ಮೀಟೂ ಪ್ರಕರಣದಲ್ಲಿ ಪೊಲೀಸರು ಮೂರು ವರ್ಷ ತನಿಖೆ ನಡೆಸಿದರು. ಆದರೆ, ಸೂಕ್ತ ಸಾಕ್ಷಿಗಳು ಸಿಕ್ಕಿಲ್ಲ. ಹಾಗಾಗಿ ಪೊಲೀಸರು ಕೋರ್ಟ್​ಗೆ ಬಿ-ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಶ್ರುತಿ ಹರಿಹರನ್ ಪ್ರಶ್ನೆ ಮಾಡಿದ್ದರು.

Sruthi Hariharan: ಮತ್ತೆ ಮುನ್ನೆಲೆಗೆ ಬಂದ ಮೀಟೂ ಕೇಸ್​; ಬಿ ರಿಪೋರ್ಟ್​ ಚಾಲೆಂಜ್ ಮಾಡಿದ ಶ್ರುತಿ ಹರಿರಹರನ್​ಗೆ ನೋಟಿಸ್

ಶ್ರುತಿ ಹರಿರಹರನ್-ಅರ್ಜುನ್ ಸರ್ಜಾ

2018ರಲ್ಲಿ ಭಾರಿ ಸದ್ದು ಮಾಡಿದ್ದ ಮೀಟೂ ಆಂದೋಲನದಲ್ಲಿ ಅರ್ಜುನ್​ ಸರ್ಜಾ (Arjun Sarja) ಮೇಲೆ ನಟಿ ಶ್ರುತಿ ಹರಿಹರನ್ ಅವರು ಕೆಲವು ಗಂಭೀರ ಆರೋಪಗಳನ್ನು ಹೊರಿಸಿದ್ದರು. ನಟನಿಂದ ಲೈಂಗಿಕ ಕಿರುಕುಳ ಆಗಿದೆ ಎಂದು ಶ್ರುತಿ ಹರಿಹರನ್ (Sruthi Hariharan)​ ಆರೋಪಿಸಿದ್ದರು. ಈ ಸಂಬಂಧ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿತ್ತು. ಆದರೆ, ಪೊಲೀಸರಿಗೆ ಸಾಕ್ಷ್ಯ ಸಿಗದ ಕಾರಣ ಕೋರ್ಟ್​ನಲ್ಲಿ ಬಿ ರಿಪೋರ್ಟ್​ ಸಲ್ಲಿಕೆ ಮಾಡಿದ್ದರು. ಇದನ್ನು ಶ್ರುತಿ ಹರಿಹರನ್ ಚಾಲೆಂಜ್ ಮಾಡಿದ್ದರು. ಅವರಿಗೆ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್​ನಿಂದ ನೋಟಿಸ್​ ಜಾರಿ ಆಗಿದೆ. ಸಾಕ್ಷ್ಯ ಒದಗಿಸುವಂತೆ ಸೂಚಿಸಲಾಗಿದೆ.

ಮೀಟೂ ಪ್ರಕರಣದಲ್ಲಿ ಪೊಲೀಸರು ಮೂರು ವರ್ಷ ತನಿಖೆ ನಡೆಸಿದರು. ಆದರೆ, ಸೂಕ್ತ ಸಾಕ್ಷಿಗಳು ಸಿಕ್ಕಿಲ್ಲ. ಹಾಗಾಗಿ ಪೊಲೀಸರು ಕೋರ್ಟ್​ಗೆ ಬಿ-ರಿಪೋರ್ಟ್ ಸಲ್ಲಿಸಿದ್ದರು. ಪ್ರಕರಣವೊಂದರ ತನಿಖೆ ಸಮಯದಲ್ಲಿ ಆರೋಪಿಯನ್ನು ವಿಚಾರಣೆಗೆ ಗುರಿಪಡಿಸಲು ಅಗತ್ಯ ಇರುವಷ್ಟು ಸಾಕ್ಷ್ಯಾಧಾರಗಳು ಸಿಗಲಿಲ್ಲ ಎಂದು ವಿಚಾರಣಾ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸುವ ಅಂತಿಮ ವರದಿಯೇ ಬಿ ರಿಪೋರ್ಟ್‌. ಇದನ್ನು ಶ್ರುತಿ ಹರಿಹರನ್ ಪ್ರಶ್ನೆ ಮಾಡಿದ್ದರು.

ಶ್ರುತಿ ಹರಿಹರನ್ ಅವರು ಬಿ-ರಿಪೋರ್ಟ್​ನ ಒಪ್ಪಿಲ್ಲ. ಇದನ್ನು ಅವರು ಪ್ರಶ್ನೆ ಮಾಡಿದ್ದಾರೆ. ಶ್ರುತಿ ಅವರ ಮೇಲ್ಮನವಿಯನ್ನು ಕೋರ್ಟ್ ಒಪ್ಪಿದೆ. ಪೊಲೀಸರಿಗೆ ಸಾಕ್ಷ್ಯಾಧಾರ ಒದಗಿಸುವಂತೆ ಶ್ರುತಿಗೆ ನೋಟಿಸ್ ನೀಡಿದೆ. ಒಂದೊಮ್ಮೆ ಶ್ರುತಿ ಹರಿಹರನ್ ಸಾಕ್ಷ್ಯ ನೀಡದಿದ್ದರೆ ಬಿ-ರಿಪೋರ್ಟ್​ನ ಕೋರ್ಟ್ ಒಪ್ಪಲಿದೆ.

ಅರುಣ್​ ವೈದ್ಯನಾಥನ್​ ನಿರ್ದೇಶನದ ‘ವಿಸ್ಮಯ’ ಸಿನಿಮಾದಲ್ಲಿ ಶ್ರುತಿ ಹರಿಹರನ್​ ಮತ್ತು ಅರ್ಜುನ್​ ಸರ್ಜಾ ಅವರು ಗಂಡ-ಹೆಂಡತಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರೀಕರಣದ ವೇಳೆ ಅರ್ಜುನ್​ ಸರ್ಜಾ ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಶ್ರುತಿ ಹರಿಹರನ್​ ಆರೋಪ ಹೊರಿಸಿದ ಬಳಿಕ ಇಡೀ ಸ್ಯಾಂಡಲ್​ವುಡ್​ನಲ್ಲಿ ವಿವಾದದ ಬೆಂಕಿ ಹೊತ್ತಿಕೊಂಡಿತ್ತು. ಕೆಲವರು ಶ್ರುತಿ ಪರವಾಗಿ ಮಾತನಾಡಿದ್ದರೆ, ಅನೇಕರು ಅರ್ಜುನ್​ ಸರ್ಜಾಗೆ ಬೆಂಬಲ ನೀಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಬಗ್ಗೆ ಸಭೆ ನಡೆಸಲಾಗಿತ್ತು. ಅಂಬರೀಷ್​ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜಿ ಸಂಧಾನಕ್ಕೆ ಅರ್ಜುನ್​ ಸರ್ಜಾ ಮತ್ತು ಶ್ರುತಿ ಹರಿಹರನ್​ ಒಪ್ಪಿರಲಿಲ್ಲ.

Leave a Reply

Your email address will not be published. Required fields are marked *

Latest News