ಉಚಿತ ಪ್ರಯಾಣಕ್ಕೆ ಜಟಾಪಟಿ; ಲಗೇಜ್ ಕಂಡು ಬೆಚ್ಚಿಬಿದ್ದ ನಿರ್ವಾಹಕ!

ಉಚಿತ ಪ್ರಯಾಣಕ್ಕೆ ಜಟಾಪಟಿ; ಲಗೇಜ್ ಕಂಡು ಬೆಚ್ಚಿಬಿದ್ದ ನಿರ್ವಾಹಕ!

ಬಾಗಲಕೋಟೆ: ನಿನ್ನೆ ಶನಿವಾರದಿಂದ ರಾಜ್ಯಾದ್ಯಂತ ಮಹಿಳೆಯರು ಅಗತ್ಯ ದಾಖಲೆಗಳನ್ನು ತೋರಿಸಿ ಉಚಿತ ಬಸ್ ಪ್ರಯಾಣ ಮಾಡಬಹುದಾಗಿದೆ. ಇದಕ್ಕೆ ಕೆಲ ನಿಯಮಗಳನ್ನೂ ಸರ್ಕಾರ ರೂಪಿಸಿದೆ. ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ನಿರ್ವಾಹಕ ಹಾಗೂ ಮಹಿಳೆಯ ನಡುವೆ ಉಚಿತ ಪ್ರಯಾಣಕ್ಕಾಗಿ ಜಟಾಪಟಿ ಉಂಟಾಗಿದೆ.

‘ನಿಮಗೆ ಮಾತ್ರ ಫ್ರೀ.’

ಇಳಕಲ್ ನಗರ ಬಸ್ ನಿಲ್ದಾಣದಲ್ಲಿ ಲಗೇಜ್ ವಿಚಾರವಾಗಿ ಮಹಿಳೆ ಹೈಡ್ರಾಮಾ ಮಾಡಿದ್ದಾರೆ. ಪ್ರತಿ ದಿನ ವಿವಿಧ ಗ್ರಾಮಗಳಿಗೆ ತೆರಳಿ ಬಾಂಡೆ ವಸ್ತುಗಳನ್ನ ಮಾರಾಟ ಮಾಡುವ ಮಹಿಳೆಯರು ಐದಾರು ಸೀಟುಗಳ ಮೇಲೆ ಲಗೇಜ್ ಹಾಕಿ ಕುಳಿತಿದ್ದರು. ಸೀಟು ತುಂಬ ಗಲೇಜ್ ನೋಡಿ ಬೆಚ್ಚಿದ ಕಂಡಕ್ಟರ್, ‘ನಿಮಗೆ ಬಸ್ ಫ್ರೀ ಇದೆ. ಆದ್ರೆ, ಲಗೇಜ್ ಗಳಿಗೆ ಫ್ರೀ ಇಲ್ಲ. ಲಗೇಜ್ ಮಾಡಿಸಿ, ಬಸ್ ಮೇಲೆ ಹಾಕಿ’ ಎಂದಿದ್ದಾರೆ.

ಸೀಟಿನ ಮೇಲಿನಿಂದ ಲಗೇಜ್ ಇಳಿಸಲು ಒಪ್ಪದ ಮಹಿಳೆ!

ಇಲ್ಲಿಂದ ಅಸಲಿ ಸಮಸ್ಯೆ ಶುರುವಾಗಿದ್ದು ಮಹಿಳೆ ಅದಕ್ಕೆ ಒಪ್ಪಿಲ್ಲ. ಮಹಿಳೆ ಮಾತ್ರ ಲಗೇಜ್ ಬಸ್ ಒಳಗಡೆ ಇಡುತ್ತೇನೆ ಎಂದು ತಕರಾರು ಮಾಡಿದ್ದಾರೆ. ಇದಕ್ಕೆ ಕಂಡಕ್ಟರ್ ಕಡೆಗೆ, ‘ಸೀಟ್ ಮೇಲೆ ಇಡಬೇಡ, ಮಧ್ಯದಲ್ಲಿ ಇಡು’ ಎಂದು ಕೇಳಿಕೊಂಡಿದ್ದಾರೆ. ಆದರೆ ಇದಕ್ಕೂ ಜಗ್ಗದ ಆ ಮಹಿಳೆಯನ್ನು ಕಡೆಗೆ ಬಿಟ್ಟು ಬಸ್ ಗಮ್ಯ ಸ್ಥಾನಕ್ಕೆ ತೆರಳಿದೆ.

ಇದಕ್ಕೆ ಕಂಡಕ್ಟರ್ ವಿರುದ್ದ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರ. ಆಗ ಕಂಟ್ರೋಲರ್ ಮಧ್ಯಪ್ರವೇಶ ಮಾಡಿದ್ದು ಮಹಿಳೆ ಹಾಗೂ ಲಗೇಜನ್ನು ಬೇರೆ ಬಸ್ ನಲ್ಲಿ ಅನುಕೂಲ ಮಾಡಿಕೊಟ್ಟರು. ಅಂದ ಹಾಗೆ ಈ ಮಹಿಳೆ ಬಾಂಡೆ ವಸ್ತುಗಳ ಮಾರಾಟ ಮಾಡುತ್ತಿದ್ದು ಇಳಕಲ್ ದಿಂದ ಮುದಗಲ್ ಗೆ ಹೊರಟಿದ್ದರು.

Leave a Reply

Your email address will not be published. Required fields are marked *