Kiccha 46 Teaser: ಸುದೀಪ್​ ಅವರ ಹೊಸ ಸಿನಿಮಾದ ಟೀಸರ್​ ರಿಲೀಸ್​ ದಿನಾಂಕವನ್ನು ಬಹಿರಂಗ ಮಾಡಲಾಗಿದೆ. ಜುಲೈ 2ರಂದು ಬೆಳಗ್ಗೆ 11.46ಕ್ಕೆ ‘ಕಿಚ್ಚ 46’ ಚಿತ್ರದ ಟೀಸರ್​ ಬಿಡುಗಡೆ ಆಗಲಿದೆ.

ನಟ ಕಿಚ್ಚ ಸುದೀಪ್​ (Kichcha Sudeep) ಅವರು ಹೊಸ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸುತ್ತಿರುವ 46ನೇ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಖತ್​ ಕೌತುಕ ಇದೆ. ಈ ಸಿನಿಮಾದ ಕೆಲಸಗಳು ಈಗ ಭರದಿಂದ ಸಾಗಿವೆ. ‘ವಿಕ್ರಾಂತ್​ ರೋಣ’ ಬಿಡುಗಡೆ ಆದ ಬಳಿಕ ಅವರು ದೀರ್ಘ ಗ್ಯಾಪ್​ ಪಡೆದುಕೊಂಡಿದ್ದರು. ನಂತರ ಕ್ರಿಕೆಟ್​ ಕಡೆಗೆ ಗಮನ ನೀಡಿದ್ದರು. ಬಹಳ ದಿನಗಳ ಬಳಿಕ ಅವರು 46ನೇ ಸಿನಿಮಾದ (Kiccha 46) ಕೆಲಸಗಳಿಗೆ ಚಾಲನೆ ನೀಡಿದರು. ಈಗ ಈ ಸಿನಿಮಾ ತಂಡದಿಂದ ಹೊಸ ಅಪ್​ಡೇಟ್​ ನೀಡಲಾಗಿದೆ. ಈ ಸಿನಿಮಾದ ಟೀಸರ್​ ರಿಲೀಸ್​ ದಿನಾಂಕವನ್ನು ಬಹಿರಂಗ ಮಾಡಲಾಗಿದೆ. ಜುಲೈ 2ರಂದು ಬೆಳಗ್ಗೆ 11.46ಕ್ಕೆ ‘ಕಿಚ್ಚ 46’ ಚಿತ್ರದ ಟೀಸರ್ (Kiccha 46 Teaser)​ ಬಿಡುಗಡೆ ಆಗಲಿದೆ.

ಈಗಾಗಲೇ ತಿಳಿದಿರುವಂತೆ ಕಿಚ್ಚ ಸುದೀಪ್​ ಅವರು ಮೂರು ಸಿನಿಮಾಗಳಿಗೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಆ ಪೈಕಿ ‘ವಿ ಕ್ರಿಯೇಷನ್ಸ್​’ನ ಕಲೈಪುಲಿ ಎಸ್​. ಧಾನು ಅವರು ನಿರ್ಮಾಣ ಮಾಡುತ್ತಿರುವ ಸಿನಿಮಾ ಮೊದಲು ಸೆಟ್ಟೇರಿದೆ. ಕೆಲವೇ ದಿನಗಳ ಹಿಂದೆ ಅವರು ಪ್ರೋಮೋ ಶೂಟಿಂಗ್​ನಲ್ಲಿ ಭಾಗಿ ಆಗಿದ್ದರು.

ಕಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ವಿ ಕ್ರಿಯೇಷನ್ಸ್​’ ಜೊತೆ ಕಿಚ್ಚ ಸುದೀಪ್​ ಅವರು ಕೈ ಜೋಡಿಸಿದ್ದು, ಅದ್ದೂರಿ ಬಜೆಟ್​ನಲ್ಲಿ ‘ಕಿಚ್ಚ 46’ ಚಿತ್ರ ನಿರ್ಮಾಣ ಆಗುತ್ತಿದೆ. ‘ಕಬಾಲಿ’, ‘ತುಪಾಕಿ’, ‘ಅಸುರನ್​’ ಮುಂತಾದ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಕಲೈಪುಲಿ ಎಸ್​. ಧಾನು ಅವರಿಗೆ ಇದೆ.

Leave a Reply

Your email address will not be published. Required fields are marked *