ಜೂನ್ 2, ಶುಕ್ರವಾರ ಸಂಭವಿಸಿದ್ದ ಭೀಕರ ರೈಲು ಅಪಘಾತದಲ್ಲಿ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಸುಮೇದ್ ಶಿಖರ್ಜಿಗೆ ತೆರಳಿದ್ದ 110 ಜನರು ಪಾರಾಗಿ ಬಂದಿದ್ದರು. ಆದರೆ, ದುರಂತವೆಂಬಂತೆ ಅಪಘಾತದಲ್ಲಿ ಬದುಕುಳಿದಿದ್ದ ಯಾತ್ರಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

Chikkamagaluru News: ಒಡಿಶಾ ರೈಲು ಅಪಘಾತದಿಂದ ಪಾರಾಗಿದ್ದ ಯಾತ್ರಿಕ ಹೃದಯಾಘಾತದಿಂದ ಸಾವು

ಮೃತ ವ್ಯಕ್ತಿ

ಚಿಕ್ಕಮಗಳೂರು: ಜೂನ್ 2, ಶುಕ್ರವಾರ ಸಂಭವಿಸಿದ್ದ ಭೀಕರ ರೈಲು ಅಪಘಾತದಲ್ಲಿ ರಾಜ್ಯದ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಳಸದಿಂದ ಸುಮೇದ್ ಶಿಖರ್ಜಿಗೆ ತೆರಳಿದ್ದ 110 ಜನರು ಪಾರಾಗಿ ಬಂದಿದ್ದರು. ಆದರೆ, ದುರಂತವೆಂಬಂತೆ ಅಪಘಾತದಲ್ಲಿ ಬದುಕುಳಿದಿದ್ದ ಯಾತ್ರಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಧರ್ಮಪಾಲಯ್ಯ(61) ಮೃತ ದುರ್ದೈವಿ. ರೈಲು ಅಪಘಾತವಾದ ಬಳಿಕ ಸುಮೇದ್ ಶಿಖರ್ಜಿಗೆ ತೆರೆಳಿದ್ದರು. ಇದೀಗ ಅಲ್ಲಿಂದ ಹಿಂದಿರುಗುವಾಗ ಹೃದಯಾಘಾತ ಸಂಭವಿಸಿ ಕಳಸ ತಾಲೂಕಿನ ಕಳಕೋಡು ನಿವಾಸಿ, ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೇ ಸ್ಟೆಷನ್ ನಲ್ಲಿ ಸಾವನ್ನಪ್ಪಿದ್ದಾರೆ. ಮಿರ್ಜಾಪುರ ಸರ್ಕಾರಿ ಆಸ್ಪತ್ರೆ ಬಳಿ ಯಾತ್ರಿಕರು ಮೃತ ದೇಹಕ್ಕಾಗಿ ಕಾಯುತ್ತಿದ್ದಾರೆ.

ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹಂಗ ಬಜಾರ್ ಬಳಿ ಜೂನ್ 2ರ ರಾತ್ರಿ ಮೂರು ರೈಲುಗಳ ಮಧ್ಯೆ ಅಪಘಾತ ಸಂಭವಿಸಿ 290ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಭಾರತದ ರೈಲ್ವೆ ಇತಿಹಾಸದಲ್ಲೇ ಅತ್ಯಂತ ಘೋರ ಘಟನೆಗಳಲ್ಲಿ ಇದೂ ಒಂದು ಪರಿಗಣಿಸಲಾಗಿದೆ. ಕೋಲ್ಕತಾದಿಂದ ಚೆನ್ನೈಗೆ ಬರುತ್ತಿದ್ದ ಕೋರಮಂಡಲ್ ಎಕ್ಸ್​ಪ್ರೆಸ್ ರೈಲು ತಪ್ಪಾದ ಸಿಗ್ನಲ್ ಕಾರಣದಿಂದ ಟ್ರ್ಯಾಕ್ ಬದಲಿಸಿತ್ತು. ಅಲ್ಲಿ ನಿಂತಿದ್ದ ಸರಕು ಸಾಗಣೆ ರೈಲಿಗೆ ಢಿಕ್ಕಿ ಹೊಡೆದ ಪರಿಣಾಮ 12 ಬೋಗಿಗಳು ಹಳಿ ತಪ್ಪಿ ಪಕ್ಕದ ಟ್ರ್ಯಾಕ್​ಗೆ ಉರುಳಿವೆ. ಅತ್ತ, ಯಶವಂತಪುರದಿಂದ ಹೌರಾಗೆ ಹೋಗುತ್ತಿದ್ದ ಇನ್ನೊಂದು ರೈಲು ಈ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಈ ಎರಡು ಪ್ಯಾಸೆಂಜರ್ ರೈಲುಗಳಿಗೆ ಬಹಳ ಹಾನಿಯಾಗಿತ್ತು.

ದುರಂತ ಸಂಭವಿಸಿದ ಕೂಡಲೇ ರಕ್ಷಣಾ ತಂಡಗಳು ಕ್ಷಿಪ್ರವಾಗಿ ಘಟನಾ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ನೂರಾರು ಜೀವಗಳನ್ನು ಉಳಿಸಿದ್ದರು. ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಧರ್ಮೇಂದ್ರ ಪ್ರಧಾನ್ ಹಾಗೂ ಹಲವು ರೈಲ್ವೆ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿ ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆ ನಡೆಸಿದ್ದು ಗಮನ ಸೆಳೆದಿತ್ತು. ಘಟನಾ ಸ್ಥಳದಲ್ಲಿ ಎಲ್ಲವನ್ನೂ ತೆರವುಗೊಳಿಸಿ ಬೇಗ ಸಂಚಾರಕ್ಕೆ ಟ್ರ್ಯಾಕ್​ಗಳನ್ನು ಅನುವು ಮಾಡಿಕೊಟ್ಟಿತ್ತು. ಇದೇ ವೇಳೆ, ತಪ್ಪಾದ ಸಿಗ್ನಲ್ ಕಾರಣದಿಂದ ರೈಲು ಅಪಘಾತವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆಗೆ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಿಸ್ಟಂನ ಪ್ರಕ್ರಿಯೆಯಲ್ಲಿ ಆದ ಬದಲಾವಣೆ ಕಾರಣ ಎಂಬುದು ಗೊತ್ತಾಗಿದೆ ಎಂದು ರೈಲ್ವೆ ಸಚಿವ ವೈಷ್ಣವ್ ಹೇಳಿದ್ದರು. ಇದೀಗ ಸಿಬಿಐ ತನಿಖೆಯಾದಲ್ಲಿ ಇನ್ನಷ್ಟು ವಿಚಾರಗಳು ಮತ್ತು ಲೋಪದೋಷಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *