Deputy Chief Minister DK Shivakumar: ಟಿಪ್ಪರ್ ಹಾಗೂ ಲಾರಿಗಳಲ್ಲಿ ತುಂಬಿ ಸಾಗಿಸುವ ತ್ಯಾಜ್ಯವನ್ನು ನಗರದ ರಸ್ತೆ ಪಕ್ಕ ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಸೆಯುತ್ತಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನೆಲೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಲಾರಿ, ಟ್ರಾಕ್ಟರ್‌ಗಳ ನೋಂದಣಿ ಮಾಡಬೇಕು. ತ್ಯಾಜ್ಯ ತುಂಬುವುದು, ಹಾಕುವುದರ ಬಗ್ಗೆ ಲೆಕ್ಕಾಚಾರ ಇಡಬೇಕು. ಬೆಂಗಳೂರಿನ ಸ್ವಚ್ಛತೆ ಕಾಪಾಡಬೇಕು ಎಂದಿದ್ದಾರೆ.
ಹೈಲೈಟ್ಸ್:
- ರಸ್ತೆ ಬದಿ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿ ತ್ಯಾಜ್ಯ ಸುರಿಯುತ್ತಿರುವ ಆರೋಪ.
- ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್.
- ತ್ಯಾಜ್ಯ ತುಂಬುವ ಲಾರಿ, ಟ್ರಾಕ್ಟರ್ ನೋಂದಣಿ ಕಡ್ಡಾಯ.
ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಮಂಗಳವಾರ (ಜೂನ್13) ರಂದು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಹಾಗೂ ನಗರದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.
ಬೆಂಗಳೂರು ನಗರದ ರಸ್ತೆ ಬದಿ ಹಾಗೂ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲೇ ತ್ಯಾಜ್ಯ ಸುರಿಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ಕೊಟ್ಟಿದ್ದೀವಿ. ಇಂತಹ ಪ್ರಸಂಗ ವರದಿಯಾದರೆ ಪ್ರಕರಣ ದಾಖಲು ಮಾಡಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು.
ಲಾರಿಗಳು, ಟ್ರಾಕ್ಟರ್ ನೋಂದಣಿ ಮಾಡಬೇಕು. ತ್ಯಾಜ್ಯ ತುಂಬುವುದು, ಹಾಕುವುದರ ಬಗ್ಗೆ ಲೆಕ್ಕಾಚಾರ ಇಡಬೇಕು. ಬೆಂಗಳೂರಿನ ಸ್ವಚ್ಛತೆ ಕಾಪಾಡಬೇಕು ಎಂದು ತಿಳಿಸಿದರು. ನಮ್ಮ ಸರ್ಕಾರದಲ್ಲಿ ಟ್ರಾಫಿಕ್ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದ ಅವರು ಇದೇ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆಗಿನ ಸಭೆಯ ಕುರಿತಾಗಿ ಮಾತನಾಡಿ, ಬಿಬಿಎಂಪಿ ಚುನಾವಣೆ ಕುರಿತು ಕಾನೂನು ವಿಚಾರಗಳಿವೆ. ಮುಂದೆ ಅದರ ಬಗ್ಗೆ ಮಾತಾನಾಡುತ್ತೇನೆ ಎಂದರು.
ಟಿಪ್ಪರ್ ವಾಹನಗಳಿಗೆ ಬಿಬಿಎಂಪಿಯಿಂದ ದಂಡ ಆರೋಪ ಇನ್ನು ಟಿಪ್ಪರ್ ಲಾರಿಗಳನ್ನು ತಡೆದು ಬಿಬಿಎಂಪಿ ಮಾರ್ಷಲ್ಗಳು ದಂಡ ಹಾಕುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಟ್ರಾನ್ಸ್ ಪೋರ್ಟ್ ಮತ್ತು ಅರ್ಥ್ ಮೂವರ್ಸ್ ಅಸೋಸಿಯೇಷನ್ ಸದಸ್ಯರು ದೂರು ಸಲ್ಲಿಸಿದ್ದಾರೆ. ಬಿಬಿಎಂಪಿ ಮಾರ್ಷಲ್ ಗಳು ಹಾಗೂ ಅಧಿಕಾರಿಗಳು ದಂಡ ಹಾಕುತ್ತಾರೆ. 2500,5000 10000 ರಷ್ಟು ದಂಡ ಹಾಕುತ್ತಾರೆ. ಅಲ್ಲದೇ ಚಾಲಕರಿಗೆ ನಿಂದಿಸುವ ಕೆಲಸ ಮಾಡ್ತಾರೆ ಎಂದು ದೂರು ನೀಡಿದ್ದಾರೆ.
