ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ: ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಗಾದ್ರೆ, ನಿಮ್ಮೆ ಜಿಲ್ಲೆಯ ಉಸ್ತುವಾರಿ ಸಚಿವರು ಯಾರು ಎನ್ನುವುದನ್ನು ನೋಡಿ.

District In-Charge Ministers List: ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್​: ನಿಮ್ಮ ಜಿಲ್ಲೆ ಉಸ್ತುವಾರಿ ಯಾರು?

ಸಿದ್ದರಾಮಯ್ಯ ಸಚಿವ ಸಂಪುಟ

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಐತಿಹಾಸಿಕ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ಸರ್ಕಾರ ರಚನೆಯಲ್ಲಿಯ ಆರಂಭದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಹೈಕಮಾಂಡ್‌ ನಾಯಕರ ಸಮ್ಮುಖದಲ್ಲಿ ಎಲ್ಲಾ ಗೊಂದಲಗಳಿಗೂ ತೆರೆ ಬಿದ್ದಿತ್ತು. ಬಳಿಕ ನೂತನ ಸಚಿವರಿಗೆ ಖಾತೆ ಹಂಚಿಕೆಯನ್ನೂ ಸಹ ಹೈಕಮಾಂಡ್​ ಮಟ್ಟದಲ್ಲಿ ಚರ್ಚಿಸಿ ಹಂಚಲಾಗಿತ್ತು. ಇದೀಗ ತೀವ್ರ ಕುತೂಹಲ ಮೂಡಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಲಾಗಿದೆ. ಹಾಗಾದ್ರೆ, ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ ನೋಡಿ.

  • ಬೆಂಗಳೂರು ನಗರ ಉಸ್ತುವಾರಿ ಸಚಿವ- ಡಿ.ಕೆ.ಶಿವಕುಮಾರ್​
  • ತುಮಕೂರು ಜಿಲ್ಲಾ ಉಸ್ತುವಾರಿ-ಡಾ.ಜಿ.ಪರಮೇಶ್ವರ್​
  • ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೆಚ್​.ಕೆ.ಪಾಟೀಲ್
  • ಬೆಂಗಳೂರು ಗ್ರಾಮಾಂತರ-ಕೆ.ಹೆಚ್​.ಮುನಿಯಪ್ಪ
  • ರಾಮಲಿಂಗಾರೆಡ್ಡಿ-ರಾಮನಗರ
  • ಕೆ.ಜೆ.ಜಾರ್ಜ್​-ಚಿಕ್ಕಮಗಳೂರು
  • ಎಂ.ಬಿ.ಪಾಟೀಲ್​-ವಿಜಯಪುರ
  • ದಿನೇಶ್ ಗುಂಡೂರಾವ್​-ದಕ್ಷಿಣ ಕನ್ನಡ
  • ಹೆಚ್​.ಸಿ.ಮಹದೇವಪ್ಪ-ಮೈಸೂರು,
  • ಸತೀಶ್ ಜಾರಕಿಹೊಳಿ-ಬೆಳಗಾವಿ
  • ಪ್ರಿಯಾಂಕ್​ ಖರ್ಗೆ-ಕಲಬುರಗಿ
  • ಶಿವಾನಂದಪಾಟೀಲ್-ಹಾವೇರಿ
  • ಜಮೀರ್​ ಅಹ್ಮದ್ ಖಾನ್​​-ವಿಜಯನಗರ
  • ಶರಣಬಸಪ್ಪ ದರ್ಶನಾಪುರ-ಯಾದಗಿರಿ
  • ಈಶ್ವರ್ ಖಂಡ್ರೆ-ಬೀದರ್,
  • ಚಲುವರಾಯಸ್ವಾಮಿ-ಮಂಡ್ಯ
  • ಎಸ್​.ಎಸ್​.ಮಲ್ಲಿಕಾರ್ಜುನ್​-ದಾವಣಗೆರೆ
  • ಸಂತೋಷ್ ಲಾಡ್-ಧಾರವಾಡ
  • ಶರಣಪ್ರಕಾಶ್ ಪಾಟೀಲ್​-ರಾಯಚೂರು
  • ಆರ್​.ಬಿ.ತಿಮ್ಮಾಪುರ-ಬಾಗಲಕೋಟೆ
  • ಕೆ.ವೆಂಕಟೇಶ್​-ಚಾಮರಾಜನಗರ
  • ಕೊಪ್ಪಳ-ಶಿವರಾಜ್​ ತಂಗಡಗಿ
  • ಡಿ.ಸುಧಾಕರ್​-ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ
  • ಬಿ.ನಾಗೇಂದ್ರ-ಬಳ್ಳಾರಿ
  • ಕೆ.ಎನ್​.ರಾಜಣ್ಣ-ಹಾಸನ
  • ಭೈರತಿ ಸುರೇಶ್​-ಕೋಲಾರ
  • ಲಕ್ಷ್ಮೀ ಹೆಬ್ಬಾಳ್ಕರ್​-ಉಡುಪಿ
  • ಮಂಕಾಳ್ ವೈದ್ಯ-ಉತ್ತರ ಕನ್ನಡ
  • ಮಧು ಬಂಗಾರಪ್ಪ-ಶಿವಮೊಗ್ಗ
  • ಡಾ.ಎಂ.ಸಿ.ಸುಧಾಕರ್-ಚಿಕ್ಕಬಳ್ಳಾಪುರ
  • ಎನ್​.ಎಸ್​.ಬೋಸರಾಜು-ಕೊಡಗು ಜಿಲ್ಲಾ

