ಪ್ಯಾಲೆಸ್ತೇನ್ ನ ಗಾಜಾ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದ್ದು, ಕಳೆದ 24 ಗಂಟೆಯಲ್ಲಿ 704 ಮಂದಿ ಮೃತಪಟ್ಟಿದ್ದಾರೆ.
ಹಮಾಸ್ ಉಗ್ರರ ದಾಳಿ ಹಿನ್ನೆಲೆಯಲ್ಲಿ ಇಸ್ರೇಲ್ ಭಾರೀ ಕ್ಷಿಪಣಿ ದಾಳಿ ಆರಂಭಿಸಿದ್ದು, ಎರಡೂ ದೇಶಗಳ ನಡುವಿನ ಯುದ್ಧ ಮಂಗಳವಾರ 17ನೇ ದಿನಕ್ಕೆ ಕಾಲಿಟ್ಟಿದೆ. ಹಮಾಸ್ ಉಗ್ರರು ಇಸ್ರೇಲ್ ನ 200ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ.
ಗಾಜಾ ಮೇಲೆ ಇಸ್ರೇಲ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಒಂದೇ ದಿನ 704 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 6400ಕ್ಕೆ ಏರಿಕೆಯಾಗಿದೆ.
ಹಮಾಸ್ ಉಗ್ರರು ಮಾನವೀಯ ನೆಲೆಯಲ್ಲಿ ನಾಲ್ವರು ಇಸ್ರೇಲ್ ನಾಗರಿಕರನ್ನು ಬಿಡುಗಡೆ ಮಾಡಿದೆ. 5761 ಮಂದಿ ಗಾಜಾದಲ್ಲಿ ಮೃತಪಟ್ಟಿದ್ದರೆ, 1400 ಇಸ್ರೇಲ್ ನಾಗರಿಕರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.