್ದನ್ ರೆಡ್ಡಿ ಪೊಲೀಸ್ ವಿಚಾರಣೆ ನಡೆದು ಚಾರ್ಜ್ ಶಿಟ್ ರೆಡಿ ಮಾಡಿದ್ರು ಹಾಗೆ ಬಿದ್ದಿದೆ.
ಚುನಾಯಿತ ಸರ್ಕಾರ ಅಸ್ತಿರಗೊಳಿಸುವುದು ಸಾಮಾನ್ಯ ವಿಚಾರನಾ? ಗೌವರ್ನರ್ ಷಡ್ಯಂತ್ರ ಮಾಡಿದ್ರೆ ನಾವು ಸುಮ್ಮನೆ ಕುತ್ಕೋ ಬೇಕಾ. ಕೇಂದ್ರ ಬಿಜೆಪಿ ಒತ್ತಡ ಹಾಕಿಸಿ ಈ ರೀತಿ ಮಾಡಿಸಿದ್ದಾರೆ‌. ರಾಜ್ಯಪಾಲರ ಮೇಲೆ ನಮಗೆ ನಂಬಿಕೆ ಇಲ್ಲ. ವಿಜಯೇಂದ್ರ, ಯಡಿಯೂರಪ್ಪ ಅವರ ಬಗ್ಗೆನೇ ಬಿಜೆಪಿ ಅವರು ಮಾತಾಡ್ತಾ ಇದ್ದಾರೆ.
ಮ್ಮ ಕಾಂಗ್ರೆಸ್ ನಲ್ಲಿ ನಾವು ಒಗ್ಗಟ್ಟಾಗಿದ್ದೇವೆ. ಅವರ ಮನೆಯೇ ಒಡೆದು ಹೋಗಿದೆ ಎಂದರು.

ಕುಮಾರ ಸ್ವಾಮಿ‌ ಸಿಲುಕಿಸಲು ಬಿಜೆಪಿ ತಂತ್ರ…

ಕುಮಾರಸ್ವಾಮಿ ಸಿಲುಕಿಸಲು ಬಿಜೆಪಿ ಯತ್ನ ಮಾಡಿದೆ. ಕುಮಾರಸ್ವಾಮಿ ಅವರ ಮೇಲೆ ಸ್ಪಷ್ಟ ಆರೋಪ ಇದೆ.
ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಲೆಬೇಕು. ಇಲ್ಲದಿದ್ದರೆ ಕೇಂದ್ರಕ್ಕೆ ಕಳಿಸಬಹುದು. ನಿಖೆ ಆಗಿ ಕುಮಾರಸ್ವಾಮಿ ತಪ್ಪಿತಸ್ಥ ಆಗಿ ಎಂದು ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಕುಮಾರಸ್ವಾಮಿ ಅವರು ಫೋರ್ಜರಿ ಸಹಿ ಅಂತಾರೆ. ಆದ್ರೆ ಯಾಕೆ ಅವತ್ತೆ ಹೇಳಿಲ್ಲ,ಇವಾಗ ಯಾಕೆ ಫೋರ್ಜರಿ ಅಂತಾರೆ. ಒಬ್ಬ ಮಂತ್ರಿಯಾಗಿ ಹೀಗೆ ಮಾತಾಡಬಹುದಾ ಎಂದು ಪ್ರಶ್ನಿಸಿದರು.

ಅವರ ಬಳಿ ಗಣಿಗಾರಿಕೆ ಇಲಾಖೆ ಇದೆ. ಹೀಗಾಗಿ ಕುಮಾರಸ್ವಾಮಿ ರಾಜೀನಾಮೆ ಕೊಡಬೇಕು. ಕುಮಾರಸ್ವಾಮಿ ಅವರ ತಲೆದಂಡ ರಾಜ್ಯಪಾಲರ ತೀರ್ಮಾನದಿಂದ ಆಗಬಹುದು. ಬಹುಷಃ ಬಿಜೆಪಿಯವರು ಕುಮಾರಸ್ವಾಮಿ ತಗೆಯೋದಕ್ಕೆ ಮಾಡಿರೋ ಪ್ಲ್ಯಾನ್.
ಮೊದಲೇ ಬಿಜೆಪಿ ಜೆಡಿಎಸ್ ಮುಗಿಸಲು ಪ್ಲ್ಯಾನ್ ಮಾಡಿದ್ದಾರೆ ಅಂತಾ ನನಗೆ ಅನಿಸುತ್ತೆ. ಕುಮಾರಸ್ವಾಮಿ ಅವರನ್ನು ತಗೆಯೋ ಸನ್ನಿವೇಶ ಬಿಜೆಪಿಯವರು ತಗೆದೊಕೊಂಡು ಹೋಗುತ್ತಿದಾರೆ‌. ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಆಗಿದೆ. ರಾಜ್ಯಪಾಲರಿಗೆ ಅಡ್ವೈಸ್ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.

ಕುಮಾರಸ್ವಾಮಿ, ನಿರಾಣಿ,ಜೊಲ್ಲೆ,ಜನಾರ್ದನರೆಡ್ಡಿ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಿ. ನೀವು ಯಾರನ್ನೂ ರಕ್ಷಣೆ ಮಾಡಬೇಡಿ ಎಂದು ಸಲಹೆ ಕೊಡಿ. ಆದ್ರೆ ಕಾನೂನಾತ್ಮಕವಾಗಿ ನಡೆದುಕೊಳ್ತಿಲ್ಲ ಎಂದು ದೂರಿದರು.

