ಜೂನ್ 30ರ ರಾತ್ರಿ 12ಗಂಟೆಯಿಂದ ಅಂದ್ರೆ ಜುಲೈ 01ರಿಂದ ಗೃಹಜ್ಯೋತಿ ಸ್ಕೀಮ್ ಅಧಿಕೃತವಾಗಿ ಆರಂಭವಾಗಿದ್ದು, 12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ಗೃಹಜ್ಯೋತಿಯ ವಿದ್ಯುತ್ ಉಚಿತ ಸ್ಕೀಮ್ ಕೌಂಟ್ ಆಗಲಿದೆ.
ಬೆಂಗಳೂರು: ಕಾಂಗ್ರೆಸ್(Congress) ಸರ್ಕಾರದ ಮಹತ್ವದ ಸ್ಕೀಮ್ಗಳಲ್ಲಿ ಒಂದಾದ ಗೃಹಜ್ಯೋತಿ ಸ್ಕೀಮ್(Gruha Jyothi) ಜೂನ್ 30ರ ತಡರಾತ್ರಿಯಿಂದಲೇ ಅಧಿಕೃತವಾಗಿ ಆರಂಭವಾಗಿದೆ. ರಾತ್ರಿ 12 ಗಂಟೆಯಿಂದಲೇ ಪ್ರತಿ ಯುನಿಟ್ ಕೌಂಟ್ ಶುರುವಾಗಿದೆ. ಜುಲೈ ತಿಂಗಳ ಬಿಲ್ ಬರುವ ಮುನ್ನ ಅರ್ಜಿ ಸಲ್ಲಿಸದಿದ್ರೆ ಜುಲೈ ತಿಂಗಳ ಕರೆಂಟ್‌ಗೆ ಹಣ ಕಟ್ಟಲೇಬೇಕು. ಗೃಹಜ್ಯೋತಿ ಅನ್ವಯವಾಗಲ್ಲ.
ಕಾಂಗ್ರೆಸ್ ಸರ್ಕಾರದ ಐದು ಸ್ಕೀಮ್ ಗಳ ಪೈಕಿ ಒಂದೊಂದೆ ಸ್ಕೀಮ್ ಗಳು ಜಾರಿಯಾಗುತ್ತಿವೆ. ಇದೀಗಾ ಗೃಹಜ್ಯೋತಿ ಯೋಜನೆಯನ್ನ ಜಾರಿ ಮಾಡಲು ಸಕಲು ಸಿದ್ದತೆ ಮಾಡಿಕೊಳ್ಳುತ್ತಿದ್ದು, ಇಂದಿನಿಂದ ಅಧಿಕೃತವಾಗಿ ಈ ಯೋಜನೆ ಆರಂಭವಾಗಿದೆ. ಹೌದು ಜೂನ್ 30ರ ರಾತ್ರಿ 12ಗಂಟೆಯಿಂದ ಅಂದ್ರೆ ಜುಲೈ 01ರಿಂದ ಗೃಹಜ್ಯೋತಿ ಸ್ಕೀಮ್ ಅಧಿಕೃತವಾಗಿ ಆರಂಭವಾಗಿದ್ದು, 12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ಗೃಹಜ್ಯೋತಿಯ ವಿದ್ಯುತ್ ಉಚಿತ ಸ್ಕೀಮ್ ಕೌಂಟ್ ಆಗಲಿದೆ. ಇನ್ನು ಗೃಹಜ್ಯೋತಿ ಯೋಜನೆಯ ಪ್ರಕಾರ 12 ತಿಂಗಳ ಸರಾಸರಿ ಬಳಕೆ 187 ಯುನಿಟ್ ಇದ್ರು ಫ್ರಿ ವಿದ್ಯುತ್ ಸಿಗಲಿದೆ. ಇದ್ರಲ್ಲಿ 12 ತಿಂಗಳ ಸರಾಸರಿಗಿಂತ ಹೆಚ್ಚು ಬಳಸಿದ್ರೆ ಮಾತ್ರ ಬಿಲ್ ಬರಲಿದ್ದು, 12 ತಿಂಗಳ ಸರಾಸರಿಯ ಬಿಲ್ ನಲ್ಲಿ 187 ಯುನಿಟ್ ಬಂದ್ರು 10% ಸರಾಸರಿ ನೀಡಲಾಗುತ್ತೆ. ತದನಂತರ 200 ಯುನಿಟ್ ಮೇಲೆ 10 ಯುನಿಟ್ ಜಾಸ್ತಿ ಬಂದ್ರು ಬಿಲ್ ಬರಲಿದೆ.
ಇನ್ನು, ಈ ಗೃಹಜ್ಯೋತಿ ಸ್ಕೀಮ್ ಆಗಸ್ಟ್ ತಿಂಗಳಿನಿಂದ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದ್ದು, ಸದ್ಯ ಜೂನ್ ತಿಂಗಳ ಬಿಲ್ ಜುಲೈ ತಿಂಗಳಿನಲ್ಲಿ ಬರಲಿದೆ. ಜುಲೈ ತಿಂಗಳ ಪವರ್ ಬಿಲ್ ಆಗಸ್ಟ್ ತಿಂಗಳಲ್ಲಿ ಬರಲಿದೆ. ಅಗಸ್ಟ್ ತಿಂಗಳಲ್ಲಿ ಬರುವ ಕರೆಂಟ್ ಬಿಲ್ ನಲ್ಲಿ ಶಕ್ತಿ ಯೋಜನೆಯಂತೆ ಗೃಹಜ್ಯೋತಿಯ ಉಚಿತ ಬಿಲ್ ಎಂದು ವಿದ್ಯುತ್ ಬಿಲ್ ನಲ್ಲಿ ಹೆಸರು ಬರುವ ಸಾಧ್ಯತೆ ಇದೆ.
