ಸವದತ್ತಿ ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ 1.96ಕೋಟಿ ಭಕ್ತರ ಕಾಣಿಕೆ ಸಂಗ್ರಹವಾಗಿದ್ದು ನಿಜಕ್ಕೂ ಅಚ್ಚರಿಯ ಸಂಗತಿ, ಕೇವಲ 50ದಿನಗಳ ಅಂತರದಲ್ಲಿ ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಹರಿದುಬಂದ ಭಕ್ತರ ದೇಣಿಗೆ ಅಪಾರ, ಈಗಾಗಲೇ ಬೆಳಗಾವಿ ಜಿಲ್ಲೆಯ ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು ಅಲ್ಲಿಂದ ಇಲ್ಲಿಯವರೆಗೆ ಅಂದರೇ ಏಪ್ರಿಲ್‌ 1ರಿಂದ ಮೇ 20ರ ಅವಧಿಯಲ್ಲಿ ಭಕ್ತರು ನೀಡಿದ ಕಾಣಿಕೆಯ ಎಣಿಕೆ ಬುಧುವಾರ ರಾತ್ರಿ ಮುಕ್ತಾಯಗೊಂಡಿದೆ .

ಭಕ್ತರು ಯಾವ ಯಾವ ರೂಪದಲ್ಲಿ ಕಾಣಿಕೆ ಸಲ್ಲಿಸಿದ್ದಾರೆ?ಇಲ್ಲಿದೆ ಮಾಹಿತಿ;

50ದಿನಗಳಲ್ಲಿ ಒಟ್ಟು ₹1.96 ಕೋಟಿ ಕಾಣಿಕೆ‌ ಸಂಗ್ರಹ! ಅದರಲ್ಲಿ ₹1.71 ಕೋಟಿ ನಗದು, ₹20.44 ಲಕ್ಷ ಮೌಲ್ಯದ ಚಿನ್ನಾಭರಣ, ₹4.44 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸಂಗ್ರಹ ಶಕ್ತಿಯೋಜನೆಯಿಂದ ಯಲ್ಲಮ್ಮನ ಗುಡ್ಡಕ್ಕೆ ಅಪಾರ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಹೆಚ್ಚಾಗಿದ್ದು ದಾಖಲೆ ಪ್ರಮಾಣದಲ್ಲಿ ದೇಣಿಗೆ ಸಂಗ್ರಹವಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿಯಾದ ಎಸ್ ಪಿಬಿ ಮಹೇಶ ಅವರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

Latest News