ನಿನ್ನೆ (ಜೂ.17) ಒಂದೇ ದಿನ ನಾಲ್ಕು ನಿಗಮಗಳ ಬಸ್​ಗಳಲ್ಲಿ ಪುರುಷರು ಸೇರಿದಂತೆ 1 ಕೋಟಿ 6 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸಿದ್ದಾರೆ.

ಬೆಂಗಳೂರು: ಶಕ್ತಿ ಯೋಜನೆಯಡಿ (Shakti Yojana) ಮಹಿಳೆಯರು (Women) ನಾನ್​​ ಎಸಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ (KSRTC Bus) ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಅದರಲ್ಲೂ ವೀಕೆಂಡ್ ಹಾಗೂ ಆಷಾಢ ಅಮಾವಾಸ್ಯೆ ಹಿನ್ನೆಲೆ ಮಹಿಳೆಯರು ರಾಜ್ಯದ ಪ್ರಸಿದ್ಧ ಧರ್ಮ ಕ್ಷೇತ್ರಗಳತ್ತ ತೆರಳುತ್ತಿದ್ದಾರೆ. ಈ ಹಿನ್ನೆಲೆ ಸರ್ಕಾರಿ ಬಸ್​​ಗಳು ಫುಲ್​ ರಶ್​​ ಆಗಿವೆ. ಬಸ್​​ನಲ್ಲಿ ಕೂಡಲು ಜಾಗವಿಲ್ಲದೆ ಬಡಿದಾಡಿಕೊಂಡಿದ್ದಾರೆ. ಹೀಗೆ ನಿನ್ನೆ (ಜೂ.17) ಒಂದೇ ದಿನ ನಾಲ್ಕು ನಿಗಮಗಳ ಬಸ್​ಗಳಲ್ಲಿ ಪುರುಷರು ಸೇರಿದಂತೆ 1 ಕೋಟಿ 6 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸಿದ್ದಾರೆ. ಇದರಲ್ಲಿ 54,30,150 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ.

ಪ್ರಯಾಣಿಕರ ಸಂಖ್ಯೆಯ ವಿವರ

ಬಿಎಂಟಿಸಿಯಲ್ಲಿ 35,25,566, ಕೆಎಸ್​ಆರ್​​ಟಿಸಿಯಲ್ಲಿ 30,58,458, ಎನ್​ಡಬ್ಲೂಕೆಎಸ್​ಆರ್​ಟಿಸಿ 24,83,683, ಕೆಕೆಆರ್​ಟಿಸಿ 15,68,505 ಜನ ಪ್ರಯಾಣಿಸಿದ್ದಾರೆ

ಮಹಿಳಾ ಪ್ರಯಾಣಿಕರ ಸಂಖ್ಯೆಯ ವಿವರ

ಬಿಎಂಟಿಸಿಯಲ್ಲಿ 18,09,833, ಕೆಎಸ್​ಆರ್​ಟಿಸಿಯಲ್ಲಿ 15,47,020, ಎನ್​ಡಬ್ಲೂಕೆಎಸ್​ಆರ್​ಟಿಸಿಯಲ್ಲಿ 13,36,125, ಕೆಕೆಆರ್​ಟಿಸಿಯಲ್ಲಿ 7,37,172 ಜನ ಮಹಿಳೆಯರು ಪ್ರಯಾಣಿಸಿದ್ದಾರೆ. ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ 40 ವಿಭಾಗಗಳು, 240 ಘಟಕಗಳಿವೆ. 23978 ವಾಹನಗಳಿದ್ದು, ಇದರಲ್ಲಿ 21574 ವಾಹನಗಳು ಕಾರ್ಯಾಚರಣೆ ನಡೆಸುತ್ತಿವೆ. ನಾಲ್ಕು ನಿಗಮದಲ್ಲಿ 1,04,450 ಸಿಬ್ಬಂದಿ ಇದ್ದಾರೆ. ಪ್ರತಿನಿತ್ಯ ನಾಲ್ಕು ನಿಗಮಗಳಿಂದ 23,13,32,000 ಕೋಟಿ ರೂ. ಆದಾಯ ಬರುತ್ತಿತ್ತು.

2022-23ನೇ ಸಾಲಿನಲ್ಲಿ 8946.85 ಕೋಟಿ ರೂ. ಆದಾಯ ಬಂದಿತ್ತು. 12750.49 ಕೋಟಿ ರೂ. ಕಾರ್ಯಾಚರಣೆ ವೆಚ್ಚವಾಗಿತ್ತು. ಇದೀಗ ನಿಗಮದ ಆದಾಯದಲ್ಲಿ ಅರ್ಧದಷ್ಟು ಕಡಿಮೆಯಾಗಲಿದ್ದು, ಅದನ್ನು ಸರ್ಕಾರ ತುಂಬಿಕೊಡಬೇಕಿದೆ. ಕೆಎಸ್​ಆರ್​ಟಿಸಿಯಲ್ಲಿ 40 ರಿಂದ 45 ಸಾವಿರ ಮಾಸಿಕ ಪಾಸ್ ಮಾರಾಟವಾಗುತ್ತಿತ್ತು. ಬಿಎಂಟಿಸಿಯಲ್ಲಿ 1.10 ಲಕ್ಷ ಮಾಸಿಕ ಪಾಸ್ ಮಾರಾಟವಾಗುತ್ತಿದ್ದವು.

Leave a Reply

Your email address will not be published. Required fields are marked *