ಸಂಘಟಿತ ಪ್ರದರ್ಶನ ನೀಡಿದ ಆಫ್ಘಾನಿಸ್ತಾನ ತಂಡ ಏಕದಿನ ವಿಶ್ವಕಪ್ ಪಂದ್ಯದಲ್ಲಿ 7 ವಿಕೆಟ್ ಗಳ ಭಾರೀ ಅಂತರದಿಂದ ನೆದರ್ಲೆಂಡ್ ತಂಡವನ್ನು ಸೋಲಿಸಿದೆ.

ಲಕ್ನೋದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ 46.3 ಓವರ್ ಗಳಲ್ಲಿ 179 ರನ್ ಗೆ ಪತನಗೊಂಡಿತು. ಸುಲಭ ಗುರಿ ಬೆಂಬತ್ತಿದ ಆಫ್ಘಾನಿಸ್ತಾನ ತಂಡ 31.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಇಂಗ್ಲೆಂಡ್ ಪರ ರಹಮಾತ್ ಶಾ ಮತ್ತು ನಾಯಕ ಹಸಮತುಲ್ಲಾ ಶಾಹಿದಿ ಮೂರನೇ ವಿಕೆಟ್ ಗೆ 74 ರನ್ ಜೊತೆಯಾಟ ನಿಭಾಯಿಸಿದರು.  ಈ ಮೂಲಕ ಆಫ್ಘಾನಿಸ್ತಾನದ ಗೆಲುವು ಖಚಿತಪಡಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ನೆದರ್ಲೆಂಡ್ ತಂಡ ಕೆಳ ಕ್ರಮಾಂಕ ಕುಸಿತ ಕಂಡಿತು. ಸೈಬ್ರಾಂಡ್ ಎಂಗೆಲ್ಬೆರ್ಟ್ (58) ಅರ್ಧಶತಕ ಬಾರಿಸಿ ತಂಡವನ್ನು ಆಧರಿಸಿದರು.

Leave a Reply

Your email address will not be published. Required fields are marked *