ಇಂದಿನ ಬಿಡುವಿಲ್ಲದ ಜೀವನಶೈಲಿಯಿಂದಾಗಿ, ನಾವು ನಮ್ಮ ಕುಟುಂಬ ಮತ್ತು ನಮ್ಮ ಮಕ್ಕಳಿಗೆ ಕಡಿಮೆ ಸಮಯವನ್ನು ನೀಡುತ್ತಿದ್ದೇವೆ. ತಾಯಿ ಮತ್ತು ತಂದೆ ಇಬ್ಬರೂ ಕೆಲಸ ಮಾಡುತ್ತಿದ್ದರೆ, ಅವರ ಮಕ್ಕಳೊಂದಿಗೆ ಅವರ ಸಂಬಂಧವು ಸ್ವಲ್ಪ ಒರಟಾಗಿರುತ್ತದೆ. ತಾಯಿ ಮತ್ತು ಮಗಳ ಸಂಬಂಧದಂತೆಯೇ ತಂದೆ ಮತ್ತು ಮಗನ ಸಂಬಂಧವೂ ವಿಶೇಷವಾಗಿದೆ. ತಾಯಿ ಮತ್ತು ಮಗಳು ಸಮಯದೊಂದಿಗೆ ಪರಸ್ಪರ ಸ್ನೇಹಿತರಾಗುತ್ತಾರೆ ಆದರೆ ತಂದೆ ತನ್ನ ಬಿಡುವಿಲ್ಲದ ಜೀವನಶೈಲಿಯಿಂದಾಗಿ ತನ್ನ ಮಗನ ಸ್ನೇಹಿತನಾಗಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಒಬ್ಬ ತಂದೆ ತನ್ನ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವ ತನ್ನ ಮಗುವಿಗೆ ಅಂತಹ ಸ್ನೇಹಿತನಾಗಲು ಪ್ರಯತ್ನಿಸಬೇಕು.

ತಂದೆಯು ತನ್ನ ಮಗನ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಲು ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನಾವು ತಿಳಿದುಕೊಳ್ಳೋಣ.

  • ಮಗನ ಮುಂದೆ ನೀವು ಉತ್ತಮ ಉದಾಹರಣೆಯಾಗಿರಬೇಕು;
    ಒಬ್ಬ ತಂದೆ ಯಾವಾಗಲೂ ತನ್ನ ಮಗುವಿನ ಮುಂದೆ ಉತ್ತಮ ಉದಾಹರಣೆಯಾಗಿರಲು ಪ್ರಯತ್ನಿಸಬೇಕು, ಏಕೆಂದರೆ ಒಬ್ಬ ಮಗ ತನ್ನ ತಂದೆಯನ್ನು ನೋಡುವ ಮೂಲಕ ಅನೇಕ ವಿಷಯಗಳನ್ನು ಕಲಿಯುತ್ತಾನೆ ಮತ್ತು ಅದೇ ರೀತಿಯಲ್ಲಿ ಅವನ ಜೀವನದಲ್ಲಿ ವ್ಯಕ್ತಿತ್ವವು ಬೆಳೆಯುತ್ತದೆ. ಒಬ್ಬ ತಂದೆ ತನ್ನ ಮಗನಿಗೆ ತಾಳ್ಮೆಯಿಂದ ಇರಲು ಕಲಿಸಬೇಕು, ಹಿರಿಯರೊಂದಿಗೆ ಚೆನ್ನಾಗಿ ಮಾತನಾಡಬೇಕು ಮತ್ತು ಜನರನ್ನು ಗೌರವಿಸಬೇಕು ಎಂಬುದನ್ನು ಮನದಟ್ಟು ಮಾಡಿಸಿ ಅದು ನಿಮ್ಮಿಂದನೆ ಪ್ರಾರಂಭವಾಗಬೇಕು.

