ಅವರು ಈಗತಾನೆ ಚಿಗುರು ಮೀಸೆ ಹುಡುಗರು, ಕೈಯಲ್ಲಿ ಹೈ ಪೈ ಸ್ಮಾರ್ಟ ಪೋನ್, ಬ್ರಾಂಡೆಡ್ ಡ್ರೆಸ್​ಗಳು, ಇದರ ಜೊತೆಗೆ ಬೈಕ್ ಹಿಡಿದು ತಿರುಗಾಡುವ ಕಯಾಲಿ. ಆದ್ರೆ, ದುಡಿದು ತಿನ್ನುವ ಅಭ್ಯಾಸ ಮಾತ್ರ ಇರ್ತಿರಲಿಲ್ಲ, ಇದ್ರಿಂದ ದಾರಿ ತಪ್ಪಿದ್ದ ಅವರು ಮಾಡುತ್ತಿದ್ದ ವೃತ್ತಿ ಮಾತ್ರ ಕಳ್ಳತನ. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ.

Chikkaballapur: ಮೋಜು ಮಸ್ತಿಗೆ ಸಿಕ್ಕ ಸಿಕ್ಕ ಬೈಕ್​ಗಳನ್ನು ಕದ್ದು ಮಾರಾಟ! ಇಬ್ಬರು ಆರೋಪಿಗಳು ಅರೆಸ್ಟ್​

ಆರೋಪಿಗಳು

ಚಿಕ್ಕಬಳ್ಳಾಪುರ: ಮೋಜು ಮಸ್ತಿಗೋಸ್ಕರ ಸಿಕ್ಕ ಸಿಕ್ಕ ಬೈಕ್​ಗಳನ್ನು ಕಳ್ಳತನ(Bike Theft) ಮಾಡುತ್ತಿದ್ದ ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯ ಗೌರಿಬಿದನೂರು ನಿವಾಸಿಗಳಾದ ಜಾಕ್ಸನ್(22), ಮತ್ತೊರ್ವ 17 ವರ್ಷದ ಅಪ್ರಾಪ್ತನನ್ನ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ಒಂದು ಕಡೆ ಸೇರಿದ್ರೆ ಕಥೆ ಮುಗಿಯಿತು. ಎದುರಿಗೆ ಸಿಕ್ಕ ಬೈಕ್​ನ್ನು ಕದ್ದು ಮಂಗಮಾಯ ಮಾಡುತ್ತಿದ್ದರು. ಅದರಲ್ಲೂ ಆಸ್ಪತ್ರೆಗೆ ಬರುವ ರೋಗಿಗಳ ಬೈಕ್​ಗಳ ಮೇಲೆ ಕಣ್ಣು ಹಾಕಿದ್ದ ಇವರು ಕ್ಷಣಾರ್ಧದಲ್ಲಿ ಬೈಕ್​ಗಳನ್ನು ಕದ್ದು ಎಸ್ಕೇಪ್ ಆಗ್ತಿದ್ರು. ಆದರೀಗ ಈಗ ಇಬ್ಬರು ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರ ಕೈಗೆ ಸಿಕ್ಕಿದ್ದಾರೆ.

ಮೋಜು ಮಸ್ತಿಗೋಸ್ಕರ ಕಳ್ಳತನ ಮಾಡುತ್ತಿದ್ದ ಆಸಾಮಿಗಳು

ಇನ್ನು ಇಬ್ಬರಿಗೂ ಶೋಕಿ ಹುಚ್ಚು, ರಾತ್ರಿಯಾದ್ರೆ ಕುಡಿಯುವುದಕ್ಕೆ ಎಣ್ಣೆ, ತಿನ್ನುವುದಕ್ಕೆ ಮಾಂಸದ ಜೊತೆ ದುಶ್ಚಟಗಳು. ಕೈಯಲ್ಲಿರುವ ಕಾಸು ಕಾಲಿಯಾದ್ರೆ ಸಾಕು, ಪಾರ್ಕಿಂಗ್​ನಲ್ಲಿರುವ ಬೈಕ್​ಗಳನ್ನು ಕದಿಯುತ್ತಿದ್ರು. ಸದ್ಯ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಇವರಿಂದ 17 ಬೈಕ್​ಗಳನ್ನು ಜಪ್ತಿ ಮಾಡಿದ್ದು, ಇನ್ನೂ ತನಿಖೆ ಮುಂದುವರೆದಿದೆ. ಇವರ ಬಳಿ ಟಿವಿಎಸ್​ನಿಂದ ಬುಲೇಟ್​ವರೆಗೂ ಬೈಕ್​ಗಳನ್ನು ಕದ್ದಿರುವುದು ಬಯಲಾಗಿದೆ. ಇದೀಗ ಮಾಡಿದ ತಪ್ಪಿಗೆ ಇಬ್ಬರು ಚಿಕ್ಕಬಳ್ಳಾಪುರದ ಜೈಲು ಪಾಲಾಗಿದ್ದಾರೆ.

Leave a Reply

Your email address will not be published. Required fields are marked *