ನಗರ‌ ಪೊಲೀಸ್ ಇಲಾಖೆ ಅಧಿಕಾರಿಗಳೊಡನೆ ಇಂದು ಸಭೆ ಮಾಡಿರುವ ಡಿಜಿ-ಐಜಿಪಿ ಅಲೋಕ್ ಮೋಹನ್ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸೋಷಿಯಲ್ ಮೀಡಿಯಾದಲ್ಲಿ ಬರುವ ಸುಳ್ಳು ಸುದ್ದಿಗಳ ಬಗ್ಗೆ ವಿಶೇಷ ನಿಗಾಕ್ಕೆ ಸೂಚಿಸಲಾಗಿದೆ ಎಂದಿದ್ದಾರೆ.

ಬೆಂಗಳೂರು: ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸೋಷಿಯಲ್ ಮೀಡಿಯಾದಲ್ಲಿ ಬರುವ ಸುಳ್ಳು ಸುದ್ದಿಗಳ ಬಗ್ಗೆ ವಿಶೇಷ ನಿಗಾಕ್ಕೆ ಸೂಚಿಸಲಾಗಿದೆ ಎಂದು ಡಿಜಿ-ಐಜಿಪಿ ಅಲೋಕ್ ಮೋಹನ್  ಹೇಳಿದರು. ನಗರ‌ ಪೊಲೀಸ್ ಇಲಾಖೆ ಅಧಿಕಾರಿಗಳೊಡನೆ ಸಭೆ ಮುಕ್ತಾಯ ಬಳಿಕ ಮಾತನಾಡಿದ ಅವರು, ಕಾನೂನು‌ ಸುವ್ಯವಸ್ಥೆ, ಟ್ರಾಫಿಕ್‌ ಸುಧಾರಣೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

ದೂರುಗಳಿಗೆ ಸ್ಪಂದನೆ

ಸಾರ್ವಜನಿಕರ ಜತೆ ಪೊಲೀಸರು ನಡವಳಿಕೆ ಉತ್ತಮವಾಗಿರಬೇಕು. ದೂರುಗಳು ಬಂದಾಗ ಕೂಡಲೇ ಪರಿಹರಿಸುವ ಕೆಲಸವಾಗಬೇಕು. ಈಗಾಗಲೇ ಎಲ್ಲಾ ಜಿಲ್ಲೆಗಳ ಎಸ್​ಪಿಗಳಿಗೆ ನಿರ್ದೇಶನ‌ ನೀಡಲಾಗಿದೆ. ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಫೋನ್ ನಂಬರ್​ ಹಾಕದ ಅಧಿಕಾರಿಗಳ ವಿರುದ್ಧ ಕ್ರಮ

ಠಾಣೆಗಳ ಮುಂದೆ ಅಧಿಕಾರಿಗಳ ದೂರವಾಣಿ ಸಂಖ್ಯೆ ಹಾಕುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಪೊಲೀಸ್ ಅಧಿಕಾರಿಗಳ ದೂರವಾಣಿ ಸಂಖ್ಯೆ ಅಳವಡಿಸಲು ಸೂಚನೆ ನೀಡಲಾಗಿದೆ. ಕೆಲ ಠಾಣೆಗಳಲ್ಲಿ ಫೋನ್​ ನಂಬರ್ ಹಾಕದಿರುವ ಬಗ್ಗೆ ದೂರುಗಳಿವೆ. ಫೋನ್ ನಂಬರ್​ ಹಾಕದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

ಒಂದು ಠಾಣೆಗೆ ದಿಢೀರ್​ ಭೇಟಿ: ಹಿರಿಯ ಅಧಿಕಾರಿಗಳಿಗೆ ಸೂಚನೆ

ಬುಧವಾರ ಕೂಡ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದ ಡಿಜಿ-ಐಜಿಪಿ ಅಲೋಕ್ ಮೋಹನ್​  ಕಮಿಷನರ್​, ಐಜಿಪಿ, ಡಿಐಜಿಪಿ, ಎಸ್​​ಪಿಗಳಿಗೆ ಪ್ರತಿದಿನ ನಿಮ್ಮ ವ್ಯಾಪ್ತಿಯ ಒಂದು ಠಾಣೆಗೆ ದಿಢೀರ್​ ಭೇಟಿ ನೀಡಬೇಕು ಎಂದಿದ್ದಾರೆ. ಆ ಮೂಲಕ ಪೊಲೀಸರ ಕಾರ್ಯವೈಖರಿ ಪರಿಶೀಲಿಸುವಂತೆ ಸೂಚನೆ ನೀಡಿದ್ದರು.

Leave a Reply

Your email address will not be published. Required fields are marked *