ಮಹಾರಾಷ್ಟ್ರದ ಮರಾಠವಾಡದಲ್ಲಿ ಬೆಚ್ಚಿಬೀಳಿಸುವ ವಿಚಾರವೊಂದು ಹೊರಬಿದ್ದಿದೆ. ಪ್ರತಿನಿತ್ಯ ಸರಾಸರಿ ಮೂರು ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಮರಾಠವಾಡದಲ್ಲಿ ಬೆಚ್ಚಿಬೀಳಿಸುವ ವಿಚಾರವೊಂದು ಹೊರಬಿದ್ದಿದೆ. ಪ್ರತಿನಿತ್ಯ ಸರಾಸರಿ ಮೂರು ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಕಳೆದ 5 ತಿಂಗಳಲ್ಲಿ 391 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಮರಾಠವಾಡದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ. ಬೀಡ್​ನಲ್ಲಿ ಈ ತಿಂಗಳು 98 ರೈತರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಹಾರಾಷ್ಟ್ರದಲ್ಲಿ 2015 ರಿಂದ 2018 ರವರೆಗೆ 12,006 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2017 ರಲ್ಲಿ 2,917 ಗೆ ಹೋಲಿಸಿದರೆ, ಈ ಸಂಖ್ಯೆ 2016 ರಲ್ಲಿ 3,063 ಮತ್ತು 2015 ರಲ್ಲಿ 3,263 ರಷ್ಟಿತ್ತು.

ರೈತರ ಆತ್ಮಹತ್ಯೆಗೂ ಅಧಿಕಾರದಲ್ಲಿರುವ ಪಕ್ಷಕ್ಕೂ ಸಂಬಂಧವಿಲ್ಲ ಎಂಬುದು ತಜ್ಞರ ಹೇಳಿಕೆ. ಬೇರೆ ಯಾವುದೇ ಪಕ್ಷ ಚುಕ್ಕಾಣಿ ಹಿಡಿದಿದ್ದರೂ ಪರಿಸ್ಥಿತಿ ಬದಲಾಗುತ್ತಿರಲಿಲ್ಲ. ಎಲ್ಲ ಸರಕಾರಗಳ ರೈತಪರ ನೀತಿಗಳು ತಪ್ಪಿ ಹೋಗಿವೆ. ತೆಲಂಗಾಣದಲ್ಲಿ ನೀಡುತ್ತಿರುವಂತೆ ರೈತರಿಗೆ ನಗದು ಸಹಾಯಧನ ಸಿಗಬೇಕು ಎಂದು ಹೇಳಿದ್ದಾರೆ.

2018 ರಲ್ಲಿ, ವಿದರ್ಭದ (11 ಜಿಲ್ಲೆಗಳಲ್ಲಿ 1,297 ಪ್ರಕರಣಗಳು) ಮತ್ತು ಮರಾಠವಾಡ (8 ಜಿಲ್ಲೆಗಳಲ್ಲಿ 947 ಪ್ರಕರಣಗಳು) ಬರಪೀಡಿತ ಹಿಂದುಳಿದ ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆಗಳ ಸರಣಿ ಮುಂದುವರೆದಿದೆ.

Leave a Reply

Your email address will not be published. Required fields are marked *