ಹಿಂದುಳಿದ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿದ್ದುಕೊಂಡು ಮುಂದುವರಿಯಬೇಕು ಎಂದು ಸರಕಾರದ ಉದ್ದೇಶವಾದರೆ, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕಿ ನೀಲಮ್ಮಕ್ಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗದೆ ಮತ್ತಷ್ಟು ಹಿಂದುಳಿಯುವಂತೆ ಮಾಡಿದ್ದಾರೆ.

ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳು ನೆಲದ ಮೇಲೆ ಮಲಗುವಂತ ದುಸ್ಥಿತಿ ಇದ್ದು, ಒಂದೇ ರೂಮಲ್ಲಿ 20 ವಿದ್ಯಾರ್ಥಿಗಳು ಇರುವುದರ ಜೊತೆಗೆ ನೆಲದ ಮೇಲೆ ಮಲಗಬೇಕಾದ ಪರಿಸ್ಥಿತಿ ಇದೆ, ಆದರೆ ನೀಲಮ್ಮಕ್ಕ ಮಾತ್ರ ಸೌಲಭ್ಯ ನೀಡದೆ ಲೂಟಿ ಮಾಡುತ್ತಿದ್ದಾರೆಂದು ಬಿಜೆಪಿ ಮುಖಂಡರ ಆರೋಪವಾಗಿದೆ.

ನೀಲಮ್ಮಕ್ಕ ಈ ವಸತಿ ನಿಲಯದ ವಾರ್ಡನ್ ಜೊತೆಗೆ ಮಾನ್ವಿ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ,ನೀಲಮ್ಮಕ್ಕ ಅದೇನು ಡ್ಯೂಟಿ ಮಾಡುತ್ತೀಯಮ್ಮ ಮಕ್ಕಳ ಹೆಸರಲ್ಲಿ ಲೂಟಿ ಮಾಡುತ್ತೀಯಾ ಅಂದರೆ ಹಿಂದುಳಿದ ವಿದ್ಯಾರ್ಥಿಗಳ ಶಾಪ ಮಾತ್ರ ತಟ್ಟೋದು ಗ್ಯಾರಂಟಿ.

Leave a Reply

Your email address will not be published. Required fields are marked *

Latest News