ತೆಲಂಗಾಣ ಸರ್ಕಾರ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುವುದಾಗಿ ಹೇಳಿದೆ. ಪಂಜಾಬ್​ನವರು ನವೆಂಬರ್​ನಿಂದ ಕೊಡುತ್ತೇವೆ ಅಂತಾ ಹೇಳಿದ್ದಾಗಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಕರ್ನಾಟಕಕ್ಕೆ ತೆಲಂಗಾಣದಿಂದ ಭತ್ತ, ಛತ್ತೀಸಗಢದಿಂದ ಅಕ್ಕಿ: ಸಿದ್ದರಾಮಯ್ಯ

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ತೆಲಂಗಾಣ ಸರ್ಕಾರ ರಾಜ್ಯಕ್ಕೆ ಭತ್ತ ಕೊಡುವುದಾಗಿ ಹೇಳಿದ್ದಾರೆ. ಛತ್ತೀಸ​ಗಢ (Chhattisgarh)​ ಸರ್ಕಾರ ಕರ್ನಾಟಕಕ್ಕೆ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುವುದಾಗಿ ಹೇಳಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಂಜಾಬ್​ ಸರ್ಕಾರವೂ ನವೆಂಬರ್​ ತಿಂಗಳಿನಿಂದ ಕೊಡುವುದಾಗಿ ತಿಳಿಸಿದೆ. NCCF ಕೇಂದ್ರಿಯ ಭಂಡಾರ, ನಫೆಡ್​ನಿಂದ ಕೊಟೆಷನ್ ಕೇಳಿದ್ದೇವೆ. ಅವರು ಕೊಟ್ಟ ಬಳಿಕ ದರ, ಗುಣಮಟ್ಟ, ಪ್ರಮಾಣ ನೋಡಿ ಮುಂದಿನ ತೀರ್ಮಾನ ಮಾಡಲಾಗುವುದು ಎಂದರು.

ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ನೀಡಲು ಬೇರೆ ರಾಜ್ಯಗಳ ಸಂಪರ್ಕ ಮಾಡಲಾಗುತ್ತಿದೆ. ರಾಜ್ಯಕ್ಕೆ 2 ಲಕ್ಷದ 29 ಸಾವಿರ ಮೆಟ್ರಿಕ್​ ಟನ್ ಅಕ್ಕಿ ಬೇಕು. ಪಂಜಾಬ್​ನವರು ಬಳಿ ಸ್ಟಾಕ್ ಇಲ್ಲ, ಆಂಧ್ರಪ್ರದೇಶದವರ ಬಳಿಯೂ ಅಕ್ಕಿ ಸಿಗುತ್ತಿಲ್ಲ. ಹೀಗಾಗಿ ಸರ್ಕಾರಿ ಸಂಸ್ಥೆಗಳ ಕೊಟೇಷನ್ ಕರೆದಿದ್ದೇವೆ. ಇವತ್ತು ಮೂರು ಗಂಟೆಗೆ ಮೆಗೋಸಿಯೇಷನ್ ಇದೆ. ದರ ಎಷ್ಟು‌ ಏನು ಅನ್ನೋದರ ಬಗ್ಗೆ ಚರ್ಚಿಸಲು ಇಂದು 3 ಗಂಟೆಗೆ ಸಭೆ ಕರೆದಿದ್ದೇವೆ. ರಾಗಿ, ಜೋಗಿ ನಮ್ಮ ಬಳಿ ಇದೆ. ಆದರೆ ಇವು ಎರಡು ತಿಂಗಳಿಗೆ ಮಾತ್ರ ಸಾಕಾಗುತ್ತದೆ ಎಂದರು.

ಮಳೆಯಿಂದಾಗುವ ಸಮಸ್ಯೆ ಎದುರಿಸುವ ಸಾಮರ್ಥ್ಯ ರಾಜ್ಯ ಸರ್ಕಾರಕ್ಕೆ ಇದೆ. ರಾಜ್ಯದಲ್ಲಿ ಬಿತ್ತನೆ ಕೆಲವೆಡೆ ಶುರುವಾಗಿದೆ, ಕೆಲವು ಕಡೆಯಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ‌ ಎಂದರು. ಮುಂಗಾರು ಮಳೆ ಹಿನ್ನೆಲೆ ಮುಂಜಾಗೃತಾ ಕ್ರಮ ಹಾಗೂ ಬಿತ್ತನೆಗೆ ಗುಣಮಟ್ಟದ ಬೀಜ ನೀಡುವಂತೆ ಸಿಎಂ ಮತ್ತು ಡಿಸಿಎಂ ಈಗಾಗಲೇ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರು ನೀಡಿದ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು, ಪ್ರತಿಭಟನೆ ಮಾಡಲು ಸ್ವಾತಂತ್ರ್ಯ ಇದೆ, ಆದರೆ ಪ್ರತಿಭಟಿಸಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಈಗಾಗಲೇ ನಾವು ಒಂದು ಯೋಜನೆಯನ್ನು ಜಾರಿ ಮಾಡಿದ್ದೇವೆ. ಜುಲೈ 1ರಿಂದ ಗೃಹಜ್ಯೋತಿ ಯೋಜನೆ ಜಾರಿಯಾಗಲಿದೆ. ಕೇಂದ್ರ ಸರ್ಕಾರ ಅಕ್ಕಿ ನೀಡದಿದ್ದರಿಂದ ಅನ್ನಭಾಗ್ಯ ವಿಳಂಬವಾಗುತ್ತಿದೆ ಎಂದರು.

Leave a Reply

Your email address will not be published. Required fields are marked *

Latest News