ತವರು ಮನೆಗೆ ಹೋದ ಪತ್ನಿಯನ್ನ ಕರೆದುಕೊಂಡ ಬರಲು ಹೋದ ಅಳಿಯನೇ ಅತ್ತೆಗೆ ಚಾಕು ಇರಿದ ಘಟನೆ ಬೆಂಗಳೂರಿನ ಬೆಳ್ಳಂದೂರು ಬಳಿಯ ಇಬ್ಬಲೂರಿನಲ್ಲಿ ನಡೆದಿದೆ. ಗೀತಾ ಚಾಕು ಇರಿತಕ್ಕೊಳಾಗದ ಅತ್ತೆ.

Bengaluru: ತವರು ಮನೆಗೆ ಹೋದ ಪತ್ನಿಯನ್ನ ಕರೆದುಕೊಂಡ ಬರಲು ಹೋದ ಅಳಿಯನಿಂದ ಅತ್ತೆಗೆ ಚಾಕು ಇರಿತ

ಆರೋಪಿ ಅಳಿಯ

ಬೆಂಗಳೂರು: ಅಳಿಯನೇ ಅತ್ತೆಗೆ ಚಾಕು ಇರಿದ ಘಟನೆ ಬೆಂಗಳೂರಿ(Bengaluru)ನ ಬೆಳ್ಳಂದೂರು ಬಳಿಯ ಇಬ್ಬಲೂರಿನಲ್ಲಿ ನಡೆದಿದೆ. ಗೀತಾ ಚಾಕು ಇರಿತಕ್ಕೊಳಾಗದ ಅತ್ತೆ. ಆರೋಪಿ ಅಳಿಯ ಮನೋಜ್ ತನ್ನ ಪತ್ನಿ ವರ್ಷಿತಾಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಮನನೊಂದು ತವರು ಮನೆಗೆ ಹೋಗಿದ್ದಳು. ಈ ಹಿನ್ನೆಲೆಯಲ್ಲಿ ಪತ್ನಿಯನ್ನು ಕರೆತರಲು ಹೋಗಿದ್ದ ಅಳಿಯ ಮನೋಜ್ ಹೋಗಿದ್ದಾನೆ. ಈ ಸಂದರ್ಭದಲ್ಲಿ ಅತ್ತೆ ಮತ್ತು ಅಳಿಯನ ನಡುವೆ ಗಲಾಟೆ ನಡೆದಿತ್ತು. ಮಾತಿಗೆ ಮಾತು ಬೆಳೆದು ಅಳಿಯ ಮನೋಜ್​ ಅತ್ತೆ ಗೀತಾಗೆ ಚಾಕು ಇರಿದು ಎಸ್ಕೇಪ್ ಆಗಿದ್ದ. ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಇದೀಗ ಆರೋಪಿಯನ್ನ ಬಂಧಿಸಿದ್ದಾರೆ.

ತಮ್ಮನಿಂದಲೇ ಅಣ್ಣನ ಕೊಲೆ ಪ್ರಕರಣ; ಆರೋಪಿ ವಶಕ್ಕೆ

ಬೆಂಗಳೂರು: ನಿನ್ನೆ(ಜೂ.13) ಪುಲಕೇಶಿನಗರದಲ್ಲಿ ನಡೆದಿದ್ದ ತಮ್ಮನಿಂದಲೇ ಅಣ್ಣನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ವಿಜಯ್ ಎಂಬುವವನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೌದು ಪ್ರತಿ ದಿನ ಕುಡಿದು ಬಂದು ಗಲಾಟೆ ಮಾಡುತಿದ್ದ ಮೃತ ಕಾರ್ತಿಕ್. ಇದೇ ವಿಚಾರವಾಗಿ ಸಹೋದರನೊಂದಿಗೆ ವಿಜಯ್​ಗೆ ಗಲಾಟೆಯಾಗಿತ್ತು. ಗಲಾಟೆ ಮಧ್ಯೆ ಕಾರ್ತಿಕ್​ ಚಾಕುವಿನಿಂದ ಇರಿದಿದ್ದ. ಸದ್ಯ ಪೊಲೀಸರು ಸಹೋದರನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ಅಗ್ರಹಾರದ ಬಳಿ ಲಾರಿ ಹಾಗೂ ಎರ್ಟಿಗಾ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ‌ ಸಾವನ್ನಪ್ಪಿದ್ದಾರೆ. ಶಿವು ನಾಯಕ್, ಪರಮೇಶ್ ಮೃತ ದುರ್ದೈವಿಗಳು‌. ಇನ್ನು ಐವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಡ ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ಈ ಭೀಕರ ರಸ್ತೆ ಅಪಘಾತ ನಡೆದಿದ್ದು, ಇವರು ಸ್ನೇಹಿತನ ಮದುವೆಗೆ ತೆರಳಿ ವಾಪಸ್ ಕೊರಟಗೆರೆ ಹಾಗೂ ಕೊಡಿಗೇನಹಳ್ಳಿಗೆ ವಾಪಸ್ ಬರುತಿದ್ದ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *