ತಾಯಿಯನ್ನು ಕೊಂದು ಶವವನ್ನು ಸೂಟ್‌ಕೇಸ್‌ನಲ್ಲಿ ಹಾಕಿಕೊಂಡು ಮೈಕೋಲೇಔಟ್‌ ಪೊಲೀಸ್​ ಠಾಣೆಗೆ ಪುತ್ರಿ ತಂದಿರುವ ಹೃದಯವಿದ್ರಾಹಕ ಘಟನೆ ಬೆಂಗಳೂರಲ್ಲಿ ನಡೆದಿದೆ.

Bengaluru News: ತಾಯಿಯನ್ನು ಕೊಂದು ಸೂಟ್ ಕೇಸ್​ನಲ್ಲಿ ಶವವನ್ನು ಪೊಲೀಸ್​ ಠಾಣೆಗೆ ತಂದ ಮಗಳು

ತಾಯಿಯನ್ನು ಕೊಂದ ಮಗಳು

ಬೆಂಗಳೂರು: ತಾಯಿಯನ್ನು (Mother) ಕೊಂದು (Murder) ಶವವನ್ನು (Body) ಸೂಟ್‌ಕೇಸ್‌ನಲ್ಲಿ ಹಾಕಿಕೊಂಡು ಮೈಕೋಲೇಔಟ್‌ ಪೊಲೀಸ್​ ಠಾಣೆಗೆ ಪುತ್ರಿ ತಂದಿರುವ ಹೃದಯವಿದ್ರಾಹಕ ಘಟನೆ ಬೆಂಗಳೂರಲ್ಲಿ ನಡೆದಿದೆ. ಬೀವಾ ಪಾಲ್ (70) ಮೃತ ದುರ್ದೈವಿ. ಸೆನಾಲಿ ಸೇನ್‌(39) ಕೊಲೆ ಆರೋಪಿ. ನಗರದ ಬಿಳೇಕಹಳ್ಳಿಯ ಎನ್‌ಎಸ್‌ಆರ್ ಗ್ರೀನ್‌ ಅಪಾರ್ಟ್‌ಮೆಂಟ್‌ನಲ್ಲಿ ಒಂದೇ ಫ್ಲ್ಯಾಟ್‌ನಲ್ಲಿ ಪುತ್ರಿ ಸೆನಾಲಿ ಸೇನ್‌, ತಾಯಿ ಬೀವಾ ಪಾಲ್ ಮತ್ತು ಸೆನಾಲಿ ಅತ್ತೆ ವಾಸವಿದ್ದರು. ನಿತ್ಯ ಬೀವಾ ಪಾಲ್ ಮತ್ತು ಸೆನಾಲಿ ಅತ್ತೆ ನಡುವೆ ಜಗಳವಾಗುತ್ತಿತ್ತು. ಇದನ್ನು ಕಂಡು ಸೆನಾಲಿ ಸೇನ್‌ ಬೇಸತ್ತು ಹೋಗಿದ್ದರು.

ಇನ್ನು ನಿತ್ಯ ಜಗಳದಿಂದ ಬೇಸತ್ತ ಬೀವಾ ಪಾಲ್ ಅವರು ನಿದ್ದೆ ಮಾತ್ರೆ ನುಂಗಿ ಸಾಯೋದಾಗಿ ಹೇಳಿದ್ದರು. ಆದರೆ ಸೆನಾಲಿನೇ  ತಾಯಿಗೆ 20 ನಿದ್ದೆ ಮಾತ್ರೆ ನುಂಗಿಸಿದ್ದಾರೆ. ಇದರಿಂದ ಬೀವಾ ಪಾಲ್ ಹೊಟ್ಟೆ ನೋವು ಎಂದು ಒದ್ದಾಡುತ್ತಿದ್ದಾಗ, ಸೆನಾಲಿ ತಾಯಿಯ ಕುತ್ತಿಗೆ ವೇಲ್​​ನಿಂದ ಬಿಗಿದು ಹತ್ಯೆ ಮಾಡಿದ್ದಾರೆ.

ನಂತರ ತಾಯಿ ಬೀವಾ ಪಾಲ್ ಅವರ ಶವವನ್ನು ಟ್ರ್ಯಾಲಿ ಸೂಟ್‌ಕೇಸ್‌ನಲ್ಲಿ ಹಾಕಿಕೊಂಡು, ಜೊತೆಗೆ ತಂದೆಯ ಪೊಟೋವನ್ನು ಇಟ್ಟುಗೊಂಡು ಸೆನಾಲಿ ಮೈಕೋಲೇಔಟ್‌ ಠಾಣೆಗೆ ಆಗಮಿಸಿದ್ದಾಳೆ. ಇನ್ನು ಸೆನಾಲಿ ಕೃತ್ಯ ಕಂಡು ಮೈಕೋಲೇಔಟ್ ಪೊಲೀಸರು ಬೆಚ್ಚಬಿದ್ದಿದ್ದಾರೆ. ಪೊಲೀಸರು ಸೆನಾಲಿ ಸೇನ್‌ ಅವರನ್ನು ಬಂಧಿಸಿ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *