ಬೆಂಗಳೂರಿನ ಕೂಡ್ಲುಗೇಟ್ ಬಳಿ ಕೆಲವು ದಿನಗಳ ಹಿಂದೆ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಚಿರತೆ ಸೆರೆ ಸಿಕ್ಕಿದ ಬೆನ್ನಲ್ಲೇ ಇಲಾಖೆ ಸಿಬ್ಬಂದಿಯ ಗುಂಡೇಟಿಗೆ ಬಲಿಯಾಗಿದೆ.
ನಗರದ ಕೂಡ್ಲುಗೇಟ್ ಬಳಿಯ ಅಪಾರ್ಟ್ ಮೆಂಟ್ ಬಳಿ ಕಾಣಿಸಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಬಲೆಗೆ ಕೆಡವಲು ಯಶಸ್ವಿಯಾಗಿತ್ತು.
ಕಾರ್ಯಾಚರಣೆ ವೇಳೆ ಇಬ್ಬರು ಸಿಬ್ಬಂದಿಗೆ ಗಾಯವಾಗಿದ್ದು, ಚಿರತೆ ಪರಚಿದ್ದರಿಂದ ಕುತ್ತಿಗೆ ಬಳಿ ಗಾಯವಾಗಿತ್ತು. ಆದರೂ ಪಟ್ಟು ಬಿಡದ ಸಿಬ್ಬಂದಿ ಬಲೆಗೆ ಕೆಡವಲು ಯಶಸ್ವಿಯಾಗಿದ್ದರು.
ಪಾಳುಬಿದ್ದ ಕಟ್ಟಡದಲ್ಲಿ ಅವಿತಿದ್ದ ಚಿರತೆ ನಂತರ ಪೊದೆಯಲ್ಲಿ ಅವಿತಿತ್ತು. ಜೆಸಿಬಿ ಮೂಲಕ ಹೊರಗೆ ಬಂದು ಬಲೆಗೆ ಬೀಳುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಮಾಡಿತ್ತು. ಈ ವೇಳೆ ಕಾರ್ಯಾಚರಣೆ ವೇಳೆ ಸಿಬ್ಬಂದಿ ಗುಂಡು ಹಾರಿಸಿದ್ದರಿಂದ ಗಾಯಗೊಂಡ ಚಿರತೆ ಸ್ವಲ್ಪ ಹೊತ್ತಿನಲ್ಲೇ ಮೃತಪಟ್ಟಿದೆ.
ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿದ್ದ ಚಿರತೆ ಕಾಲಿಗೆ ಸಿಬ್ಬಂದಿ ಗುಂಡೇಟು ಹೊಡೆದಿದ್ದರು. ಸದ್ಯ ಚಿರತೆಯನ್ನು ಮರಣೋತ್ತರ ಪರೀಕ್ಷೆಎ ಕಳುಹಿಸಲಾಗಿದೆ.