Congress guarantee and Price Hike: ಒಂದು ಕೈನಲ್ಲಿ ಕೊಟ್ಟು ಮತ್ತೊಂದು ಕೈನಲ್ಲಿ ಕಿತ್ತುಕೊಳ್ತಿದೆಯಾ ಸರ್ಕಾರ? ಈ ಪ್ರಶ್ನೆ ಇದೀಗ ಜನಸಾಮಾನ್ಯರ ಮನದಲ್ಲಿ ಮೂಡುತ್ತಿದೆ. ಹಲವು ಉಚಿತ ಭಾಗ್ಯಗಳನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿಯಾಗಿ ನೀಡಿರುವ ಬೆನ್ನಲ್ಲೇ ಅಗತ್ಯ ವಸ್ತು, ಸೇವೆಗಳ ಬೆಲೆ ಏರಿಕೆ ಆಗಿದೆ. ಈ ನಡುವೆ, ಕೇಂದ್ರ ಸರ್ಕಾರ ಕೊಟ್ಟ ಜಿಎಸ್‌ಟಿ ಪಾಲು ಕೂಡಾ ಯಾವುದಕ್ಕೂ ಸಾಲದಂತಾಗಿದೆ. ಉಚಿತ ಯೋಜನೆಗಳಿಗೆ ಹಣ ಹೊಂದಿಸಲು ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿರುವ ಸರ್ಕಾರ, ದರ ಏರಿಕೆ ಅಸ್ತ್ರ ಪ್ರಯೋಗಿಸಿದೆ.

ಹಲವು ಉಚಿತ ಗ್ಯಾರಂಟಿ ಭಾಗ್ಯಗಳನ್ನ ಕರುಣಿಸಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ, ನುಡಿದಂತೆ ನಡೆದಿದ್ದೇವೆ ಎಂದು ಬೀಗುತ್ತಿದೆ. ಆದರೆ, ಇದರ ನಡುವಲ್ಲೇ ರಾಜ್ಯದ ಜನರಿಗೆ ಬೆಲೆ ಏರಿಕೆ ಬಿಸಿ ಕೂಡಾ ಸಖತ್ತಾಗೇ ತಟ್ಟುತ್ತಿದೆ. ವಿದ್ಯುತ್, ನೀರು ಹೀಗೆ ಹಲವು ರೀತಿಯಲ್ಲಿ ಬೆಲೆ ಏರಿಕೆ ಬಾಣ ಜನರಿಗೆ ಚುಚ್ಚುತ್ತಿದೆ. ಸರ್ಕಾರ ಒಂದು ಕೈನಲ್ಲಿ ಕೊಟ್ಟು ಮತ್ತೊಂದು ಕೈನಲ್ಲಿ ಕಿತ್ತುಕೊಳ್ತಿದೆಯಾ ಅನ್ನೋ ಆರೋಪ ಕೂಡಾ ಕೇಳಿ ಬರ್ತಿದೆ. ಉಚಿತ ಭಾಗ್ಯಗಳನ್ನ ಕೊಟ್ಟಿದ್ದೇನೋ ಓಕೆ.. ಆದ್ರೆ, ಬೆಲೆ ಏರಿಕೆ ಬರೆ ಏಕೆ ಅನ್ನೋದು ಜನರ ಪ್ರಶ್ನೆ.. ಇನ್ನು ಕೇಂದ್ರ ಸರ್ಕಾರ ರಾಜ್ಯದ ಜಿಎಸ್‌ಟಿ ತೆರಿಗೆ ಪಾಲನ್ನೇನೋ ಬಿಡುಗಡೆ ಮಾಡಿದೆ. ಆದ್ರೆ, ಈ ಹಣ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅನ್ನೋ ಥರಾ ಆಗಿದೆ. ಈ ಕುರಿತ ಸಮಗ್ರ ವಿಶ್ಲೇಷಣೆ ಇಲ್ಲಿದೆ..

ವಿದ್ಯುತ್ ಉಚಿತ.. ದರ ಏರಿಕೆ ಖಚಿತ!

ವಿದ್ಯುತ್ ಉಚಿತ.. ದರ ಏರಿಕೆ ಖಚಿತ!

ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ರೀತಿಯಲ್ಲೇ ಗೃಹ ಜ್ಯೋತಿ ಯೋಜನೆ ಅಡಿ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡೋದಾಗಿ ಘೋಷಣೆ ಮಾಡಿದೆ. ಜುಲೈ 1 ರಿಂದ ಈ ಯೋಜನೆ ಜಾರಿ ಆಗಲಿದ್ದು, ಜನರು ಜೂನ್ ತಿಂಗಳ ವಿದ್ಯುತ್ ಬಿಲ್ ಅನ್ನು ಜುಲೈನಲ್ಲಿ ಪಾವತಿ ಮಾಡಬೇಕಿದೆ. ಇದರ ನಡುವಲ್ಲೇ ಏಪ್ರಿಲ್‌ ತಿಂಗಳಿನಿಂದಲೇ ಅನ್ವಯ ಆಗೋ ರೀತಿ ವಿದ್ಯುತ್ ಬಿಲ್ ಏರಿಕೆ ಆಗಿದೆ. ಈ ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ವಿದ್ಯುತ್ ಬಿಲ್ ಏರಿಕೆಗೆ ಸಮ್ಮತಿ ಸೂಚಿಸಿತ್ತು. ಈ ಆದೇಶ ಈಗ ಜಾರಿಗೆ ಬಂದಿದೆ. ಅದೂ ಕೂಡಾ ಉಚಿತ ವಿದ್ಯುತ್ ಯೋಜನೆ ಜಾರಿಯಾದ ಬೆನ್ನಲ್ಲೇ ಬೆಲೆ ಏರಿಕೆ ಬಿಸಿ ಕೂಡಾ ತಟ್ಟಿದೆ. ಸಿದ್ದರಾಮಯ್ಯ ಸರ್ಕಾರವನ್ನ ಈ ಬಗ್ಗೆ ಕೇಳಿದ್ರೆ ಇದು ನಮ್ಮ ನಿರ್ಧಾರವಲ್ಲ, ಹಿಂದಿನ ಸರ್ಕಾರದ ನಿರ್ಧಾರ ಅಂತಾ ಹೇಳ್ತಿದೆ. ಇಷ್ಟಾದ್ರೂ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇನ್ನು, ಗೃಹ ಜ್ಯೋತಿ ಯೋಜನೆ ಅನ್ವಯ ಆಗುವ ಮನೆಗಳಿಗೆ ಹೆಚ್ಚಿನ ಹೊರೆ ಆಗೋದಿಲ್ಲ. ಆದ್ರೆ 2 ತಿಂಗಳ ಮಟ್ಟಿಗೆ ಬಿಲ್ ಕಟ್ಟಬೇಕಾದ ಕಾರಣ, ದರ ಏರಿಕೆ ಬಿಸಿಯನ್ನ ಅನುಭವಿಸಲೇ ಬೇಕು. ಇನ್ನು ಗೃಹ ಬಳಕೆ ಹೊರತುಪಡಿಸಿದ ಕೈಗಾರಿಕೆಗಳು, ವಾಣಿಜ್ಯ ಕಟ್ಟಡಗಳು ವಿದ್ಯುತ್ ಬೆಲೆ ಏರಿಕೆ ಹೊರೆಯನ್ನ ಹೊರಲೇ ಬೇಕು. ಅವರಿಗೆ ಬೇರೆ ಮಾರ್ಗವೇ ಇಲ್ಲ..

  • ಪ್ರತಿ ಯುನಿಟ್‌ಗೆ 70 ಪೈಸೆ ಹೆಚ್ಚಳ
  • 100 ಯುನಿಟ್ ಬಳಿಕ ಪ್ರತಿ ಯುನಿಟ್‌ಗೆ 7 ರೂ.
  • ಮೊದಲು 200 ಯುನಿಟ್ ದಾಟಿದ ಮೇಲೆ ಮಾತ್ರ 8.20 ರೂ. ದರ ವಿಧಿಸಲಾಗುತ್ತಿತ್ತು

ಸಿದ್ದರಾಮಯ್ಯ ಸರ್ಕಾರವೇನೋ ವಿದ್ಯುತ್ ಬಿಲ್ ಹೆಚ್ಚಳ ಬಿಜೆಪಿ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರ ಅಂತಿದೆ. ಆದ್ರೆ, ಬಿಜೆಪಿ ನಾಯಕರು ವಿದ್ಯುತ್ ಬಿಲ್ ಕಟ್ಟಬೇಡಿ ಅಂತಾ ಜನರಿಗೆ ನೇರವಾಗಿ ಸಂದೇಶ ನೀಡುತ್ತಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಂತೂ ಇಂಧನ ದರ ಏರಿಕೆಗೆ ನಾವು ಒಪ್ಪಿಗೆಯನ್ನೇ ನೀಡಿರಲಿಲ್ಲ ಅಂತಾ ಸ್ಪಷ್ಟನೆ ಕೂಡಾ ಕೊಡ್ತಿದ್ಧಾರೆ.

