LIC: ತಿಂಗಳಿಗೆ 5,000 ಕಟ್ಟಿದರೆ 20 ವರ್ಷದಲ್ಲಿ 23 ಲಕ್ಷ ರೂ; ಎಲ್​ಐಸಿ ಪೆನ್ಷನ್ ಪ್ಲಸ್ ಪ್ಲಾನ್ ಬಗ್ಗೆ ತಿಳಿಯಿರಿ

ಭಾರತೀಯ ಜೀವ ವಿಮಾ ನಿಗಮ ಸಂಸ್ಥೆ ಹಲವು ಇನ್ಷೂರೆನ್ಸ್ ಪಾಲಿಸಿಗಳನ್ನು ನಡೆಸುತ್ತದೆ. ಎಂಡೋಮೆಂಟ್ ಪಾಲಿಸಿ, ಷೇರು ಜೋಡಿತ ಪಾಲಿಸಿ ಹೀಗೆ ವೈವಿಧ್ಯಮಯ ಸ್ಕೀಮ್​ಗಳಿವೆ. ಅದರಲ್ಲಿ ಎಲ್​ಐಸಿ ನ್ಯೂ ಪೆನ್ಷನ್ ಪ್ಲಸ್ ಪಾಲಿಸಿ (LIC New Pension Plus Policy) ಒಂದು. ಇದು ನಿವೃತ್ತಿ ಜೀವನಕ್ಕೆ ಆಧಾರವಾಗುವಂತೆ ರೂಪಿಸಲಾಗಿರುವ ಹಣಕಾಸು ಯೋಜನೆ. ಒಮ್ಮೆಲೇ ಇಡೀ ಪ್ರೀಮಿಯಮ್ ಕಟ್ಟಬಹುದು, ಅಥವಾ ಕಂತು ಕಂತುಗಳಾಗಿ ನಿಯಮಿಗವಾಗಿ ಪ್ರೀಮಿಯಮ್ ಕಟ್ಟಬಹುದು. ಮೆಚ್ಯೂರ್ ಆದಾಗ ಒಮ್ಮೆಲೇ ಇಡೀ ರಿಟರ್ನ್ಸ್ ಪಡೆಯಬಹುದು. ಅಥವಾ ವರ್ಷಕ್ಕಿಷ್ಟು ನಿಗದಿತ ಮೊತ್ತ ಬರುವಂತೆಯೂ ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಪೆನ್ಷನ್ ಗ್ರೋತ್ ಫಂಡ್, ಪೆನ್ಷನ್ ಬಾಂಡ್ ಫಂಡ್, ಪೆನ್ಷನ್ ಸೆಕ್ಯೂರ್ಡ್ ಫಂಡ್ ಮತ್ತು ಪೆನ್ಷನ್ ಬ್ಯಾಲೆನ್ಸ್ಡ್ ಫಂಡ್ ಎಂಬ ನಾಲ್ಕು ರೀತಿಯ ಹೂಡಿಕೆ ಅಯ್ಕೆಗಳೂ ಉಂಟು.

ಎಲ್​ಐಸಿ ನ್ಯೂ ಪೆನ್ಷನ್ ಪ್ಲಸ್ ಪಾಲಿಸಿ ಅವಧಿ ಎಷ್ಟು?

ಈ ಪಾಲಿಸಿ (LIC New Pension Plus Plan Table 867) ಅವಧಿ 10 ವರ್ಷದಿಂದ ಹಿಡಿದು ಗರಿಷ್ಠ 42 ವರ್ಷದವರೆಗೂ ಇದೆ. ಆದರೆ, 25 ವರ್ಷದೊಳಗಿನ ವಯಸ್ಸಿನವರಿಗೆ ಈ ಪಾಲಿಸಿ ನೀಡಲಾಗುವುದಿಲ್ಲ. ಕನಿಷ್ಠ ವಯಸ್ಸು 25 ವರ್ಷ ಹಾಗೂ ಗರಿಷ್ಠ ವಯಸ್ಸು 75 ವರ್ಷ ಇದೆ. ಇದು ಶೇ 5ರಿಂದ 15ರ ವಾರ್ಷಿಕ ದರದಲ್ಲಿ ರಿಟರ್ನ್ಸ್ ನೀಡುತ್ತದೆ.

