ರಾಜ್ಯದಲ್ಲಿ 15 ಸಾವಿರ ಪೊಲೀಸರ ಹುದ್ದೆ ಖಾಲಿಯಿದೆ. ಇನ್ನೊಂದು ವಾರದಲ್ಲಿ 3,500 ಪೊಲೀಸರ ನೇಮಕಕ್ಕೆ ಆದೇಶಿಸಲಾಗಿದೆ ಎಂದು ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ ಹೇಳಿದರು.

ತುಮಕೂರು: ರಾಜ್ಯದಲ್ಲಿ 15 ಸಾವಿರ ಪೊಲೀಸರ ಹುದ್ದೆ ಖಾಲಿಯಿದೆ. ಇನ್ನೊಂದು ವಾರದಲ್ಲಿ 3,500 ಪೊಲೀಸರ ನೇಮಕಕ್ಕೆ ಆದೇಶಿಸಲಾಗಿದೆ ಎಂದು ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ (G Parameshwara)​ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪೊಲೀಸರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.

ಸ್ಮಾರ್ಟ್​​ಸಿಟಿ ಯೋಜನೆಯಡಿ ತುಮಕೂರಿಗೆ 1 ಸಾವಿರ ಕೋಟಿ ಮಂಜೂರು

ಸ್ಮಾರ್ಟ್​​ಸಿಟಿ ಯೋಜನೆಯಡಿ ತುಮಕೂರಿಗೆ 1 ಸಾವಿರ ಕೋಟಿ ರೂ. ಮಂಜೂರು ಮಾಡಲಾಗಿದೆ. ಕೇಂದ್ರದಿಂದ ಶೇ.50, ರಾಜ್ಯ ಸರ್ಕಾರದಿಂದ ಶೇ.50ರಷ್ಟು ಅನುದಾನ ನೀಡಿದ್ದು, ಈಗಾಗಲೇ ಕೇಂದ್ರ ಸರ್ಕಾರ ಶೇ.45ರಷ್ಟು ಹಣ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ 443 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದರು.

ಸ್ಮಾರ್ಟ್​​​ಸಿಟಿ ಯೋಜನೆಯಡಿ 170 ಕಾಮಗಾರಿ ನಡೆಯುತ್ತಿದೆ. ನವೆಂಬರ್​​ಯೊಳಗೆ ಎಲ್ಲಾ ಕಾಮಗಾರಿ ಮುಗಿಸಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು. ತುಮಕೂರಿಗೆ ರಿಂಗ್ ರೋಡ್, ರಸ್ತೆ ಅಭಿವೃದ್ಧಿ ಕಾಮಗಾರಿ, ದೀಪಗಳ ಅಳವಡಿಕೆ, ಡ್ರೈನೇಜ್ ಅಳವಡಿಕೆ, ಬಸ್ ಸ್ಟಾಂಡ್ ಅಳವಡಿಕೆ, ಸಾರ್ವಜನಿಕ ಗ್ರಂಥಾಲಯವನ್ನ ಆಧುನಿಕವಾದ ಕಟ್ಟಲಾಗಿದೆ.

ಆಧುನಿಕ ಸೌಲಭ್ಯ ಅಳವಡಿಕೆ

ಮಕ್ಕಳಿಗೆ ಕ್ರೀಡೆಗೆ ಮಹತ್ವ ತಿಳಿಸಲು ಮಹಾತ್ಮ ಗಾಂಧಿ ಕ್ರೀಡಾಂಗಣವನ್ನ ಆಧುನಿಕರಣ ಗೊಳಿಸಲಾಗಿದೆ. ಸ್ಮಾರ್ಟ್ ಸಿಟಿ ಅಂದರೆ ಕೇವಲ ರಸ್ತೆ ಚೆನ್ನಾಗಿರುತ್ತೆ ಅಂತ ಅಲ್ಲ, ಆಧುನಿಕರಣವಾಗಿ ಎಲ್ಲಾ ಸೌಲಭ್ಯಗಳು ಸಿಗಬೇಕು. ಫ್ರೀ ವೈಫೈ ಸಿಗಬೇಕು. ಉತ್ತಮ ಪರಿಸರಕ್ಕೆ ಗಿಡಗಳು ಇರಬೇಕು.

ಪ್ರಚೋದನಾಕಾರಿ ಪೋಸ್ಟ್​ಗಳ ತಡೆಗೆ ಕ್ರಮ

ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಅದರ ಬಗ್ಗೆ ಹರಿಸಿದ್ದೇವೆ. ಯಾರೋ ಒಂದು ಪೋಸ್ಟ್ ಮಾಡಿದರೆ, ಮಾಹಿತಿ ಏನಿದೆ, ಒಂದು ಸಮುದಾಯವನ್ನ ಕೆರಳಿಸುವ ರೀತಿ ಇರುತ್ತೆ. ಅದರಿಂದ ಸಾಕಷ್ಟು ಅನಾಹುತಗಳು ನಡೆಯುತ್ತೆ. ಅಂತಹ ಪೋಸ್ಟ್​ಗಳನ್ನ ನಿಯಂತ್ರಣ ಮಾಡುವ ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟಿದ್ದೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *