ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ `ಶಕ್ತಿ ಯೋಜನೆ’ಗೆ ಇಂದು( ಜೂನ್ 11) ರಾಜ್ಯಾದ್ಯಂತ ಏಕಕಾಲದಲ್ಲಿ ಚಾಲನೆ ಸಿಕ್ಕಿದೆ. BTMC ಬಸ್​​ನಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫಸ್ಟ್ ಟಿಕೆಟ್ ಕೊಟ್ಟಿದ್ಯಾರಿಗೆ? ವಿಡಿಯೋ ನೋಡಿ

ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ `ಶಕ್ತಿ ಯೋಜನೆ’ಗೆ ಇಂದು( ಜೂನ್ 11) ರಾಜ್ಯಾದ್ಯಂತ ಏಕಕಾಲದಲ್ಲಿ ಚಾಲನೆ ಸಿಕ್ಕಿದೆ. ಸಿದ್ದರಾಮಯ್ಯ ಅವರು ವಿಧಾನಸಭೆ ಮುಂಭಾಗ ಅಧಿಕೃತವಾಗಿ ಚಾಲನೆ ನೀಡಿದರು. ಬಳಿಕ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕೆಲ ಸಚಿವರು, ಶಾಸಕರು ಹಾಗು ಕೆಎಸ್​ಆರ್​​ಟಿಸಿ ಹಾಗೂ ಬಿಎಂಟಿಸಿ ಸಂಸ್ಥೆಯ ಅಧಿಕಾರಿಗಳು ಬಸ್​ನಲ್ಲೇ ವಿಧಾನಸಭೆಯಿಂದ ಮೆಜೆಸ್ಟಿಕ್​ಗೆ ಪ್ರಯಾಣಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಫ್ರೀ ಬಸ್ ಟಿಕೆಟ್ ಅನ್ನು​ ಮೊದಲಿಗೆ ಸರ್ಕಾರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ವಿತರಿಸಿದರು.

Leave a Reply

Your email address will not be published. Required fields are marked *

Latest News