ಅನ್ಯ ಧರ್ಮದ ಯುವಕನನ್ನು ಮದುವೆಯಾದ ಯುವತಿಗೆ ಪಿಂಡ ಪ್ರಧಾನ ಮಾಡಿ ಅಂತ್ಯಸಂಸ್ಕಾರ ನೆರವೇರಿಸಿದ ಪೋಷಕರು

ಭೋಪಾಲ್: ಜಬಲ್ಪುರದಲ್ಲಿ ಯುವತಿಯ ಅಂತರ್ಧರ್ಮೀಯ ಪ್ರೇಮ ವಿವಾಹದಿಂದ ಕೋಪಗೊಂಡ ಆಕೆಯ ಕುಟುಂಬವು ಅವಳನ್ನು ತಿರಸ್ಕರಿಸಿದೆ ಜೊತೆಗೆ ಅವಳ ಅಂತ್ಯಕ್ರಿಯೆಯನ್ನು ಸಹ ನಡೆಸಿ ಸುದ್ದಿಯಾಗಿದೆ.

ಮದುವೆ ಕಾರ್ಡ್‌ಗಳಿಗೆ ಬದಲಾಗಿ, ಯುವತಿಯ ಕುಟುಂಬವು “ಏಪ್ರಿಲ್ 2 ರಂದು ನಿಧನರಾದರು” ಎಂದು ಸಂಬಂಧಿಕರು ಮತ್ತು ಸಮಾಜದ ಸದಸ್ಯರಿಗೆ ತಿಳಿಸಲು ಸಂತಾಪ ಕಾರ್ಡ್‌ಗಳನ್ನು ಮುದ್ರಿಸಿ ವಿತರಿಸಿದರು. ಅವರು ಅಂತ್ಯಕ್ರಿಯೆಯ ಔತಣವನ್ನು ಏರ್ಪಡಿಸಿದರು ಮತ್ತು ಪಿಂಡ ಪ್ರಧಾನ ಮತ್ತು ಮೃತ್ಯುಭೋಜ್ ಸೇರಿದಂತೆ ಅವರ ಅಂತಿಮ ವಿಧಿಗಳನ್ನು ಸಿದ್ಧಘಾಟ್‌ನಲ್ಲಿ ಮಾಡಿದರು.

22ರ ಹರೆಯದ ಯುವತಿ “ನಮಗೆ ನಾಚಿಕೆ ತಂದಿದ್ದಾಳೆ ಮತ್ತು ಈಗ ಅವರನ್ನು ಸತ್ತೆ ಎಂದು ಪರಿಗಣಿಸಲಾಗಿದೆ” ಎಂದು ತಾಯಿ ಹೇಳಿದ್ದಾರೆ. ಹುಡುಗಿ ಹಿಂದೂ ಆಗಿದ್ದು, ಶಾಲಾ ತರಗತಿಗಳಿಂದಲೂ ತನ್ನ ಸಹಪಾಠಿಯಾಗಿದ್ದ 25 ವರ್ಷದ ಮುಸ್ಲಿಂ ಯುವಕನನ್ನು ವರಿಸಿದ್ದಾಳೆ.

ಇದರಿಂದ ಯುವತಿಯ ಮನೆಯವರು ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮದುವೆಯನ್ನು “ಲವ್ ಜಿಹಾದ್” ಎಂದು ಕರೆದ ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡಿದೆ.

ಯುವತಿಗಿಯ ತಂದೆ ಮಾತನಾಡಿ ನಮ್ಮ ಮಗಳು ಏ.2 ರಂದು ಕೊನೆಯುಸಿರೆಳೆದಿದ್ದಾಳೆ. ಆಕೆ ಕುಪುತ್ರಿ, ಅವಳಿಗೆ ನರಕದಲ್ಲಿ ಸ್ಥಾನ ಸಿಗಲಿ ಎಂದು ಹೇಳಿದ್ದಾರೆ.

ಜೂನ್ ನಲ್ಲಿ ಉಜ್ಮಾ ಫಾತಿಮಾ ಅಲಿಯಾಸ್ ಅನಾಮಿಕಾಳ ಮದುವೆಯ ಕರೆಯೋಲೆ ಯುವಕನೋರ್ವನೊಂದಿಗೆ ವೈರಲ್ ಆಗಿತ್ತು. ಆನಂತರ ಆಕೆಯ ತಾಯಿಯೇ ಇದನ್ನು ಲವ್ ಜಿಹಾದ್ ಎಂದು ಕರೆದು ತಮ್ಮ ಮಗಳನ್ನು ಮರಳಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದರು. ಆದರೆ, ಮಧ್ಯಪ್ರದೇಶ ಪೊಲೀಸರು ತಾಯಿಯ ಆರೋಪವನ್ನು ತಳ್ಳಿಹಾಕಿದ್ದರು. ಅಲ್ಲದೇ ಇದು ಇಬ್ಬರ ನಡುವಿನ ಒಮ್ಮತದ ಸಂಬಂಧ ಎಂದು ಹೇಳಿದ್ದರು.

ಹುಡುಗಿಯ ಸಹೋದರ ಅಭಿಷೇಕ್ ದುಬೆ ಅವರು ತಮ್ಮ ಸಹೋದರಿಯ ಮದುವೆಯನ್ನು ನೋಡುವ ಕನಸುಗಳನ್ನು ಹೊಂದಿದ್ದರು ಆದರೆ ಆಕೆಯ ಹಠಮಾರಿತನವು ಅವರ ಕುಟುಂಬದ ಎಲ್ಲಾ ಆಕಾಂಕ್ಷೆಗಳನ್ನು ಮುರಿಯುವಂತೆ ಮಾಡಿದೆ ಎಂದು ಹೇಳಿದರು.ನಾನು ಆಕೆ ಬದುಕಿರುವಾಗಲೆ ಪಿಂಡ ದಾನ ಮಾಡಬೇಕಾದ ದಿನಗಳನ್ನು ನೋಡಬೇಕು ಎಂದು ಅಂದುಕೊಂಡಿರಲಿಲ್ಲ ಎಂದರು.

Leave a Reply

Your email address will not be published. Required fields are marked *

Latest News