ವಿಜಯೇಂದ್ರ ಮತ್ತು ಯಡಿಯೂರಪ್ಪ ಭ್ರಷ್ಟಾಚಾರದ ಕಿಂಗ್ ಗಳು…

ವಿಜಯೇಂದ್ರಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡೋಕೆ ನೈತಿಕತೆ ಇಲ್ಲ. ದೇಶದಲ್ಲೇ ಅತ್ಯಂತ ಭ್ರಷ್ಟ ಸಿಎಂಗಳಲ್ಲಿ ಯಡಿಯೂರಪ್ಪ ಒಬ್ಬರು. ಅವರ ವೈಯಕ್ತಿಕ ಭ್ರಷ್ಟಾಚಾರ ಸಾಕಷ್ಟು ಮಾಡಿದ್ರು. ಪೊಕ್ಸೋ ಕೇಸ್ ನಲ್ಲಿ ಯಡಿಯೂರಪ್ಪ ಬೇಲ್ ನಲ್ಲಿದ್ದಾರೆ. ಕುಮಾರಸ್ವಾಮಿ ಮೇಲೆ ವಿಚಾರಣೆ ನಡೀತಾ ಇದೆ. ಇವರಿಗೆಲ್ಲ ಏನು ಅರ್ಹತೆ ಇದೆ‌. ಅವರ ಉದ್ದೇಶ ರಾಜ್ಯದಲ್ಲಿ ಅಭಿವೃದ್ಧಿ ಆಗಬಾರದು ಅನ್ನೋದು. ಇದನ್ನೆಲ್ಲಾ ಆರ್ ಎಸ್ ಎಸ್, ಬಿಜೆಪಿ ಅವರು ಮಾಡ್ತಿದ್ದಾರೆ.

ಬರಗಾಲ ಬಂದಾಗ ಪರಿಹಾರ ಕೊಡೋಕೆ ತಾಕತ್ ಇಲ್ಲ ಇವರಿಗೆ. ಜೋಶಿ,ಕುಮಾರಸ್ವಾಮಿಯಿಂದ ಏನು ಪ್ರಯೋಜನ ನಮಗೆ. ವಾಲ್ಮೀಕಿ ಹಗರಣ ನಿಜಕ್ಕೂ ಹಗರಣ,
ತಪ್ಪಾಗಿದೆ, 50 ಕೋಟಿಗಿಂತ ಹೆಚ್ಚಿನ ಹಣ ವಾಪಸ್ ತಂದಿದ್ದೇವೆ. ಭೋವಿ ನಿಗಮ ಸೇರಿ ಹಲವು ನಿಗಮದಲ್ಲಿ ಆಗಿವೆ, ಕ್ರಮ ಕೈಗೊಳ್ತಿದ್ದೇವೆ. ನಾಗೇಂದ್ರ ಅವರನ್ನ ಇಡಿ ಅವರು ಅರೆಸ್ಟ್ ಮಾಡಿದ್ದಾರಲ್ಲ. ಬಿಜೆಪಿ ಅವರಿಗೆ ಅಭಿವೃದ್ಧಿ ವಿಚಾರ ಬೇಕಾಗಿಲ್ಲ ಎಂದರು.

ರಾಜ್ಯಪಾಲರು ಜೊಲ್ಲೆ, ಕುಮಾರಸ್ವಾಮಿ, ನಿರಾಣಿ, ಜನಾರ್ಧನ್ ರೆಡ್ಡಿ ಮೇಲೆ ಕ್ರಮ ಕೈಗೊಳ್ಳಿ. ರಿಜೆಕ್ಟ್ ಮಾಡಿದ್ರೆ ಮಾಡಲಿ, ಅಪ್ರುವಲ್ ಮಾಡಿದ್ರೆ ಮಾಡಿ. ಭ್ರಷ್ಟಾಚಾರ ವ್ಯಕ್ತಿಗಳನ್ನು ರಕ್ಷಿಸಬೇಡಿ ನೀವು. ಪ್ರೈವೇಟ್ ಕಂಪ್ಲೇಂಟ್ ಮೇಲೆ ದೂರು ತೆಗದುಕೊಳ್ಳೋದು ಕಾನೂನಿನ ಪ್ರಕಾರ ಇಲ್ಲ. ರಾಜ್ಯಪಾಲರಿಗೆ ಅಗೌರವ ತರುವ ಕೆಲಸ ಮಾಡಿದ್ದೆ ಬಿಜೆಪಿ ಅವರು. ರಾಜ್ಯಪಾಲರು ಕೇಂದ್ರ ಸರ್ಕಾರದ ಒತ್ತಡಕ್ಕೆ ಹೀಗೆ ಮಾಡಿದ್ದಾರೆ. ರಾಜ್ಯಪಾಲರಿಗೂ ಈಗ
ಹೊರಗಡೆ ಹೋಗಲು ಮುಜುಗರ ಆಗ್ತಿದೆ ಎಂದು ಕುಟುಕಿದರು.

Leave a Reply

Your email address will not be published. Required fields are marked *

Latest News