ತುರುವೇಕೆರೆ, ತಾಲೂಕಿನ ಮಾಯಸಂದ್ರ ಟಿ ಬಿ ಕ್ರಾಸ್ ಬಳಿ ಇರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖ ಮಠದ ಜಾಗದಲ್ಲಿ ಶ್ರೀ ಆದಿಶಕ್ತಿ ಮಾತೆಯರ ವಾನಪ್ರಸ್ತಾಶ್ರಮ ಹಾಗೂ ಶ್ರೀ ಆದಿಚುಂಚನಗಿರಿ ಬೆಟ್ಟದ ತಪ್ಪಲಿನಲ್ಲಿರುವ ಮಠದ ಪುಷ್ಪ ಕಾಶಿಯಲ್ಲಿ ಪುರುಷರಿಗಾಗಿ ವಾನಪ್ರಸ್ತಾಶ್ರಮ ನೂತನವಾಗಿ ಆರಂಭಗೊಳ್ಳುತ್ತಿರುವ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ಪೂರ್ಣ ಕುಂಭದೊಂದಿಗೆ ಆಗಮಿಸಿದ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿಯವರು ಗುದ್ದಲಿ ಪೂಜೆ ಮಾಡಿದರು,

ಇದರ ಕಲ್ಯಾಣಕ್ಕಾಗಿ ಟಿಬಿ ಕ್ರಾಸ್ ಬಳಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಗಣಪತಿ ಹೋಮ ಹವನ ಹಾಗೂ ಸಮುದಾಯ ಭವನದ ಆವರಣದಲ್ಲಿ ವಿವಿಧ ಬಗೆಯ ಸಸ್ಯಗಳನ್ನು ನೆಡುವುದರ ಮೂಲಕ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇನ್ನೂ ಶ್ರೀ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಮಾಯಸಂದ್ರ ಶಾಖಾ ಮಠವನ್ನು ಮುನ್ನಡೆಸುತ್ತಿದ್ದು ಮುಂದುವರೆದು ಮಾತನಾಡಿದ ಶ್ರೀಗಳು ಈ ಭಾಗದಲ್ಲಿರುವ ಶಾಖ ಮಠದಲ್ಲಿ ಕೃಷಿಗೆ ಸಂಬಂಧಪಟ್ಟಂತೆ ಅಗ್ರಿಕಲ್ಚರ್ ಕಾಲೇಜು ನಿರ್ಮಾಣ ಹಂತದಲ್ಲಿದ್ದು ಇನ್ನೇನು ಕೆಲವೇ ದಿನದಲ್ಲಿ ಲೋಕಾರ್ಪಣೆಗೊಳ್ಳಲಿದೆ ಒಟ್ಟಾರೆ ಮುಂದಿನ ಕೆಲವೇ ತಿಂಗಳಲ್ಲಿ ನೂತನವಾಗಿ ನಿರ್ಮಾಣದ ಕೊನೆಯ ಹಂತದಲ್ಲಿರುವ ಅಗ್ರಿಕಲ್ಚರ್ ಕಾಲೇಜು ಜೊತೆಗೆ ಈಗ ತಾನೆ ಶಂಕುಸ್ಥಾಪನೆಗೊಂಡ ಮಾತೆಯರ ಹಾಗೂ ಪುರುಷರ ವಾನಪ್ರಸ್ತಾಶ್ರಮಕ್ಕೆ ಕೂಡ ಕೆಲವೇ ತಿಂಗಳಲ್ಲಿ ನಿರ್ಮಾಣ ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದರು, ಇನ್ನು ಈ ಕಾರ್ಯಕ್ರಮದಲ್ಲಿ ಮಠದ ಭಕ್ತಾದಿಗಳು ತಾಲೂಕಿನ ಮುಖಂಡರುಗಳು ಭಾಗಿಯಾಗಿದ್ದು ಹಲವಾರು ಭಕ್ತಾದಿಗಳು ಶ್ರೀ ಮಠದ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ವಾನಪ್ರಸ್ತಾಶ್ರಮಕ್ಕೆ ದೇಣಿಗೆಯನ್ನು ಸಹ ನೀಡಿದರು.

ಇದೇ ಸಂದರ್ಭದಲ್ಲಿ ಮಠದ ಶ್ರೀ ಚೈತನ್ಯನಾಥ ಸ್ವಾಮೀಜಿ, ಪ್ರೊ ಪುಟ್ಟರಂಗಯ್ಯ,ನಾಗಮಂಗಲ ತಾಲೂಕಿನ ಮಾಜಿ ಶಾಸಕರಾದ ಸುರೇಶ್ ಗೌಡ, ತುರುವೇಕೆರೆ ತಾಲೂಕಿನ ತೆಂಗು ಮತ್ತು ಅಡಿಕೆ ಬೆಳೆಗಾರ ಸಂಘದ ಅಧ್ಯಕ್ಷ ಎನ್ ಆರ್ ಜಯರಾಮ್, ಕಾಂಗ್ರೆಸ್ ಮುಖಂಡರಾದ ಸುಬ್ರಮಣಿ ಶ್ರೀಕಂಠೇಗೌಡ, ಚೌದ್ರಿ ರಂಗಪ್ಪ, ಕೆಂಪಯ್ಯ, ಕೃಷ್ಣೇಗೌಡ, ಧನಪಾಲ್, ಹಾಗೂ ಎಸ್ ಬಿ ಜಿ ವಿದ್ಯಾಲಯದ ಪ್ರಾಂಶುಪಾಲರುಗಳು, ಶಿಕ್ಷಕ ವರ್ಗದವರು, ವಿದ್ಯಾರ್ಥಿಗಳು, ಭಕ್ತಾದಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು,

Leave a Reply

Your email address will not be published. Required fields are marked *

Latest News