ಎಸ್ಟೇಟ್​ನಲ್ಲಿ ಕಾರ್ಮಿಕ ಮಹಿಳೆ ಕೊಂದು ಸುಟ್ಟುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ನಡೆದು‌ 7 ದಿನಗಳ ಬಳಿಕ‌ ಮಹಿಳೆ ಕೊಲೆ ರಹಸ್ಯ ಬಯಲಾಗಿದ್ದು, 18 ದಿನಗಳ ಬಳಿಕ ಮಹಿಳೆ ಗುರುತು ಪತ್ತೆಯಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು: ಎಸ್ಟೇಟ್​ನಲ್ಲಿ ಕಾರ್ಮಿಕ ಮಹಿಳೆಕೊಂದು (murder) ಸುಟ್ಟುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ನಡೆದು‌ 7 ದಿನಗಳ ಬಳಿಕ‌ ಮಹಿಳೆ ಕೊಲೆ ರಹಸ್ಯ ಬಯಲಾಗಿದ್ದು, 18 ದಿನಗಳ ಬಳಿಕ ಕಾರ್ಮಿಕ ಮಹಿಳೆ ಗುರುತು ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಗುಡ್ರುಕೊಪ್ಪ ಗ್ರಾಮದ ಮುತ್ತಮ್ಮ(75) ಕೊಲೆಯಾದ ಮಹಿಳೆ. ಜೂ. 12ರಂದು ಮುತ್ತಮ್ಮನನ್ನು ಚಿಕ್ಕಮಗಳೂರು ತಾಲೂಕಿನ ಸಿದ್ದಾಪುರ ಬಳಿಯಿರುವ ಸುಪ್ರೀಂ ಎಸ್ಟೇಟ್​ನಲ್ಲಿ ಹತ್ಯೆ ಮಾಡಲಾಗಿತ್ತು. ಮದ್ಯ ಸೇವಿಸುವ ವಿಚಾರಕ್ಕೆ ಮುತ್ತಮ್ಮನನ್ನು ಹತ್ಯೆಗೈದಿದ್ದ ನಾಗರಾಜ್​ನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಾಗಿತ್ತು.

ಮಹಿಳೆ ಗುರುತು ಪತ್ತೆಗಾಗಿ 4 ವಿಶೇಷ ತಂಡ ರಚನೆ

ಮನೆಯವರ ಜೊತೆ ಜಗಳವಾಡಿಕೊಂಡು ಮನೆ ಬಿಟ್ಟುಬಂದಿದ್ದ ಮುತ್ತಮ್ಮ. ನಾಪತ್ತೆಯಾಗಿದ್ದ ಮುತ್ತಮ್ಮ ಪತ್ತೆಗಾಗಿ ಪೊಲೀಸರು ಇಡೀ ರಾಜ್ಯ ಸುತ್ತಿದ್ದರು. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ‌‌ ನಾಪತ್ತೆ ಕೇಸ್ ದಾಖಲಾಗಿತ್ತು. ವಿಳಾಸ ನೀಡದೇ ತೋಟದ ಕೆಲಸಕ್ಕೆ ವೃದ್ಧೆ ಮುತ್ತಮ್ಮ ಸೇರಿಕೊಂಡಿದ್ದರು. ಹಾಗಾಗಿ ಮಹಿಳೆ ಗುರುತು ಪತ್ತೆಗಾಗಿ 4 ವಿಶೇಷ ತಂಡ ರಚನೆ ಮಾಡಲಾಗಿತ್ತು. ಕೊನೆಗೆ ವೋಟರ್ ಐಡಿ ಮೂಲಕ ಮಹಿಳೆ ಗುರುತು ಪತ್ತೆ ಹಚ್ಚಲಾಯಿತು.

ಮಧ್ಯ ಕುಡಿಯುವ ವಿಚಾರಕ್ಕೆ ಮುತ್ತಮ್ಮ ಮತ್ತು ಎಸ್ಟೇಟ್ ಮನೆಯಲ್ಲಿ ಕಾರ್ಮಿಕನಾಗಿದ್ದ ನಾಗರಾಜ್ ನಾಯ್ಕ್ ನಡುವೆ ಜೂನ್ 12 ರಂದು ಗಲಾಟೆ ನಡೆದು ಕಲ್ಲಿನಿಂದ ಮುತ್ತಮ್ಮ ಅವರ ತಲೆಗೆ ಹೊಡೆದು ಹತ್ಯೆ ಮಾಡಿದ್ದ. ಹತ್ಯೆ ಮಾಡಿದ ಸ್ಥಳದಿಂದ ಮೂರು ಕಿಮೀ ದೂರದ ಕಾಫಿ ತೋಟದ ನಿರ್ಜನ ಪ್ರದೇಶದಲ್ಲಿ ಮುತ್ತಮ್ಮ ಮೃತ ದೇಹವನ್ನ ಯಾರಿಗೂ ತಿಳಿಯದಂತೆ ಸುಟ್ಟು ಹಾಕಿದ್ದ.

18 ದಿನಗಳ ಬಳಿಕ ಮಹಿಳೆಯ ಗುರುತು ಪತ್ತೆ

ಹತ್ಯೆ ನಡೆದು 7 ದಿನದ ನಂತರ ಕೊಲೆಯಾಗಿರುವ ಬಗ್ಗೆ ಮಲ್ಲಂದೂರು ಠಾಣೆಯ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮುತ್ತಮ್ಮ ಮೃತ ದೇಹ ಸಂಪೂರ್ಣ ಸುಟ್ಟು ಹೋಗಿದ್ದ ಕಾರಣ ಹತ್ಯೆಯಾದ ಮಹಿಳೆಯ ಗುರುತು ಪತ್ತೆ ಸವಾಲಾಗಿತ್ತು. ವೋಟರ್ ಐಡಿ ಸಹಾಯದ ಮೂಲಕ ಹತ್ಯೆಯಾಗಿ 18 ದಿನಗಳ ಬಳಿಕ ಮಹಿಳೆಯ ಗುರುತು ಪತ್ತೆಯಾಗಿದೆ.

ಚಿಕ್ಕಮಗಳೂರಿನ ಪೊಲೀಸರಿಗೆ ಟೆಂಕ್ಷನ್‌ ನೀಡಿದ್ದ ಪ್ರಕರಣ ಹತ್ಯೆಯಾದ ಕಾರ್ಮಿಕ ಮಹಿಳೆಯ ಗುರುತು ಪತ್ತೆಯಾಗಿದೆ. ಮನೆಯ ಸದಸ್ಯರೊಂದಿಗೆ ಜಗಳವಾಗಿ ಮನೆ ಬಿಟ್ಟು ಕಾಫಿ ತೋಟದ ಕೆಲಸಕ್ಕೆ‌‌‌ ಸೇರಿದ್ದ ಮಹಿಳೆ, ಮದ್ಯ ಕುಡಿಯುವ ವಿಚಾರದ ಗಲಾಟೆಯಲ್ಲಿ ಕಾರ್ಮಿಕನಿಂದ ಹತ್ಯೆಯಾಗಿ ಕಾಫಿ ತೋಟದ ನಿರ್ಜನ ಪ್ರದೇಶದಲ್ಲಿ ಸುಟ್ಟು ಹೋಗಿದ್ದು ದುರಂತವೇ ಸರಿ.

Leave a Reply

Your email address will not be published. Required fields are marked *