ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚನಬಲೆಯ ಸಮಾಜ ಸೇವಕರಾದ ಡಾ. ಎಂ. ವಿ. ಸದಾಶಿವ ಕನ್ನಡ ರಾಜ್ಯೋತ್ಸವ ದಿನದಂದು ಪದವಿ ವಿದ್ಯಾರ್ಥಿನಿಗೆ ಉಜ್ವಲ ಭವಿಷ್ಯ ನಿರ್ಮಿಸಲು ಪಣತೊಟ್ಟು, ಆರ್ಥಿಕವಾಗಿ ಧನ ಸಹಾಯ ಮಾಡಿ ಶುಭ ಹಾರೈಸಿದ್ದಾರೆ.
ಕಳೆದ ಇಪ್ಪತ್ತು ವರ್ಷಗಳಿಂದ ಮಂಚನಬಲೆ, ಚಿಕ್ಕಬಳ್ಳಾಪುರ ಮಾತ್ರವಲ್ಲದೇ ರಾಜ್ಯಾದ್ಯಂತ ಕಷ್ಟ ಎಂದವರ ಕೈ ಹಿಡಿಯುವ ಮೂಲಕ ಸಹಾಯ ಮಾಡಿ, ನೊಂದವರ ಬಾಳಿನ ಬೆಳಕಾದ ಧೀಮಂತ ವ್ಯಕ್ತಿ ಆಗಿದ್ದಾರೆ. ಪದವಿ ವಿದ್ಯಾರ್ಥಿಗ ತಮ್ಮ ಸಹಾಯವನ್ನು ಯಾರಿಗೂ ಗೊತ್ತಿಲ್ಲದ ಹಾಗೆ ಮಾಡುವುದು ಇವರ ಉದೇಶ ವಾಗಿದ್ದೆ.
ತಮ್ಮ ಅಮೂಲ್ಯವಾದ ಜೀವನವನ್ನು ಎಲ್ಲ ಕಡುಬಡವರಿಗೂ ಸೇವೆಗಾಗಿ ಮುಡುಪಾಗಿಟ್ಟಿದ್ದಾರೆ, ಸಹಾಯ ಮಾಡುವುದೇ ಒಂದು ಜೀವನ ಎಂಬ ತತ್ವವನ್ನು ನಂಬಿಕೊಡು ಸರ್ವಸ್ವವನ್ನು ಸಮಾಜಕ್ಕೆ ಅರ್ಪಿಸಿರುವ ಸದಾಶಿವ ಅವರ ನಿಜಕ್ಕೂ ಒಂದು ಅದ್ಭುತ ವ್ಯಕ್ತಿ ಆಗಿದ್ದಾರೆ.