ಭೂ ವಿಜ್ಞಾನಿ ಪ್ರತಿಮಾ ಅವರನ್ನು ಕೊಲೆಗೈದ ಆರೋಪಿ ಮಾಜಿ ಕಾರು ಚಾಲಕ ಕಿರಣ್ ಗೆ ನ್ಯಾಯಾಲಯ 10 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ಶನಿವಾರ ಪ್ರತಿಮಾ ಅವರನ್ನು ಮನೆಯಲ್ಲಿ ಬರ್ಬರವಾಗಿ ಕೊಲೆಗೈದಿದ್ದ ಕಿರಣ್ ನನ್ನು ಬೆಳಿಗ್ಗೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
2ನೇ ಎಸಿಎಂಎಂ ನ್ಯಾಯಾಲಯ ಕಿರಣ್ ನನ್ನು ಪೊಲೀಸ್ ವಶಕ್ಕೆ ನೀಡಿ ಆದೇಶ ನೀಡಿದೆ. ಕಿರಣ್ ತನ್ನನ್ನು ಕೆಲಸದಿಂದ ತೆಗೆದು ಹಾಕಿದ ಸಿಟ್ಟಿಗೆ ಕೊಲೆ ಮಾಡಿದ್ದಾಗಿ ಪ್ರಾಥಮಿಕ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ.