Month: November 2023

ಸೂರ್ಯನ ಸ್ಫೋಟದ ಮೊದಲ ಚಿತ್ರ ಕಳುಹಿಸಿದ ಆದಿತ್ಯ ಎಲ್1: ಬಾಹ್ಯಾಕಾಶದಲ್ಲಿ ಮಹತ್ವದ ಮೈಲುಗಲ್ಲು!

ಸೂರ್ಯನ ಮೇಲಿನ ಸ್ಫೋಟದ ಮೊದಲ ಫೋಟೊವನ್ನು ಕಳುಹಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಸೂರ್ಯನ ಅಧ್ಯಯನಕ್ಕೆ ಕಳುಹಿಸಿದ್ದ ಆದಿತ್ಯ ಎಲ್1 ಉಪಗ್ರಹ ಇತಿಹಾಸ ನಿರ್ಮಿಸಿದೆ. ಸೂರ್ಯನ ಮೇಲಿನ ಸೋಲಾರ್ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸಲು ತೆರಳಿರುವ ಆದಿತ್ಯ ಎಲ್ 1…

ವಿಶ್ವಕಪ್ ನಿಂದ ಹೊರಬಿದ್ದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್!

ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಶ್ರೀಲಂಕಾ ತಂಡದ ಆಲ್ ರೌಂಡರ್ ಆಂಜೆಲೊ ಮ್ಯಾಥ್ಯೂಸ್ ಟೈಮ್ಡ್ ಔಟ್ ಆದ ವಿವಾದದ ಬೆನ್ನಲ್ಲೇ ಶಕೀಬ್ ಅಲ್ ಹಸನ್ ಹೊರಬಿದ್ದಿರುವುದು ಅಚ್ಚರಿ ಮೂಡಿಸಿದೆ. ಆದರೆ ತಂಡದ ಆಡಳಿತ…

ನಕಲಿ ವೀಡಿಯೊ ಮಾಡಿದರೆ 3 ವರ್ಷ ಜೈಲು, 1 ಲಕ್ಷ ರೂ. ದಂಡ!

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ರೀತಿ ನಕಲಿ ಫೋಟೊ ಅಥವಾ ವೀಡಿಯೊ ಬಳಸಿದವರಿಗೆ 3 ವರ್ಷ ಜೈಲು ಹಾಗೂ 1 ಲಕ್ಷ ರೂ ದಂಡ…

ಬೆಂಗಳೂರಿನಲ್ಲಿ ಜೆಸಿಸಿ ಸದ್ದು: ಜಯನಗರ, ಮಲ್ಲೇಶ್ವರದಲ್ಲಿ 100ಕ್ಕೂ ಹೆಚ್ಚು ಅಂಗಡಿ ತೆರವು

ಬೆಂಗಳೂರಿನಲ್ಲಿ ದಿಢೀರನೆ ರಸ್ತೆ ಬದಿ ಅಂಗಡಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆದಿದ್ದು, ನೂರಾರು ಅಂಗಡಿಗಳನ್ನು ಜೆಸಿಬಿ ವಾಹನಗಳ ಮೂಲಕ ತೆರವುಗೊಳಿಸಲಾಗಿದೆ. ನಗರದ ಪ್ರತಿಷ್ಠಿತ ವ್ಯಾಪಾರಿ ಬಡಾವಣೆಗಳಾದ ಜಯನಗರ ಹಾಗೂ ಮಲ್ಲೇಶ್ವರದಲ್ಲಿ ರಸ್ತೆ ಬದಿ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಜಯನಗರದಲ್ಲಿ ಸುಮಾರು 32 ಹಾಗೂ…

ಶೇ.34ರಷ್ಟು ಜನರ ಆದಾಯ 6000 ರೂ.: ಬಿಹಾರ ಜಾತಿ ಗಣತಿ ಬಹಿರಂಗ

ಬಿಹಾರದಲ್ಲಿನ ಶೇ.42ರಷ್ಟು ಎಸ್ಸಿ/ಎಸ್ಟಿ ಸಮುದಾಯದ ಕುಟುಂಬಗಳು ಬಡವರಾಗಿದ್ದರೆ, ಶೇ.33ರಷ್ಟು ಹಿಂದುಳಿದ ವರ್ಗಗಳ ಕುಟುಂಬಗಳು ಬಡವರಾಗಿದ್ದಾರೆ ಎಂಬುದು ಇತ್ತೀಚೆಗೆ ಬಿಡುಗಡೆ ಆದ ಜಾತಿ ಗಣತಿ ವರದಿಯಲ್ಲಿ ಬಹಿರಂಗವಾಗಿದೆ. ಜಾತಿ ಗಣತಿ ವರದಿಯ ಆರ್ಥಿಕ ಸ್ಥಿತಿ ಕುರಿತು ಎರಡನೇ ಹಂತದ ವರದಿ ಮಂಗಳವಾರ ಬಿಡುಗಡೆ…