ಇಂದಿನ ಬಿಡುವಿಲ್ಲದ ಜೀವನದಲ್ಲಿಯೂ ನಿಮ್ಮ ಮಗನೊಂದಿಗೆ ಸಮಯ ಕಳೆಯಿರಿ

ಕುಟುಂಬಕ್ಕಾಗಿ ಸಮಯವನ್ನು ನೀಡುವುದು ಸ್ವಲ್ಪ ಕಷ್ಟ, ಆದರೆ ತಂದೆ ತನ್ನ ಮಕ್ಕಳಿಗಾಗಿ ಸಮಯವನ್ನು ನೀಡಲು ಪ್ರಯತ್ನಿಸಬೇಕು. ನೀವು ಮಕ್ಕಳೊಂದಿಗೆ ಅನೇಕ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ನಿಮ್ಮ ರಜಾದಿನಗಳಲ್ಲಿ, ನೀವು ನಿಮ್ಮ ಮಕ್ಕಳೊಂದಿಗೆ ಹೊರಗಡೆ ಹೋಗಬಹುದು ಅದರಿಂದಾಗಿ ನಿಮ್ಮ ಮಗ ಓಪೆನ್‌ ಮೈಂಡೆಡ್‌ ಆಗಿರುತ್ತಾನೆ. ಇದಲ್ಲದೇ ನಿಮ್ಮ ಮಕ್ಕಳೊಂದಿಗೆ ಆಟವಾಡುವುದು, ತೋಟಗಾರಿಕೆ ಮಾಡುವುದು, ಮನೆಕೆಲಸಗಳಲ್ಲಿ ಸಹಾಯ ಮಾಡುವುದು ಇವೆಲ್ಲವನ್ನೂ ಮಾಡಬಹುದು ಈ ರೀತಿಯಾಗಿದ್ದಾಗ ಮಾತ್ರ ಅವರು ಬೆಳೆಯುತ್ತಾ ಯೌವ್ವನಾವಸ್ತೆಗೆ ಬರುತ್ತಿದ್ದರೂ ಸಹ ನಿಮ್ಮ ಬಳಿ ಮುಜುಗರವಿಲ್ಲದೆ ಪ್ರತಿಯೊಂದು ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳತ್ತಾನೆ.

-ಒಬ್ಬ ವ್ಯಕ್ತಿಯು ಮೊದಲ ಬಾರಿ ತಂದೆಯಾದಾಗ, ಅವನು ಕೆಲವು ವಿಷಯಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾನೆ, ಆದರೆ ನಿಮ್ಮ ಆಸಕ್ತಿಯನ್ನು ನಿಮ್ಮ ಮಗನೊಂದಿಗೆ ಹಂಚಿಕೊಳ್ಳಬಹುದು. ಉದಾಹರಣೆಗೆ ಅಡುಗೆ ಮಾಡುವುದು, ವಿಡಿಯೋ ಗೇಮ್ ಆಡುವುದು, ಕಥೆ ಹೇಳುವುದು ಮತ್ತು ಕೇಳುವುದು ಹೀಗೆ ಇವೆಲ್ಲವೂ ಮಕ್ಕಳಿಗೆ ಸ್ಫೂರ್ತಿ ನೀಡುತ್ತದೆ. ಅದೇ ಸಮಯದಲ್ಲಿ, ಅವರು ತಮ್ಮ ಅಭಿಪ್ರಾಯಗಳನ್ನು ಇತರರಿಗೆ ಪ್ರಸ್ತುತಪಡಿಸಲು ಕಲಿಯುತ್ತಾರೆ ಮತ್ತು ಮಕ್ಕಳು ಮಾತನಾಡುವ ಶೈಲಿ ಮತ್ತು ಭಾಷೆ ಕೂಡ ಬೆಳೆಯುತ್ತದೆ ಮುಂದಿನ ಅವರ ಭವಿಷ್ಯವು ಉಜ್ವಲವಾಗಿರುತ್ತದೆ.

Leave a Reply

Your email address will not be published. Required fields are marked *

Latest News