ವಿಜಯನಗರ: ಹಸು ಎರಡು ಕಾಲಿನ ಕರುವಿಗೆ ಜನ್ಮ ನೀಡಿರುವುದು ಗ್ರಾಮಸ್ಥರಿಗೆ ಆಶ್ಚರ್ಯ ಮೂಡಿಸಿದೆ. ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಾರಕಬಾವಿ ಗ್ರಾಮದಲ್ಲೊಂದು ಹಸು ೨ ಕಾಲುಗಳನ್ನು ಹೊಂದಿರುವ ಕರುವಿಗೆ ಜನ್ಮ ನೀಡಿದೆ.

ಕರುವಿಗೆ ಎರಡೇ ಕಾಲು ಇರೋದು ಕಂಡು ಗ್ರಾಮಸ್ಥರಿಗೆ ಆಶ್ಚರ್ಯವಾಗಿದೆ.  ತಾಯಿ ಹಸು ಮತ್ತು ಕರು ಆರೋಗ್ಯವಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಕಳೆದ ವರ್ಷಗಳ ಹಿಂದೆ ಕೊಡ್ಲಗಿ ತಾಲೂಕಿನ ಚೌಡಪುರ ಹಾಗೂ ಗುಡೆಕೋಟೆ ಗ್ರಾಮದಲ್ಲೂ ಎರಡು ಕಾಲು ಇರೋ ಕರು ಜನನವಾಗಿತ್ತು. ಎರಡು ಮುಂಗಾಲುಗಳನ್ನು ಹೊಂದಿರದೆ ಕೇವಲ ಎರಡು ಹಿಂಗಾಲುಗಳನ್ನು ಮಾತ್ರ ಹೊಂದಿರುವ ಕರುವಿಗೆ ಜನ್ಮ ನೀಡಿದೆ.

ಇದು ಗ್ರಾಮಸ್ಥರಲ್ಲಿ ಬಹು ಅಚ್ಚರಿ ಮೂಡಿಸಿದ್ದಲ್ಲದೆ, ಸುದ್ದಿ ತಿಳಿದ ನೆರೆ ಹೊರೆಯ ಗ್ರಾಮಗಳ ಗ್ರಾಮಸ್ಥರು, ನೆಂಟರು ಕರುವನ್ನು ನೋಡಲು ದಾವಿಸುತ್ತಿದ್ದಾರೆ. ಆಕಳು ಹಾಗೂ ಅದರ ಕರು ಆರೋಗ್ಯವಾಗಿದೆ ಎಂದು ರೈತ ಹಡಪದ ಬಸಣ್ಣ ತಿಳಿಸಿದರು.

Leave a Reply

Your email address will not be published. Required fields are marked *

Latest News