ರೈಲು ಹಳಿ ಮೇಲೆ ಕಲ್ಲಿನ ಬಂಡೆ ಬಿದ್ದಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ಟನಲ್ ಬಳಿ ನಡೆದಿದೆ.
ರೈಲು ಬೀದರ್ನಿಂದ ಕಲಬುರಗಿಗೆ ಹೊರಟಿತ್ತು.ಈ ವೇಳೆ ಟನಲ್ ಮೇಲಿನ ಗುಡ್ಡದಿಂದ ರೈಲ್ವೆ ಹಳಿ ಮೇಲೆ ಕಲ್ಲು ಬಿದ್ದಿದೆ.ಇದರಿಂದ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ಟನಲ್ ಬಳಿಯ ಮರಗುತ್ತಿ ಸುರಂಗ ಮಾರ್ಗದಲ್ಲಿ ರೈಲು ನಿಂತಿದೆ.ಈ ವೇಳೆ ರೈಲಿನಲ್ಲಿದ್ದ ಪ್ರಯಾಣಿಕರು ಕೆಳಗೆ ಇಳಿದು ಹಳಿಗಳ ಮೇಲೆ ಕೂತಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ರೈಲ್ವೇ ಸಿಬ್ಬಂದಿ ಕಲ್ಲಿನ ಬಂಡೆಯನ್ನು ಹಳಿ ಮೇಲಿನಿಂದ ತೆಗೆದಿದ್ದಾರೆ.ಎರಡು ಗಂಟೆ ನಂತರ ರೈಲು ಪ್ರಯಾಣ ಬೆಳಸಿದೆ.