ಸಾಲಬಾಧೆಯಿಂದ ತಾಳಲಾರದೆ ಪುತ್ರ ಮತ್ತು ಪತ್ನಿಯನ್ನು ನದಿಗೆ ತಳ್ಳಿ ಪತಿ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಾಲಬಾಧೆ ತಾಳಲಾರದೆ ಪುತ್ರ, ಪತ್ನಿಯನ್ನು ನದಿಗೆ ತಳ್ಳಿದ ಪತಿ: ತಾನೂ ಆತ್ಮಹತ್ಯೆಗೆ ಶರಣಾದ ಉದ್ಯಮಿ

ಮೃತ ದುರ್ದೈವಿಗಳು

ಕಾರವಾರ: ಪುತ್ರ ಮತ್ತು ಪತ್ನಿಯನ್ನು ನದಿಗೆ ತಳ್ಳಿ ಉದ್ಯಮಿ ಆತ್ಮಹತ್ಯೆ (suicide) ಗೆ ಶರಣಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾರವಾರದ ಗೋಪಶಿಟ್ಟಾ ಮೂಲದ ಶ್ಯಾಮ್​ ಪಾಟೀಲ್​​(40), ಜ್ಯೋತಿ ಪಾಟೀಲ್​​(35), ದಕ್ಷ​​(12) ಮೃತ ದುರ್ದೈವಿಗಳು. ಗೋವಾದ ಕುಕ್ಕಳ್ಳಿಯಲ್ಲಿ ವಾಸವಿದ್ದರು. ಸಾಲಬಾಧೆಯಿಂದ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಾರವಾರ ಕಾಳಿ ನದಿ ಬ್ರಿಜ್​ನಿಂದ ಪತ್ನಿ, ಮಗನನ್ನು ದೂಡಿದ್ದಾರೆ ಎನ್ನಲಾಗುತ್ತಿದ್ದು, ಸದ್ಯ ದೇವಭಾಗ ಕಡಲ ತೀರದಲ್ಲಿ ಜ್ಯೋತಿ​​​ ಹಾಗೂ ದಕ್ಷನ​​ ಶವ ಪತ್ತೆಯಾಗಿದೆ.

ಉದ್ಯಮಿ ಶ್ಯಾಮ ಪಾಟೀಲ್​ ದೇಹ ಗೋವಾದ ಕುಕಳ್ಳಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗೋವಾ ವೆರ್ನಾದಲ್ಲಿ ಕಾರ್ಮಿಕರ ಪೂರೈಕೆ ಉದ್ಯಮ ಹೊಂದಿದ್ದರು. ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *