ಧಾರವಾಡದ ಜಿಲ್ಲೆಯಲ್ಲಿ ಕಳೆದೆರಡು ತಿಂಗಳಲ್ಲಿ ನರೇಗಾ ಯೋಜನೆಯಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ. 2 ತಿಂಗಳಲ್ಲಿ ಶೇ. 41ರಷ್ಟು ಸಾಧನೆ ಮಾಡಿದೆ. ಚುನಾವಣೆಯಂಥ ಸಂದರ್ಭದಲ್ಲಿ ಅಂದರೆ, ಏಪ್ರಿಲ್ ನಿಂದ ಮೇ, ಜೂನ್ ತಿಂಗಳಲ್ಲಿ 4 ಲಕ್ಷದ 61 ಸಾವಿರದ 131 ದಿನಗಳಷ್ಟು ಮಾನವ ದಿನಗಳನ್ನು ಸೃಜನ ಮಾಡಲಾಗಿದೆ. ಈ ಮೂಲಕ ಮಹತ್ವದ ಸಾಧನೆ ಮಾಡಿದೆ ಧಾರವಾಡ ಜಿಲ್ಲಾಪಂಚಾಯತ್. ಇದನ್ನು ಮತ್ತಷ್ಟು ಮುಂದುವರಿಸುವ ಯೋಜನೆನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಬಡವರಿಗೆ ನಿರಂತರವಾಗಿ ನರೇಗಾ ಯೋಜನೆಯಡಿ ಕೆಲಸ ಹಾಗೂ ಕೂಲಿಯ ಸೌಲಭ್ಯಗಳನ್ನು ಕಲ್ಪಿಸಲು ನಿರ್ಧರಿಸಲಾಗಿದೆ.

Narega _Standard
ನರೇಗಾ ಚಟುವಟಿಕೆಗಳ ದೃಶ್ಯ (ಸಂಗ್ರಹ ಚಿತ್ರ)

ಹೈಲೈಟ್ಸ್‌:

  • 2 ತಿಂಗಳಲ್ಲಿ ಶೇ.41 ಸಾಧನೆ, 4.61ಲಕ್ಷ ಮಾನವ ದಿನ ಸೃಜನ.
  • ಧಾರವಾಡ ಜಿಲ್ಲೆಗೆ ರಾಜ್ಯದಲ್ಲಿ14ನೇ ಸ್ಥಾನ.
  • ನೈಸರ್ಗಿಕ ಸಂಪನ್ಮೂಲ ಕಾಮಗಾರಿ ಆಯೋಜನೆ.
  • ಎರಡು ತಿಂಗಳಲ್ಲಿ ಶೇ.40.59ರಷ್ಟು ಸಾಧನೆ.
  • ಮಲ್ಲಿಕಾರ್ಜುನ ಬಾಳನಗೌಡ್ರ

ಧಾರವಾಡ: ಪ್ರಸ್ತುತ ವರ್ಷ ವಿಧಾನಸಭಾ ಚುನಾವಣೆ ಅಬ್ಬರದ ಮಧ್ಯವೂ ಧಾರವಾಡ ಜಿಲ್ಲಾಪಂಚಾಯಿತಿ ನರೇಗಾ ಕಾಮಗಾರಿಗಳನ್ನು ಸಮರ್ಪಕವಾಗಿ ನಡೆಸಿದ್ದು, ಎರಡು ತಿಂಗಳಲ್ಲಿ ಶೇ.40.59ರಷ್ಟು ಸಾಧನೆ ಮಾಡಿದೆ. ಪ್ರಸಕ್ತ ಸಾಲಿನಲ್ಲಿ 26 ಲಕ್ಷ ಮಾನವ ದಿನ ಸೃಜನೆಯ ಗುರಿ ಇಟ್ಟುಕೊಂಡಿದೆ. ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಸಂದರ್ಭದಲ್ಲಿಮತದಾನ ಹೆಚ್ಚಳಕ್ಕೆ ಸ್ವೀಪ್‌ ಸಮಿತಿ ಮೂಲಕ ಜಿಲ್ಲಾಪಂಚಾಯಿತಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ನರೇಗಾ ಯೋಜನೆಯಲ್ಲಿ ಮಾನವ ದಿನಗಳ ಸೃಜನೆಗೆ ಒತ್ತು ಕೊಟ್ಟಿರುವುದು ವಿಶೇಷ.

