ಬೆಂಗಳೂರು: ಕಾಂಗ್ರೆಸ್ (Congress) ಮುಸ್ಲಿಮರ ಓಲೈಕೆಗಾಗಿ ಬಜರಂಗದಳ (Bajrang Dal) ನಿಷೇಧದ ಬಗ್ಗೆ ಹೇಳಿದೆ. ಇದು ಪಿಎಫ್‌ಐ (PFI) ಪ್ರಚೋದಿತ ಪ್ರಣಾಳಿಕೆ. ಪಿಎಫ್‌ಐ ಮನಸ್ಥಿತಿಯವರು, ಮುಸ್ಲಿಂ ಮೂಲಭೂತವಾದಿ ಮನಸ್ಥಿತಿಯವರು ರಚಿಸಿರುವ ಪ್ರಣಾಳಿಕೆ ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಟೀಕಿಸಿದ್ದಾರೆ.

#WATCH | PFI is already banned. Siddaramaiah govt withdrew cases of PFI. So they are saying that to appease Muslims they will ban Bajrang Dal. Congress is saying that PFI can’t say that we will take revenge. Congress’ manifesto looks like the manifesto of PFI and fundamentalist… pic.twitter.com/8rNrBszwxn

— ANI (@ANI) May 2, 2023

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ನೀಡಿರುವಂತಹ ಗ್ಯಾರಂಟಿಗಳ ಬಗ್ಗೆ ವಾಗ್ದಾಳಿ ನಡೆಸಿರುವ ಶರ್ಮಾ, ಈಗಾಗಲೇ ಪಿಎಫ್‌ಐ ಬ್ಯಾನ್ ಆಗಿದೆ. ಈಗ ಪಿಎಫ್‌ಐ ಬ್ಯಾನ್ ಮಾಡುತ್ತೇವೆ ಎನ್ನುವುದರಲ್ಲಿ ಏನು ಅರ್ಥ ಇದೆ? ಇದರ ಅರ್ಥ ಇಷ್ಟೇ. ಅವರು ಪಿಎಫ್‌ಐ ಬ್ಯಾನ್ ಮಾಡಿದ್ದಾರೆ, ನಾವು ಅದಕ್ಕೆ ಪರ್ಯಾಯವಾಗಿ ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದು ಹೇಳಲು ಹೊರಟಿದ್ದಾರೆ. ಈ ಮೂಲಕ ಮುಸ್ಲಿಮರ ಓಲೈಕೆ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಕಿಡಿಕಾರಿದರು

ಪರಮೇಶ್ವರ್ ಸಮರ್ಥನೆ:
ಕಾಂಗ್ರೆಸ್ ಬಜರಂಗದಳ ಬ್ಯಾನ್ ಮಾಡುವುದಾಗಿ ಹೇಳಿರುವ ವಿಚಾರವನ್ನು ಸಮರ್ಥಿಸಿಕೊಂಡಿರುವ ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್, ಶಾಂತಿ ಕದಡುವ ಯಾವುದೇ ಸಂಸ್ಥೆಯನ್ನು ನಾವು ನಿಯಂತ್ರಣ ಮಾಡುತ್ತೇವೆ. ಪ್ರಣಾಳಿಕೆಯಲ್ಲಿ ನಾವು ಹೇಳಿದ್ದೇವೆ. ಕರ್ನಾಟಕ ಶಾಂತಿಯ ತೋಟ ಆಗಬೇಕು. ಇದಕ್ಕಾಗಿ ನಾವು ಎಲ್ಲ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

By admin

Leave a Reply

Your email address will not be published. Required fields are marked *