ನಟಿ ರೆಂಜುಶಾ ಮೆನನ್‌ ಆತ್ಮಹತ್ಯೆ ಘಟನೆ ನಡೆದು ಎರಡು ದಿನ ಕಳೆಯುವ ಮುನ್ನವೇ ಕೇರಳದಲ್ಲಿ ಮಲಯಾಳಂನ ಕಿರುತೆರೆ ನಟಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

8 ತಿಂಗಳ ಗರ್ಭಿಣಿಯಾಗಿದ್ದ ಡಾ. ಪ್ರಿಯಾ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಗುವನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ.

ಖಾಸಗಿ ಆಸ್ಪತ್ರೆಯಲ್ಲಿ ನಿಯಮಿತವಾಗಿ ತಪಾಸಣೆ ಮಾಡಿಕೊಳ್ಳುತ್ತಿದ್ದರು. ಆದರೆ ದಿಢೀರನೆ ಹೃದಯಾಘಾತದಿಂದ ಯಾಕೆ ಮೃತಪಟ್ಟರು ಎಂಬುದು ತಿಳಿದು ಬಂದಿಲ್ಲ.

Leave a Reply

Your email address will not be published. Required fields are marked *

Latest News