ಬರದಿಂದ 33,700 ಕೋಟಿ ನಷ್ಟ, 17,900 ಕೋಟಿ ಪರಿಹಾರ ಕೇಳಿದ್ದೇವೆ: ಸಿಎಂ ಸಿದ್ದರಾಮಯ್ಯ

ರಾಜ್ಯವನ್ನು ಕಾಡುತ್ತಿರುವ ಬರದಿಂದ 33,700 ಕೋಟಿ ರೂ. ನಷ್ಟ ಉಂಟಾಗಿದ್ದು, 17,900 ಕೋಟಿ ರೂ.ನಷ್ಟು ಪರಿಹಾರ ಕೇಳಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ತಂಡ ಬರ ಅಧ್ಯಯನ ಮಾಡಿಕೊಂಡು ಹೋಗಿದೆ. ಇನ್ನೂ ವರದಿ…

ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ ಇನ್ನಿಲ್ಲ: ಪೂರ್ಣಚಂದ್ರ ಎಸ್ಟೇಟ್ ನಲ್ಲಿ ಅಂತಿಮ ಸಂಸ್ಕಾರ

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ (87) ನಿಧನರಾಗಿದ್ದಾರೆ. ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ನಿವಾಸದಲ್ಲಿ ಡಿಬಿ ಚಂದ್ರೇಗೌಡ ಕೊನೆಯುಸಿರೆಳೆದಿದ್ದು, ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದಾರದಹಳ್ಳ ಪೂರ್ಣಚಂದ್ರ ಎಸ್ಟೇಟ್‌ನಲ್ಲಿ ಅಂತಿಮ‌ ಸಂಸ್ಕಾರ ನೆರವೇರಲಿದೆ. ಕಾಂಗ್ರೆಸ್…

ಹಾವು, ಆನೆ ದಂತ, ಜಿಂಕೆ ಕೊಂಬು ಮಾರುತ್ತಿದ್ದ ಇಬ್ಬರ ಬಂಧನ

2 ತಲೆ ಹಾವು, ಜೀವಂತ ಹಾವು ಹಾಗೂ ಕಾಡು ಪ್ರಾಣಿಗಳ ಕೊಂಬು, ಆನೆ ದಂತ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬೆಂಗಳೂರಿನ ವಯ್ಯಾಲಿ ಕಾವಲ್‌ ಪೊಲೀಸರು ಬಂಧಿಸಿದ್ದಾರೆ. ಚಂದ್ರೇಗೌಡ ಹಾಗೂ ಲೋಕೇಶ್‌ ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ 2 ಎರಡು…

ಬೆಂಕಿ ಹಚ್ಚಿಕೊಂಡು ಪ್ರೇಮಿ ಜೊತೆ ವಿವಾಹಿತ ಮಹಿಳೆ ಆತ್ಮಹತ್ಯೆ

ಪ್ರೇಮಕ್ಕೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ವಿವಾಹಿತ ಮಹಿಳೆಯೊಬ್ಬಳು ಪ್ರೇಮಿಯೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದೊಡ್ಡಗುಬ್ಬಿ ನಿವಾಸದ ಅಪಾರ್ಟ್ ಮೆಂಟ್‌ನಲ್ಲಿ ಸೌಮಿನಿ ದಾಸ್ (20), ಅಬಿಲ್ ಅಬ್ರಾಹಂ (29) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಫ್ಲ್ಯಾಟ್‌ನಲ್ಲಿ ಬೆಂಕಿ…

ಅತೀ ಹೆಚ್ಚು ಸಮಯ ಕೆಲಸ ಮಾಡುವ ಭಾರತೀಯರಿಗೆ ಅತೀ ಕಡಿಮೆ ವೇತನ!

ಭಾರತದ ಯುವಕರು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹೇಳಿಕೆ ವಿವಾದ ಸೃಷ್ಟಿಸಿತ್ತು. ಆದರೆ ವಾಸ್ತವವಾಗಿ ಭಾರತೀಯರು ಎಷ್ಟು ಗಂಟೆ ಕೆಲಸ ಮಾಡುತ್ತಾರೆ ಎಂಬ ಬಗ್ಗೆ ವರದಿ ಪ್ರಕಟವಾಗಿದೆ. ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ…