ಭಾರತದಲ್ಲಿ ಕಳೆದ ವರ್ಷ ಶೇ.13ರಷ್ಟು ಅಪಘಾತಗಳು ಹೆಚ್ಚಾಗಿದೆ. ಇದಕ್ಕೆ ಅತೀ ವೇಗವೇ ಕಾರಣ ಎಂದು ಸರ್ಕಾರದ ವರದಿ ಹೇಳಿದೆ.

2022ರ ಅವಧಿಯಲ್ಲಿ ದೇಶದಲ್ಲಿ 4,61,312 ಅಪಘಾತಗಳು ಸಂಭವಿಸಿವೆ. ಹಿಂದಿನ ವರ್ಷ ಅಂದರೆ 2021ರಲ್ಲಿ 4,12,432 ಅಪಘಾತಗಳು ಸಂಭವಿಸಿದ್ದವು. ಈ ಅಂಕಿ-ಅಂಶಗಳನ್ನು ಗಮನಿಸಿದರೆ ಶೇ.11.9ರಷ್ಟು ಅಪಘಾತಗಳು ಹೆಚ್ಚಾಗಿವೆ.

2022ರಲ್ಲಿ 1,68,491 ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದು, 4,43,366 ಮಂದಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆಯಲ್ಲಿ ಶೇ.9.4ರಷ್ಟು ಏರಿಕೆಯಾಗಿದ್ದರೆ, ಗಾಯಗೊಂಡವರ ಸಂಖ್ಯೆ ಶೇ.15.3ರಷ್ಟು ಜಿಗಿತ ಕಂಡಿದೆ.

2022ರಲ್ಲಿ ಅತೀ ವೇಗದ ಚಾಲನೆಯಿಂದಲೇ 3.3 ಲಕ್ಷ ಅಪಘಾತಗಳು ಸಂಭವಿಸಿವೆ. ಉಳಿದ ಅಪಘಾತಗಳು ಅಡ್ಡಾದಿಡ್ಡಿ ಚಾಲನೆ, ಮದ್ಯ‌ ಸೇವನೆ, ಸಂಚಾರಿ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಕಾರಣಗಳಿಗೆ ಅಪಘಾತಗಳು ಸಂಭವಿಸಿವೆ.

ತಪ್ಪು ದಾರಿ (ಏಕಮುಖ ರಸ್ತೆ)ಯಲ್ಲಿ ಪ್ರಯಾಣಿಸಿದ್ದರಿಂದ ಶೇ.5.4ರಷ್ಟು ಅಪಘಾತಗಳು ಸಂಭವಿಸಿವೆ. ಮದ್ಯ ಸೇವನೆಯಿಂದ ಸಂಭವಿಸುತ್ತಿರುವ ಅಪಘಾತಗಳು 10 ಸಾವಿರ ದಾಟಿವೆ.

2022ರಲ್ಲಿ 50,000 ಹೆಲ್ಮೆಟ್‌ ಧರಿಸದ ಕಾರಣ ಬೈಕ್‌ ಸವಾರರು ಮೃತಪಟ್ಟಿದ್ದಾರೆ. ಇದರಲ್ಲಿ 35,692 ಮಂದಿ ವಾಹನ ಚಾಲನೆ ಮಾಡುತ್ತಿದ್ದವರು ಮತ್ತು 14,337 ಮಂದಿ ಹಿಂಬದಿ ಸವಾರರು ಆಗಿದ್ದಾರೆ.

16,715 ಮಂದಿ ಕಾರು ಚಾಲಕರು ಸೀಟ್‌ ಬೆಲ್ಟ್‌ ಧರಿಸದ ಕಾರಣ ಮೃತಪಟ್ಟಿದ್ದಾರೆ. ಚಾಲಕರ ಅಜಾಗೂರಕತೆಯಿಂದ 8384 ಚಾಲಕರು ಮತ್ತು 8331 ಪ್ರಯಾಣಿಕರು ಅಸುನೀಗಿದ್ದಾರೆ ಎಂದು ಕೇಂದ್ರ ಸರಕಾರದ ವರದಿ ವಿವರಣೆ ನೀಡಿದೆ.

Leave a Reply

Your email address will not be published. Required fields are marked *

Latest News