ಇನ್ನು ರಾಜ್ಯದಲ್ಲಿ ಒಟ್ಟು ಗೃಹಜ್ಯೋತಿಯ ಫಲಾನುಭವಿಗಳು 2.14 ಕೋಟಿಯಷ್ಟು ಜನರಿದ್ದು, ಇದರಲ್ಲಿ ಸಧ್ಯ ಗೃಹಜ್ಯೋತಿಗೆ 80,99,932 ರಷ್ಟು ಜನರು ನೋಂದಣಿ ಮಾಡಿದ್ದಾರೆ. ಇನ್ನು 1,33,00,068 ಕೋಟಿಯಷ್ಟು ಜನ ನೋಂದಣಿಗೆ ಅರ್ಜಿ ಹಾಕಬೇಕು. ಇನ್ನು ಈ ಗೃಹಜ್ಯೋತಿ ಅರ್ಜಿ ಸಲ್ಲಿಕೆಯನ್ನ ಜೂನ್ 18 ರಿಂದ ಆರಂಭ ಮಾಡಲಾಗಿದ್ದು, ಒಟ್ಟು 11 ದಿನಗಳಿಂದ ಒಟ್ಟು 80,99,932 ರಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ. ಉಳಿದಿರುವ 1.13 ಕೋಟಿಯಷ್ಟು ಅರ್ಜಿ ಸಲ್ಲಿಕೆಗೆ ಇನ್ನು 15 ದಿನವಾದ್ರು ಬೇಕಾಗಲಿದೆ. ಇನ್ನು ಅರ್ಜಿ ಸಲ್ಲಿಕೆಯಾಗಿದ್ರೆ ಮಾತ್ರ ಆಗಸ್ಟ್ ತಿಂಗಳಿನಿಂದ ಫ್ರೀ ಗೃಹಜ್ಯೋತಿ ಸ್ಕೀಂ ಸಿಗಲಿದ್ದು, ಸಧ್ಯ ಬೆಸ್ಕಾಂ ನಿಂದ ಗೃಹಜ್ಯೋತಿ ನೀಡಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಸಾರ್ವಜನಿಕ ಸಾಕಷ್ಟು ವಿರೋಧವನ್ನ ವ್ಯಕ್ತಪಡಿಸುತ್ತಿದ್ದು, ಬೆಲೆ ಏರಿಕೆಯ ಮಧ್ಯೆ ಎಷ್ಡು ಯುನಿಟ್ ಫ್ರಿ ಕೊಟ್ರೆ ಏನು ಪ್ರಯೋಜನ. ಕಳೆದ ತಿಂಗಳ ಬಿಲ್ ನಾವು ಕಟ್ಟಲೇ ಬೇಕು. ಆ ಬಿಲ್ ನೋಡಿದ್ರೆ ದುಬಾರಿಯಾಗಿದೆ. ಕಾಂಗ್ರೆಸ್ ಸರ್ಕಾರದ ಸಾಕಷ್ಟು ನಿರೀಕ್ಷೆಗಳು ಇದ್ದದ್ದು ನಿಜ. ಇವರು ಫ್ರೀ ಸ್ಕೀಮ್ ಬದಲು ಮಕ್ಕಳು ಫ್ರೀ ಎಜುಕೇಶನ್ ನಿಗದಿ ಮಾಡಿದ್ರೆ ಎಷ್ಟೋ ಅನುಕೂಲವಾಗುತ್ತಿತ್ತು ಎಂದಿದ್ದಾರೆ.
ಒಟ್ನಲ್ಲಿ, ನಿನ್ನೆ ರಾತ್ರಿ 12 ಗಂಟೆಯಿಂದ ಅಧಿಕೃತವಾಗಿ ಈ ಯೋಜನೆ ಆರಂಭವಾಗಿದ್ದು, 200 ಯುನಿಟ್ ಒಳಗೆ ಬರುವ ಗ್ರಾಹಕರಿಗೆ ಆಗಸ್ಟ್ ತಿಂಗಳಲ್ಲಿ ಬರುವ ಬಿಲ್ ಶೂನ್ಯ ಬಿಲ್ ಎಂದು ಬರಲಿದೆ. 200 ಯುನಿಟ್ ಮೇಲೆ ಬಳಸಿದ ಜನರಿಗೆ ಬಿಲ್ ಬರಲಿದ್ದು, ತಿಂಗಳ ಅಂತ್ಯದ ವೇಳೆಗೆ ಗೃಹಜ್ಯೋತಿಗೆ ಜನರು ಬೇಗ ಅರ್ಜಿ ಸಲ್ಲಿಸಬೇಕಾಗಿದೆ.