ಬೆಂಗಳೂರಿನಲ್ಲಿ ಕಾವೇರಿ ನೀರಿನ ದರವೂ ಏರಿಕೆ?

ಬೆಂಗಳೂರಿನಲ್ಲಿ ಕಾವೇರಿ ನೀರಿನ ದರವೂ ಏರಿಕೆ?

ರಾಜ್ಯ ರಾಜಧಾನಿ ಬೆಂಗಳೂರು ಮಹಾ ನಗರಕ್ಕೆ ಕಾವೇರಿ ನದಿ ನೀರನ್ನ ಬೃಹತ್ ಮೋಟಾರ್‌ಗಳನ್ನ ಬಳಸಿ ಪಂಪ್ ಮಾಡಿ ಬೆಂಗಳೂರಿಗೆ ತರಲಾಗುತ್ತೆ. ಇದು ಎಲ್ಲರಿಗೂ ಗೊತ್ತಿರೋ ವಿಚಾರವೇ.. ಇದೀಗ ವಿದ್ಯುತ್ ದರ ಏರಿಕೆಯಿಂದ ಸಹಜವಾಗಿಯೇ ಕಾವೇರಿ ನೀರಿನ ದರವೂ ಏರಿಕೆ ಆಗುತ್ತೆ ಅಂತಾ ಭಾವಿಸಿದರೆ ತಪ್ಪು.. ಯಾಕಂದ್ರೆ ಬಿಡಬ್ಲ್ಯೂಎಸ್‌ಎಸ್‌ಬಿಗೆ ಸರ್ಕಾರ ಕಡಿಮೆ ದರದಲ್ಲಿ ವಿದ್ಯುತ್ ಕೊಡ್ತಿದೆ. ಇಷ್ಟಾದರೂ ಕೂಡಾ ಜಲ ಮಂಡಳಿಗೆ ವಿದ್ಯುತ್ ಬಿಲ್ ದೊಡ್ಡ ಹೊರೆ ಆಗಿದೆ. ಜಲಮಂಡಳಿ ಸಂಗ್ರಹ ಮಾಡುವ 104 ಕೋಟಿ ರೂಪಾಯಿ ಪೈಕಿ 90 ರಿಂದ 95 ಕೋಟಿ ರೂಪಾಯಿ ಹಣ ವಿದ್ಯುತ್ ಬಿಲ್ ಪಾವತಿಗೆ ಖರ್ಚಾಗುತ್ತಿದೆ. ಮಿಕ್ಕ ಹಣದಲ್ಲಿ ಸಿಬ್ಬಂದಿಗೆ ಸಂಬಳ, ದುರಸ್ತಿ, ನಿರ್ಮಾಣ ವೆಚ್ಚಕ್ಕೆ ಹಣವೇ ಸಾಕಾಗುತ್ತಿಲ್ಲ. ಪರಿಸ್ಥಿತಿ ಹೀಗಾದರೆ ಶುದ್ಧ ಕುಡಿಯುವ ನೀರು ಜನರಿಗೆ ಸಿಗೋದು ಹೇಗೆ? ಹೀಗಾಗಿ, ವಿದ್ಯುತ್ ದರ ಹೆಚ್ಚಳ ಆಗಬಹುದು ಅನ್ನೋ ಸುಳಿವನ್ನ ಡಿಸಿಎಂ ಡಿ. ಕೆ. ಶಿವಕುಮಾರ್ ಈ ಹಿಂದೆಯೇ ನೀಡಿದ್ದರು. 2014ರಿಂದ ಈವರೆಗೆ ನೀರಿನ ದರ ಪರಿಷ್ಕರಣೆಯೇ ಆಗಿಲ್ಲ ಅಂತಾನೂ ಡಿಕೆಶಿ ಹೇಳಿದ್ದರು. ಈ ಸೂಚನೆಗಳನ್ನ ಗಮನಿಸಿದರೆ ಶೀಘ್ರದಲ್ಲೇ ನೀರಿನ ಬಿಲ್ ಕೂಡಾ ಹೆಚ್ಚಾಗೋದು ಪಕ್ಕಾ ಅಂತಾನೇ ಹೇಳಬಹುದು.

ಸೈಟು, ಫ್ಲಾಟು, ಮನೆ, ಭೂಮಿ ಖರೀದಿಯೂ ದುಬಾರಿ!

ಸೈಟು, ಫ್ಲಾಟು, ಮನೆ, ಭೂಮಿ ಖರೀದಿಯೂ ದುಬಾರಿ!

ಯಾವುದೇ ಭೂಮಿಗೆ ಸರ್ಕಾರಿ ರೇಟ್ ಅಂತಾ ಇರುತ್ತೆ. ಖಾಸಗಿಯವರು ಸೈಟ್‌ಗೆ ಎಷ್ಟೇ ಬೆಲೆ ಹೇಳಬಹುದು. ಆದ್ರೆ ಸರ್ಕಾರಿ ಮೌಲ್ಯ ಅನ್ನೋದು ಕಾಲ ಕಾಲಕ್ಕೆ ಬದಲಾಗ್ತಾ ಇರುತ್ತೆ. ಭೂಮಿಯ ಸರ್ಕಾರಿ ಮೌಲ್ಯವನ್ನ ಮಾರ್ಗಸೂಚಿ ದರ ಅಂತಾರೆ. ಈ ಮಾರ್ಗಸೂಚಿ ದರವನ್ನ ಹೆಚ್ಚಳ ಮಾಡಿದರೆ ಸಹಜವಾಗಿಯೇ ಸೈಟು, ಫ್ಲಾಟು, ಮನೆ ಅಥವಾ ಕೃಷಿ ಭೂಮಿಯ ಮೌಲ್ಯ ಹೆಚ್ಚಾಗುತ್ತೆ. ಇದು ರಿಯಲ್ ಎಸ್ಟೇಟ್‌ ಉದ್ಯಮಕ್ಕೆ ಲಾಭದಾಯಕ ಆದ್ರೂ ಕೂಡಾ ಸಾಮಾನ್ಯ ಜನರು ಆಸ್ತಿ ಖರೀದಿ ಮಾಡುವಾಗ ಮುದ್ರಾಂಕ ಶುಲ್ಕ ಅಂದರೆ ರಿಜಿಸ್ಟ್ರೇಷನ್ ಫೀಸ್‌ ಹೆಚ್ಚಿಗೆ ಕಟ್ಟಬೇಕಾಗುತ್ತೆ. ಇದೀಗ ಸರ್ಕಾರ ಮಾರ್ಗಸೂಚಿ ದರವನ್ನ ಶೇಕಡಾ 15ರಷ್ಟು ಏರಿಕೆ ಮಾಡೋಕೆ ಮುಂದಾಗಿದೆ. ಅಷ್ಟೇ ಅಲ್ಲ ರಿಜಿಸ್ಟ್ರೇಷನ್ ಫೀಸ್ ಜೊತೆಗೆ ಒಟ್ಟು ಆಸ್ತಿ ಮೌಲ್ಯದ ಮೇಲೆ ಶೇಕಡಾ 1ರಷ್ಟು ನೋಂದಣಿ ಶುಲ್ಕವನ್ನೂ ಜನರಿಂದ ವಸೂಲಿ ಮಾಡೋಕೆ ಸರ್ಕಾರ ಮುಂದಾಗಿದೆ. ಇದಕ್ಕಾಗಿ ವೆಬ್ ಆಧಾರಿತ ಕಾವೇರಿ 2.0 ಅಪ್ಲಿಕೇಷನ್ ಬಿಡುಗಡೆ ಮಾಡೋದಕ್ಕೂ ಸರ್ಕಾರ ನಿರ್ಧರಿಸಿದೆ. ಎಲೆಕ್ಷನ್ ಟೈಮ್‌ನಲ್ಲಿ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳನ್ನು ಕೊಡೋದಕ್ಕೆ ಸರ್ಕಾರಕ್ಕೆ ಆರ್ಥಿಕ ಸಂಪನ್ಮೂಲ ಬೇಕು. ಹೀಗಾಗಿ, ಸಂಪನ್ಮೂಲ ಕ್ರೋಢೀಕರಣಕ್ಕೆ ಸರ್ಕಾರ ದರ ಏರಿಕೆ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಮಾರ್ಗಸೂಚಿ ದರ ಯಾವಾಗ ಏರಿಕೆ ಆಗುತ್ತೋ ಅನ್ನೋ ಆತಂಕದಲ್ಲಿ ಜನ ಇದ್ದಾರೆ..