2023- 2024ನೇ ಸಾಲಿನಲ್ಲಿ 26,00,000 ಮಾನವ ದಿನಗಳ ಸೃಜನೆಗೆ ಕೇಂದ್ರ ಸರಕಾರ ಧಾರವಾಡ ಜಿಲ್ಲಾಪಂಚಾಯಿತಿಗೆ ಗುರಿ ನೀಡಿದೆ. ಈಗಾಗಲೇ ಏಪ್ರಿಲ್‌, ಮೇ ಹಾಗೂ ಜೂನ್‌ 8ರ ವರೆಗೆ 4,61,139 ಮಾನವ ದಿನಗಳ ಸೃಜನೆಯಾಗಿದೆ. ಪ್ರತಿದಿನ ಸಾವಿರಾರು ಜನರು ನರೇಗಾ ಕೆಲಸಕ್ಕೆ ಆಗಮಿಸುತ್ತಿದ್ದರೂ, ಮುಂದಿನ ದಿನಗಳಲ್ಲಿ ಇನ್ನಷ್ಟು ಮಾನವ ದಿನಗಳ ಸೃಜನೆಗೆ ಒತ್ತು ನೀಡಲಾಗುವುದು. ಕಳೆದ ವರ್ಷ ಶೇ.90 ಸಾಧನೆ ಮಾಡಲಾಗಿತ್ತು ಎನ್ನುತ್ತಾರೆ ಅಧಿಕಾರಿಗಳು.

ಹಾವೇರಿ: ಕಸದ ತೊಟ್ಟಿಯಾಗಿದ್ದ ಕಬ್ಬೂರಿನ ಪ್ರಾಚೀನ ಕೆರೆ ಅಭಿವೃದ್ಧಿ, ನರೇಗಾ ಕಾರ್ಮಿಕರ ಬಳಕೆ

ಬೆಳಗಿನ ಅವಯಲ್ಲಿಯೇ ಹೆಚ್ಚು ಕೆಲಸ

ಬೇಸಿಗೆ ದಿನಗಳಲ್ಲಿ ಬಿರು ಬಿಸಿಲಿರುವುದರಿಂದ ಬೆಳಗಿನ ಅವಯಲ್ಲಿಯೇ ಹೆಚ್ಚಿನ ಮಟ್ಟದಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ದೊರೆಯುವಂತೆ ಮಾಡಲಾಗಿದೆ. ಇದರಿಂದ ಹೆಚ್ಚಿನ ಕಾರ್ಮಿಕರು ಕೆಲಸಕ್ಕೆ ಆಗಮಿಸುತ್ತಾರೆ. ಕೇವಲ ಎರಡು ತಿಂಗಳಲ್ಲಿ 4 ಲಕ್ಷಕ್ಕೂ ಅಧಿಕ ಮಾನವ ದಿನ ಸೃಜಸಿ ಕೆರೆ, ನಾಲಾ, ಬದು ನಿರ್ಮಾಣ, ಅರಣ್ಯೀಕರಣ, ನೈಸರ್ಗಿಕ ಸಂಪನ್ಮೂಲ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಈಗ ಧಾರವಾಡ ಜಿಲ್ಲೆ ರಾಜ್ಯದಲ್ಲಿ14ನೇ ಸ್ಥಾನದಲ್ಲಿ ಇದೆ.

