ಕಾಂಗ್ರೆಸ್​ನ ನಾಯಕ ರಾಹುಲ್ ಗಾಂಧಿ(Rahul Gandhi) ರಾತ್ರೋ ರಾತ್ರಿ ಮೆಕ್ಯಾನಿಕ್ ಆಗಿದ್ದಾರೆ ಅಂದುಕೊಂಡ್ರಾ ಇಲ್ಲ, ದೆಹಲಿಯ ಕರೋಲ್​ಬಾಗ್​ನಲ್ಲಿ ಮೋಟಾರ್ ಸೈಕಲ್ ಮೆಕ್ಯಾನಿಕ್​ಗಳ ಕಾರ್ಯಾಗಾರಕ್ಕೆ ಭೇಟಿ ನೀಡಿದ್ದರು, ಅವರೊಂದಿಗೆ ಮಾತುಕತೆ ನಡೆಸಿ ಬೈಕ್​ ಫಿಕ್ಸ್​ ಮಾಡುವುದು ಹೇಗೆ ಎಂಬುದನ್ನು ಕಲಿತರು ಆಗ ಕ್ಲಿಕ್ಕಿಸಿದ ಚಿತ್ರವಿದು.

Rahul Gandhi: ಏಕಾಏಕಿ ಮೆಕ್ಯಾನಿಕ್ ಆದ ರಾಹುಲ್ ಗಾಂಧಿ

ರಾಹುಲ್ ಗಾಂಧಿ

ಕಾಂಗ್ರೆಸ್​ನ ನಾಯಕ ರಾಹುಲ್ ಗಾಂಧಿ(Rahul Gandhi) ರಾತ್ರೋ ರಾತ್ರಿ ಮೆಕ್ಯಾನಿಕ್ ಆಗಿದ್ದಾರೆ ಅಂದುಕೊಂಡ್ರಾ ಇಲ್ಲ, ದೆಹಲಿಯ ಕರೋಲ್​ಬಾಗ್​ನಲ್ಲಿ ಮೋಟಾರ್ ಸೈಕಲ್ ಮೆಕ್ಯಾನಿಕ್​ಗಳ ಕಾರ್ಯಾಗಾರಕ್ಕೆ ಭೇಟಿ ನೀಡಿದ್ದರು, ಅವರೊಂದಿಗೆ ಮಾತುಕತೆ ನಡೆಸಿ ಬೈಕ್​ ಫಿಕ್ಸ್​ ಮಾಡುವುದು ಹೇಗೆ ಎಂಬುದನ್ನು ಕಲಿತರು ಆಗ ಕ್ಲಿಕ್ಕಿಸಿದ ಚಿತ್ರವಿದು.

ಕಾಂಗ್ರೆಸ್​ ರಾಹುಲ್ ಅವರ ಚಿತ್ರಗಳನ್ನು ಹಂಚಿಕೊಂಡಿದ್ದು, ಈ ಕೈಗಳು ಭಾರತವನ್ನು ನಿರ್ಮಿಸುತ್ತವೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಬಟ್ಟೆಗಳ ಮೇಲಿನ ಗ್ರೀಸ್​ ನಮ್ಮ ಹೆಮ್ಮೆ ಮತ್ತು ಸ್ವಾಭಿಮಾನ. ಅವರನ್ನು ಹುರಿದುಂಬಿಸುವ ಕೆಲಸವನ್ನು ಒಬ್ಬ ಸಾರ್ವಜನಿಕ ನಾಯಕ ಮಾತ್ರ ಮಾಡಬಲ್ಲ ಎಂದು ಬರೆಯಲಾಗಿದೆ.

2024ರ ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಎಲ್ಲೆಡೆ ಕಾಂಗ್ರೆಸ್​, ಬಿಜೆಪಿ ಚುನಾವಣಾ ಪ್ರಚಾರಗಳನ್ನು ಆರಂಭಿಸಿವೆ. ಪ್ರತಿಪಕ್ಷಗಳಅಭಿಪ್ರಾಯಗಳಿಗೆ ಮುಖ್ಯವಾಹಿನಿಯಲ್ಲಿ ಸರಿಯಾದ ಸ್ಥಾನ ಸಿಗದೇ ಇದ್ದಾಗ ಪ್ರಜಾಪ್ರಭುತ್ವ, ಅಧಿಕಾರಶಾಹಿಗಳ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವುದು ಅಗತ್ಯ ಎಂದು ಕಾಂಗ್ರೆಸ್​ನ ಸುಪ್ರಿಯಾ ಹೇಳಿದ್ದಾರೆ.

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಮೇ 23 ರಂದು ಟ್ರಕ್​ನಲ್ಲಿ ಚಲಿಸಿ ಅವರ ಸಮಸ್ಯೆಗಳನ್ನು ಆಲಿಸಿದ್ದರು. ಅವರು ಈ ಹಿಂದೆ ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಜತೆ ಸ್ಕೂಟರ್​ನಲ್ಲಿ ಕುಳಿತಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Leave a Reply

Your email address will not be published. Required fields are marked *