ಸಿಹಿ ಸಕ್ಕರೆ ಉತ್ಪಾದಿಸುವ ಕಾರ್ಖಾನೆಯಿಂದ ಸ್ಥಳೀಯ ಜನರಿಗೆ ವಿಷಪೂರೈಕೆಯಾಗಿದ್ದು, ಮಾಕವಳ್ಳಿ ಬಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯಿಂದ ಸ್ಥಳೀಯ ಜನರಿಗೆ ಬಹಳ ತೊಂದರೆಯಾಗಿದೆ.

ಇನ್ನೂ ಸಕ್ಕರೆ ಉತ್ಪಾದಿಸುವ ಕಾರ್ಖಾನೆಯಿಂದ ಬರುತ್ತಿರುವ ಹೊಗೆ ಹಾಗೂ ಬೂದಿಯಿಂದಾಗಿ ಕಾರ್ಖಾನೆ ಪಕ್ಕದ ಗ್ರಾಮಗಳು ತತ್ತರಗೊಂಡಿದ್ದು , ಸಕ್ಕರೆ ಕಾರ್ಖಾನೆಯ ಪಕ್ಕದ ಕರೋಟಿ ಹಾಗೂ ಮಾಕವಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಈ ತೊಂದರೆಯಿಂದಾಗಿ ಹೈರಾಣಾಗಿದ್ದಾರೆ.

ಇತ್ತ ರೈತರ ಜಮೀನಿಗೂ ಹರಡಿರುವ ಕಾರ್ಖಾನೆಯ ಕಲುಷಿತವಾದ ಹೊಗೆ ಹಾಗೂ ಬೂದಿಯಿಂದ ರೈತರು ಬೆಳೆದಿರುವ ಬೆಳೆಯೂ ಕೂಡ ನಾಶವಾಗಿದೆ ಜೊತೆಗೆ ಗಾಳಿಯಲ್ಲಿ ತೇಲುತ್ತಾ ಗ್ರಾಮದ ಮನೆಗಳಿಗೂ ಹರಡಿರುವ ಬೂದಿಯಿಂದ ಜನರ ಆರೋಗ್ಯದಲ್ಲಿಯೂ ಏರುಪೇರು ಉಂಟಾಗಿದೆ ನಂತರ ಜಾನುವಾರುಗಳ ಮೇಲೆಯೂ ಬಹಳ ಪರಿಣಾಮ ಬೀರಿದ್ದು ಸಮಸ್ಯೆಯನ್ನು ಆಲಿಸಿದ ಕೃಷಿ ಅಧಿಕಾರಿಗಳಿಂದ ಜಮೀನಿನ ಬೆಳೆಯ ಪರಿಶೀಲನೆ ನಡೆದಿದೆ..

ಪರಿಶೀಲನೆಯ ನಂತರ ಅಗತ್ಯ ಕ್ರಮ ಕೈಗೊಂಡು ಕಾರ್ಖಾನೆಯಿಂದ ಆಗ್ತಿರೋ ಸಮಸ್ಯೆ ತಪ್ಪಿಸುವಂತೆ ರೈತರು ಮನವಿ‌ಮಾಡಿದ್ದು ಇದೇ ಸಂದರ್ಭದಲ್ಲಿ ರೈತರ ಮನವಿಗೆ ಪೂರಕವಾಗಿ ಸ್ಪಂದಿಸುವ ಭರವಸೆಯನ್ನು ಅಧಿಕಾರಿಗಳು ಕೊಟ್ಟಿದ್ದಾರೆ…!

Leave a Reply

Your email address will not be published. Required fields are marked *

Latest News