ಆರೋಗ್ಯ ಅಭಿಯಾನ

ನರೇಗಾ ಸ್ಥಳಗಳಲ್ಲಿ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಕೂಲಿ ಕಾರ್ಮಿಕರಿಗೆ ಬಿಪಿ, ಶುಗರ್‌ ಮುಂತಾದ ರೋಗಗಳ ಕುರಿತು ಸ್ಕ್ರೀನ್‌ ಟೆಸ್ಟ್‌ ಮಾಡಿಸಲಾಗುತ್ತಿದೆ. ಕಾಮಗಾರಿ ಸ್ಥಳದಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿದಿನವೂ ಕೂಲಿ ಕೆಲಸ ಒದಗಿಸುವ ಜತೆಗೆ ಆರೋಗ್ಯ ಅಭಿಯಾನದ ಮುಖಾಂತರ ಅವರ ಆರೈಕೆ ಮಾಡಲಾಗುತ್ತಿದೆ ಎನ್ನುತ್ತಾರೆ ಗ್ರಾಪಂ ಅಧಿಕಾರಿಗಳು.

ಗ್ರಾಪಂ ಅಭಿವೃದ್ಧಿಗೆ ಪೂರಕ

ಧಾರವಾಡ ತಾಲೂಕಿನಲ್ಲಿಯೇ ಅತಿ ಹೆಚ್ಚು ಅಂದರೆ 1,12,709 ಮಾನವ ದಿನಗಳು ಸೃಜನೆಯಾಗಿವೆ. ರಸ್ತೆ ನಿರ್ಮಾಣ, ಶಾಲಾ ಆವರಣ ಗೋಡೆ, ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಗಳು, ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಮಳೆನೀರು ಇಂಗಿಸುವ ಯೋಜನೆ, ಇಂಗುಗುಂಡಿ ರಚನೆ, ಕೃಷಿ ಕಾಯಕಕ್ಕೆ ಪೂರಕವಾದ ಕೃಷಿ ಹೊಂಡ ರಚನೆ, ಸ್ವಚ್ಛತೆ -ನೈರ್ಮಲ್ಯಕ್ಕಾಗಿ ಬಚ್ಚಲು ಗುಂಡಿಗಳ ರಚನೆ ಮೊದಲಾದ ಕಾಮಗಾರಿಗಳನ್ನು ಈ ಯೋಜನೆ ಮೂಲಕ ಮಾಡಿಸಲಾಗುತ್ತದೆ. ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ನಡೆದ ಹಲವು ಕಾಮಗಾರಿಗಳು ಊರಿನ ಅಭಿವೃದ್ಗೆ ಪೂರಕವಾಗಿವೆ. ರಸ್ತೆ ನಿರ್ಮಾಣ, ಬದು ನಿರ್ಮಾಣದಿಂದ ನರೇಗಾ ಕೃಷಿಕರ ಪಾಲಿಗೆ ಆಪತ್ಬಾಂಧವವಾಗಿದೆ ಎನ್ನುತ್ತಾರೆ ರೈತರು.

ಜಿಲ್ಲೆಯಲ್ಲಿ ನರೇಗಾ ಸಾಧನೆ

ತಾಲೂಕು ಮಾನವ ದಿನ ಸೃಜನೆ (ಏ. 1ರಿಂದ ಜೂ.8ರ ವರೆಗೆ)

ಕುಂದಗೋಳ 66,776
ಕಲಘಟಗಿ 95,607
ನವಲಗುಂದ 49,890
ಅಳ್ನಾವರ 17,414
ಧಾರವಾಡ 1,12,709
ಹುಬ್ಬಳ್ಳಿ 79,543
ಅಣ್ಣಿಗೇರಿ 36,406

ಚುನಾವಣೆ ಕೆಲಸದ ಮಧ್ಯೆಯೂ ನಿರಂತರವಾಗಿ ನರೇಗಾ ಕೆಲಸಕ್ಕೆ ಆದ್ಯತೆ ನೀಡಲಾಗಿತ್ತು. ಹೀಗಾಗಿ ಮಾನವ ದಿನಗಳ ಸೃಜನೆಗೆ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿಮತ್ತಷ್ಟು ಪರಿಣಾಮಕಾರಿಯಾಗಿ ನರೇಗಾ ಯೋಜನೆಯ ಅನುಷ್ಠಾನಕ್ಕೆ ಶ್ರಮಿಸಲಾಗುವುದು.

Leave a Reply

Your email address will not be published. Required fields are marked *