ಇದರಲ್ಲಿ ಪ್ರಮುಖ ಅಂಶ ಅಂದರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ರಾಮನಗರ ಬಿಟ್ಟು ಬೆಂಗಳೂರು ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಇನ್ನು ರಾಮನಗರ ಜಿಲ್ಲಾ ಉಸ್ತುವಾರಿಯನ್ನು ರಾಮಲಿಂಗಾರೆಡ್ಡಿ ಅವರಿಗೆ ವಹಿಸಲಾಗಿದೆ.

ನಿರೀಕ್ಷೆಯಂತೆ ಸಚಿವ ಸತೀಶ್ ಜಾರಕಿಹೊಳಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನ ಸಿಕ್ಕಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ನಿರಾಸೆಯಾಗಿದೆ. ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಿಗುವುದು ಅನುಮಾನ ಎಂದು ಅರಿತುಕೊಂಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಸ್ವಕ್ಷೇತ್ರಕ್ಕೆ​ ಹತ್ತಿರವಾಗುವ ಧಾರವಾಡ ಅಥವಾ ಉತ್ತರ ಕನ್ನಡದ ಮೇಲೆ ಕಣ್ಣಿಟ್ಟಿದ್ದರು. ಆದ್ರೆ, ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಉಡುಪಿ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಇನ್ನು ಸಂತೋಷ್ ಲಾಡ್‌ಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಿಕ್ಕಿದೆ.

ಜಿಲ್ಲೆಗಳ ಉಸ್ತುವಾರಿ ಸ್ಥಾನಕ್ಕೆ ಪೈಪೋಟಿ ಶುರುವಾಗಿತ್ತು, ಅದರಲ್ಲೂ ಮುಖ್ಯವಾಗಿ ಒಂದೇ ಜಿಲ್ಲೆಯ ಇಬ್ಬರು ಸಚಿವರುಗಳ ನಡುವೆ ಭಾರೀ ಲಾಬಿಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ತಲೆನೋವಾಗಿತ್ತು. ಆದರೆ, ಇದೀಗ ಎಲ್ಲಾ ಗೊಂದಲಗಳನ್ನು ನಿವಾರಿಸಿ ಅಂತಿಮವಾಗಿ ಜಿಲ್ಲಾ ಉಸ್ತುವಾರಿಗಳನ್ನ ನೇಮಕ ಮಾಡಲಾಗಿದೆ.

Leave a Reply

Your email address will not be published. Required fields are marked *