ಮೇ 12ರಂದು KERC ಪ್ರತಿ ಯೂನಿಟ್​​ಗೆ 70 ಪೈಸೆ ಏರಿಕೆ ಮಾಡಿದೆ. ಈ ಹಿನ್ನೆಲೆ ಬಿಲ್​​ನಲ್ಲಿ ಪರಿಷ್ಕೃತ ವಿದ್ಯುತ್ ಶುಲ್ಕವನ್ನು ನಮೂದಿಸಿದೆ.

ವಿದ್ಯುತ್ ದರ ಏರಿಕೆ ಬಗ್ಗೆ ಟೀಕೆ: ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಸ್ಪಷ್ಟನೆ

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ

ಬೆಂಗಳೂರು: ರಾಜ್ಯದ ಜನರಿಗೆ ಉಚಿತ ಗ್ಯಾರಂಟಿಗಳಲ್ಲಿ ಒಂದಾಗಿರುವ ಉಚಿತ 200 ಯೂನಿಟ್​ ಕರೆಂಟ್​​ ನೀಡುವ ಭರವಸೆಯನ್ನು ಕಾಂಗ್ರೆಸ್​ ಈಗಾಗಲೇ ಜಾರಿ ಮಾಡಿದೆ. ಆದರೆ ಈ ಬಾರಿಯ ವಿದುತ್ಯ್ (Electricity tariff hike) ​ಗಳು ಕಳೆದ ಬಾರಿಗಿಂತ ಹೆಚ್ಚಾಗಿ ಬಂದದ್ದನ್ನು ಕಂಡು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಜನರ ಗೊಂದಲಗಳನ್ನು ಬಗೆ ಹರಿಸಲು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ (Mahantesh Bilagi) ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಮೇ 12ರಂದು KERC ಪ್ರತಿ ಯೂನಿಟ್​​ಗೆ 70 ಪೈಸೆ ಏರಿಕೆ ಮಾಡಿದೆ. ಈ ಹಿನ್ನೆಲೆ ಬಿಲ್​​ನಲ್ಲಿ ಪರಿಷ್ಕೃತ ವಿದ್ಯುತ್ ಶುಲ್ಕವನ್ನು ನಮೂದಿಸಿದೆ. ಜೂನ್ ತಿಂಗಳಲ್ಲಿ ನೀಡುವ ಮೇ ತಿಂಗಳ ವಿದ್ಯುತ್ ಬಳಕೆಯ ವಿದ್ಯುತ್​​ ಬಿಲ್​​ನಲ್ಲಿ ಏಪ್ರಿಲ್ ತಿಂಗಳ ಹಿಂಬಾಕಿಯನ್ನು ನೀಡಲಾಗಿದೆ. ಹಾಗೆ KERC ಆದೇಶದ ಪ್ರಕಾರ 2 ಶ್ರೇಣಿಗಳಲ್ಲಿ ವಿದ್ಯುತ್ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ.

ಮೊದಲ 100 ಯೂನಿಟ್‌​​ಗೆ ಪ್ರತಿ ಯೂನಿಟ್‌ ದರ 4.75 ರೂ. ವಿಧಿಸಲಾಗಿದೆ. 100 ಯೂನಿಟ್ ಮೀರಿದರೆ 2ನೇ ಶ್ರೇಣಿ ದರ ಪ್ರತಿ ಯೂನಿಟ್​​ಗೆ 7 ರೂ. ಅನ್ವಯವಾಗಲಿದೆ. ಈ ಮೊದಲು ಮೂರು ಶ್ರೇಣಿ ದರಗಳಲ್ಲಿ ಶುಲ್ಕ ಸಂಗ್ರಹಿಸಲಾಗುತ್ತಿತ್ತು. ಮೊದಲ 50 ಯೂನಿಟ್​​​ಗೆ 4.15 ರೂ., ನಂತರದ 50 ಯೂನಿಟ್​​​ಗೆ 5.6 ರೂ. 100 ಯೂನಿಟ್ ಮೀರಿದರೆ 7.15 ರೂ. ಸಂಗ್ರಹಿಸಲಾಗುತ್ತಿತ್ತು.

ಪರಿಷ್ಕರಣೆ ಆದೇಶದಲ್ಲಿ 1ರಿಂದ 50 ಕಿ.ವ್ಯಾ ಮಂಜೂರಾತಿ ಲೋಡ್​​ಗೆ 110 ರೂ. 50 ಕಿ.ವ್ಯಾ. ಮೇಲ್ಪಟ್ಟ ವಿದ್ಯುತ್‌ ಮುಂಜೂರಾತಿ ಲೋಡ್​​ಗೆ 210 ರೂ. ಬಿಲ್ ಬರಲಿದೆ ಎಂದು ತಿಳಿಸಲಾಗಿದೆ.

ಏಪ್ರಿಲ್ ತಿಂಗಳಿನಿಂದಲೇ ಕೆಇಆರ್​ಸಿ ವಿದ್ಯುತ್ ದರ ಏರಿಕೆ

ಏಪ್ರಿಲ್ ತಿಂಗಳಿನಿಂದಲೇ ಕೆಇಆರ್​ಸಿ ವಿದ್ಯುತ್ ದರ ಏರಿಕೆ ಮಾಡಿತ್ತು. ಆದರೆ ಚುನಾವಣೆ ಹಿನ್ನಲೆ ಬಿಜೆಪಿ ಇದಕ್ಕೆ ತಡೆ ನೀಡಿತ್ತು. ಈಗ ಹೊಸ ಸರ್ಕಾರ ಬರುತ್ತಿದ್ದಂತೆ ಏಪ್ರಿಲ್ ಮೇ ತಿಂಗಳ ಏರಿಕೆ ಮೊತ್ತವನ್ನ ಒಮ್ಮಿಂದೊಮ್ಮೆಲೇ ಸೇರಿಸಿ ಗ್ರಾಹಕರಿಗೆ ಬಿಲ್ ನೀಡಲಾಗುತ್ತಿದೆ. ಕಳೆದ ಬಾರಿ ಮೇ ತಿಂಗಳ ಬಿಲ್ ಮೊತ್ತ 881 ರೂ. ಇದ್ದವರಿಗೆ ಜೂನ್ ತಿಂಗಳ ವಿದ್ಯುತ್ ಬಿಲ್ 2067 ರೂ.ಗೆ ಏರಿಕೆಯಾಗಿದೆ. ಕಳೆದ ಬಾರಿ ಮೇ ತಿಂಗಳ ಬಿಲ್ 3976 ರೂ. ಇದ್ದರೆ ಜೂನ್ ತಿಂಗಳ ಬಿಲ್ 6052 ರೂ.ಗೆ ಏರಿಕೆಯಾಗಿದೆ.

Leave a Reply

Your email address will not be published. Required fields are marked *