ಟಿಪ್ಪರ್ ಲಾರಿಗಳಲ್ಲಿ ಸಾಗಿಸುವ ಕಟ್ಟಡ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಹಾಕುವುದಿಲ್ಲ. ಯಾರೋ ಒಬ್ಬರು ಮಾಡಿದ ಅಪರಾಧಕ್ಕೆ ಉಳಿದವರಿಗೆ ಯಾಕೆ ಶಿಕ್ಷೆ? ಇದನ್ನು ಸರಿಪಡಿಸುವಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಮಾಡಿರುವ ಅಸೋಸಿಯೇಷನ್ ಸದಸ್ಯರು ಮನವಿ ಸಲ್ಲಿಸಿದ್ದಾರೆ.
ಯಶವಂತಪುರ ರೈಲುಗಳು ಭಾಗಶಃ ರದ್ದು
ಬೆಂಗಳೂರಿನ ಯಶವಂತಪುರ ಯಾರ್ಡ್‌ನಲ್ಲಿ ಸಿಗ್ನಲ್ ವ್ಯವಸ್ಥೆ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಯಶವಂತಪುರ ರೈಲು ನಿಲ್ದಾಣದಿಂದ ಹೊರಡುವ
ಮತ್ತು ಬೇರೆಡೆಯಿಂದ ಅಲ್ಲಿಗೆ ಬರಬೇಕಾದ ಈ ಕೆಳಗಿನ ರೈಲುಗಳನ್ನು ಪೂರ್ಣ ಮತ್ತು ಭಾಗಶಃ ರದ್ದು ಮಾಡಲಾಗಿದೆ.
ಪೂರ್ಣ ರದ್ದು
ರೈಲು(06575-06576) ಕೆಎಸ್‌ಆರ್ ಬೆಂಗಳೂರು, ತುಮಕೂರು, ಕೆಎಸ್‌ಆರ್ ಬೆಂಗಳೂರು ಮೆಮು ಮತ್ತು (16239-16240) ಚಾಮರಾಜನಗರ- ಯಶವಂತಪುರ, ಯಶವಂತಪುರದಿಂದ ಚಾಮರಾಜನಗರಕ್ಕೆ ಹೋಗುವ ಎಕ್ಸ್‌ಪ್ರೆಸ್‌ಗಳನ್ನು ರದ್ದುಗೊಳಿಸಲಾಗಿದೆ. ಜೂನ್ 14ರಂದು: ಯಶವಂತಪುರ-ಮೈಸೂರು ಎಕ್ಸ್‌ಪ್ರೆಸ್ ಚಿಕ್ಕಬಾಣಾಧಿವರದಿಂದ ಪ್ರಾರಂಭವಾಗುವ ರೈಲು (16207) ಜೂನ್ 14 ಮತ್ತು 15ರಂದು ರದ್ದಾಗಲಿದೆ.
ಭಾಗಶಃ ರದ್ದು
ವಾಸ್ಕೋಡಿ-ಗಾಮಾ ಎಕ್ಸ್‌ಪ್ರೆಸ್, ಹೊಸೂರು ಮೆಮು ಎಕ್ಸ್‌ಪ್ರೆಸ್, ಸೇಲಂ ಎಕ್ಸ್‌ಪ್ರೆಸ್, ದೇವನಹಳ್ಳಿ-ಯಶವಂತಪುರ ಮೆಮು, ಮಚಲಿಪಟ್ಟಣಂ ಎಕ್ಸ್‌ಪ್ರೆಸ್, ತುಮಕೂರು-ಚಾಮರಾಜನಗರ ಪ್ಯಾಸೆಂಜರ್, ಮೈಸೂರು-ಯಶವಂತಪುರ ಎಕ್ಸ್‌ಪ್ರೆಸ್. ಜೂ. 14 ಮತ್ತು 15ರಂದು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಮಧ್ಯಾಹ್ನ 3 ಗಂಟೆಗೆ ಹೊಧಿರಧಿಡಧಿಬೇಧಿಕಿದ್ದ ಬೆಂಗಳೂರು-ತಾಳಗುಪ್ಪ ಎಕ್ಸ್‌ಪ್ರೆಸ್ (20651) ಮಧ್ಯಾಹ್ನ 3.30ಕ್ಕೆ ಪ್ರಾರಂಭವಾಗಲಿದೆ.