ಕೇದಾರನಾಥ ದೇಗುಲದಲ್ಲಿ ದೇವರ ದರ್ಶನಕ್ಕೆ ಕಾದಿದ್ದ ಯಾತ್ರಾರ್ಥಿಗಳಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಚಹಾ ವಿತರಿಸುವ ಮೂಲಕ ಗಮನ ಸೆಳೆದಿದ್ದಾರೆ.
ರಾಹುಲ್ ಗಾಂಧಿ ಮೂರು ದಿನಗಳ ಉತ್ತರಾಖಂಡ ಪ್ರವಾಸಕ್ಕೆ ತೆರಳಿದ್ದು, ಕೇದಾರನಾಥ ದೇವಾಲಯದ ದೇವರ ದರ್ಶನಕ್ಕೆ ಭೇಟಿಗೆ ಸರದಿಯಲ್ಲಿ ನಿಂತಿದ್ದ ಭಕ್ತರಿಗೆ ಚಹಾ ವಿತರಿಸಿದರು.
ಒಬ್ಬ ಜನಪ್ರಿಯ ನಾಯಕ ಸಾರ್ವಜನಿಕರೊಂದಿಗೆ ಮಾತನಾಡುವುದನ್ನು ಕಂಡು ಆಶ್ಚರ್ಯಚಕಿತರಾದ ಭಕ್ತರು ಸೆಲ್ಫಿಗಾಗಿ ಮನವಿ ಮಾಡಿದರು. ಈ ವೇಳೆ ರಾಗಾ ಅವರು ಕೂಡ ಭಕ್ತರ ಮನವಿಯನ್ನು ತಿರಸ್ಕರಿಸಿದೇ ಸೆಲ್ಫಿ ನೀಡಿದರು.
ಸಾರ್, ನಾವು ನಿಮ್ಮನ್ನು ಟಿವಿಯಲ್ಲಿ ನೋಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ನಾವು ನಿಮ್ಮನ್ನು ನಿಜವಾಗಿ ನೋಡುತ್ತಿದ್ದೇವೆ. ನಾನು ನಿಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಬಹುದೇ ಎಂದು ಭಕ್ತರೊಬ್ಬರು ಕೇಳಿದಾಗ ರಾಹುಲ್ ಹಸನ್ಮುಖದಿಂದ ಸಹಕರಿಸಿದ್ದಾರೆ.
ನವೆಂಬರ್ 7 ರಂದು ಛತ್ತೀಸ್‍ಗಢ ಮತ್ತು ಮಿಜೋರಾಂನಲ್ಲಿ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ಕೇದಾರನಾಥಕ್ಕೆ ಬೇಟಿ ನೀಡಿದ್ದು, ಕುತೂಹಲ ಹುಟ್ಟಿಸಿದೆ.