ಬಿಯರ್ ಬೆಲೆಯೂ ಏರಿಕೆ!

ಬಿಯರ್ ಬೆಲೆಯೂ ಏರಿಕೆ!

ಕೆಲವರಿಗೆ ಕುಡಿಯೋಕೆ ಕಾರಣ ಬೇಕು. ಖುಷಿಯಾದ್ರೂ ಕುಡೀತಾರೆ, ಬೇಜಾರಾದ್ರೂ ಕುಡೀತಾರೆ. ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಭಾಗ್ಯಗಳನ್ನ ಕೊಟ್ಟಿದೆ ಅಂತಾ ಕುಡಿಯೋಕೆ ಹೋದ್ರೆ ಅಲ್ಲಿ ಬೆಲೆ ಏರಿಕೆ ಬೇಜಾರು ತರಿಸುತ್ತೆ. ಸಮಾಧಾನಕರ ಸಂಗತಿ ಅಂದ್ರೆ, ಸರ್ಕಾರ ಬಿಯರ್ ದರವನ್ನ ಮಾತ್ರ ಏರಿಕೆ ಮಾಡಿದೆ. ವಿಸ್ಕಿ, ಬ್ರಾಂದಿ ಸೇರಿದಂತೆ ಬೇರೆ ಯಾವುದೇ ಮದ್ಯದ ದರದಲ್ಲೂ ಏರಿಕೆ ಆಗಿಲ್ಲ. ಬಿಯರ್‌ ರೇಟು ಪ್ರತಿ ಬಾಟಲ್‌ಗೆ ಸುಮಾರು 10 ರೂಪಾಯಿ ಏರಿಕೆ ಆಗಿದೆ. ಆದ್ರೆ, ಸರಕಾರ ಅಬಕಾರಿ ತೆರಿಗೆಯನ್ನ ಹೆಚ್ಚಳ ಮಾಡಿಲ್ಲ. ಬಿಯರ್ ತಯಾರಿಕಾ ಕಂಪನಿಗಳು ಉತ್ಪಾದನಾ ವೆಚ್ಚ ಏರಿಕೆ ಆದ ಕಾರಣ ಬಿಯರ್ ದರವನ್ನ ಏರಿಕೆ ಮಾಡಿವೆ. ಇದು ಪ್ರತಿ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಯೋ ಪ್ರಕ್ರಿಯೆ ಅಂತಾ ಅಬಕಾರಿ ಇಲಾಖೆ ಹೇಳಿದೆ. ಸದ್ಯಕ್ಕೆ ಬಿಯರ್ ದರವೇನೋ ಏರಿಕೆ ಆಗಿದೆ. ಆದ್ರೆ, ಜುಲೈ 7ಕ್ಕೆ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅಬಕಾರಿ ಸುಂಕ ಏರಿಕೆ ಮಾಡಿದ್ರೆ ಮದ್ಯದ ದರ ಹೆಚ್ಚಾಗೋದು ಗ್ಯಾರಂಟಿ..

ಹೈವೇ ಟೋಲ್ ರೇಟೂ ಹೆಚ್ಚಾಗಿದೆ..!

ಹೈವೇ ಟೋಲ್ ರೇಟೂ ಹೆಚ್ಚಾಗಿದೆ..!

ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ರೇಟು ಈಗಲೇ ತುಂಬಾ ಜಾಸ್ತಿ ಅಂತಾ ಜನ ಸಿಟ್ಟಾಗಿದ್ರು. ಆದ್ರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಟೋಲ್‌ ದರವನ್ನು ಇನ್ನಷ್ಟು ಹೆಚ್ಚಳ ಮಾಡಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೇನೂ ಇಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೇಂದ್ರ ಸರ್ಕಾರದ ಅಡಿ ಬರುವ ಕಾರಣ, ಟೋಲ್ ದರ ಹೆಚ್ಚಳಕ್ಕೆ ಜನರು ಸಿದ್ದರಾಮಯ್ಯ ಅವರನ್ನ ಪ್ರಶ್ನೆ ಮಾಡೋಕೆ ಸಾಧ್ಯವಿಲ್ಲ. ಆದ್ರೆ, ದುಬಾರಿ ಟೋಲ್ ದರವನ್ನಂತೂ ಕಟ್ಟಲೇ ಬೇಕು.

  • ಕಾರು, ವ್ಯಾನ್, ಜೀಪ್ – 135 ರೂ.ನಿಂದ 165 ರೂ.ಗೆ ಏರಿಕೆ
  • ಲಘು ವಾಹನ, ಮಿನಿ ಬಸ್ – 220 ರೂ.ನಿಂದ 270 ರೂ.ಗೆ ಏರಿಕೆ
  • ಟ್ರಕ್, ಬಸ್ – 460 ರೂ.ನಿಂದ 565 ರೂ.ಗೆ ಏರಿಕೆ
  • ತ್ರಿಬಲ್ ಆಕ್ಸೆಲ್ – 115 ರೂ. ಏರಿಕೆ
  • ಮಲ್ಟಿ ಆಕ್ಸೆಲ್ – 200 ರೂ. ಹೆಚ್ಚಳ

ಜಿಎಸ್‌ಟಿ ಪರಿಹಾರ ಲೆಕ್ಕಕ್ಕೇ ಇಲ್ಲ!

ಜಿಎಸ್‌ಟಿ ಪರಿಹಾರ ಲೆಕ್ಕಕ್ಕೇ ಇಲ್ಲ!

ಕೇಂದ್ರ ಸರ್ಕಾರ ಜಿಎಸ್‌ಟಿ ತೆರಿಗೆಯನ್ನ ಎಲ್ಲ ರಾಜ್ಯಗಳಿಂದ ಸಂಗ್ರಹ ಮಾಡುತ್ತೆ. ಈ ಪೈಕಿ ರಾಜ್ಯಗಳ ಪಾಲನ್ನು ಪರಿಹಾರದ ರೂಪದಲ್ಲಿ ಕೊಡುತ್ತೆ. ಈ ಬಾರಿ ಕರ್ನಾಟಕ ರಾಜ್ಯಕ್ಕೆ ಜಿಎಸ್‌ಟಿ ಪರಿಹಾರ 4,314 ಕೋಟಿ ರೂ. ಸಿಕ್ಕಿದೆ. ಈ ಹಣ ನಮ್ಮ ರಾಜ್ಯಕ್ಕೆ ಯಾವುದಕ್ಕೂ ಸಾಲದು. ಗ್ಯಾರಂಟಿಗಳಿಗೇ ಹಣ ಹೊಂದಿಸೋಕೆ ಹೆಣಗಾಡುತ್ತಿರುವ ಸರ್ಕಾರ, ಅಭಿವೃದ್ದಿ ಕಾರ್ಯಗಳಿಗಾದ್ರೂ ಜಿಎಸ್‌ಟಿ ಹಣವನ್ನ ಬಳಕೆ ಮಾಡಬೇಕಿದೆ. ಹಿಂದಿನ ತಿಂಗಳ ಬಾಕಿ ಜೊತೆ ಒಂದು ತಿಂಗಳ ಮುಂಗಡ ಹಣವನ್ನೂ ಈ ಬಾರಿ ಕೇಂದ್ರ ಸರ್ಕಾರ ಕೊಟ್ಟಿದೆ. ಅಭಿವೃದ್ದಿ ಕಾರ್ಯಗಳಿಗಾಗಿ ಹಣ ಬಿಡುಗಡೆ ಮಾಡಿದ್ದೇವೆ ಅಂತಾನೂ ಕೇಂದ್ರ ಸರ್ಕಾರ ಹೇಳಿದೆ. ಈ ಹಣ ಸದ್ಬಳಕೆ ಆಗಲಿ ಅನ್ನೋದೇ ಎಲ್ಲರ ಆಶಯ..

Leave a Reply

Your email address will not be published. Required fields are marked *