ಎಲ್​ಐಸಿ ನ್ಯೂ ಪೆನ್ಷನ್ ಪ್ಲಸ್ ಪಾಲಿಸಿಗೆ ಎಷ್ಟು ಪ್ರೀಮಿಯಮ್ ಕಟ್ಟಬೇಕು?

ಒಂದೇ ಒಂದೇ ಬಾರಿಗೆ ಪ್ರೀಮಿಯಮ್ ಕಟ್ಟಬೇಕೆಂದಿದ್ದರೆ ಕನಿಷ್ಠ ಮೊತ್ತ 1 ಲಕ್ಷ ರೂ ಇದೆ. ಅದಕ್ಕೆ ಮೇಲೆ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ಮಿತಿ ಎಂಬುದಿಲ್ಲ. ಇನ್ನು, ನೀವು ನಿಯಮಿತವಾಗಿ ಕಂತುಗಳಲ್ಲಿ ಕಟ್ಟುತ್ತೇವೆಂದು ಹೋದರೆ ತಿಂಗಳಿಗೆ ಕಟ್ಟಬೇಕಾದ ಹಣ ಕನಿಷ್ಠ ಎಂದರೂ 3,000 ರೂ ಆಗಿರಬೇಕು. ವರ್ಷಕ್ಕೊಮ್ಮೆ ಕಟ್ಟುವುದಾದರೆ ಕನಿಷ್ಠ ಮೊತ್ತ 30,000 ರೂ ಇದೆ. ಇದಕ್ಕೆ ಮೇಲೆ ನೀವು ಎಷ್ಟು ಬೇಕಾದರೂ ಕಟ್ಟಡಬಹುದು.

ಎಲ್​ಐಸಿ ನ್ಯೂ ಪೆನ್ಷನ್ ಪ್ಲಸ್ ಪ್ಲಾನ್​ನಲ್ಲಿ ಎಷ್ಟು ಹಣ ಹೂಡಿಕೆ ಮಾಡಿದರೆ ಎಷ್ಟು ಲಾಭ?

ಎಲ್​ಐಸಿ ನ್ಯೂ ಪೆನ್ಷನ್ ಪ್ಲಸ್ ಪ್ಲಾನ್ ಯೂನಿಟ್ ಜೋಡಿತ ಪಾಲಿಸಿಯಾದ್ದರಿಂದ ನಿಶ್ಚಿತ ರಿಟರ್ನ್ಸ್ ಎಂಬುದು ಇರುವುದಿಲ್ಲ. ವರ್ಷಕ್ಕೆ ಶೇ. 8ರ ದರದಲ್ಲಿ ರಿಟರ್ನ್ಸ್ ಬರುತ್ತದೆ ಎಂದಿಟ್ಟುಕೊಂಡಲ್ಲಿ, ನೀವು ತಿಂಗಳಿಗೆ 5,000 ರೂನಂತೆ 20 ವರ್ಷ ಕಟ್ಟಿದರೆ ಸುಮಾರು 23 ಲಕ್ಷ ರೂ ರಿಟರ್ನ್ಸ್ ಬರುತ್ತದೆ. ಶೇ. 15ರ ದರದಲ್ಲಿ ಹಣ ಬೆಳೆದರೆ 50 ಲಕ್ಷಕ್ಕೂ ಹೆಚ್ಚು ಹಣ ಸಿಗುತ್ತದೆ.

ಇನ್ನು, ನೀವು ಒಮ್ಮೆಗೇ 50 ಲಕ್ಷ ರೂ ಪ್ರೀಮಿಯಮ್ ಕಟ್ಟಿದರೆ 10 ವರ್ಷದ ಬಳಿಕ 93 ಲಕ್ಷಕ್ಕೆ ಹಣ ಬೆಳೆಯುತ್ತದೆ. ಇದು ಶೇ. 4ರ ವಾರ್ಷಿಕ ದರ ಎಂದು ಭಾವಿಸಿದಲ್ಲಿ.