ಪ್ರಧಾನಿ ಮೋದಿಯವರ ಭೇಟಿಯ ವರದಿಯನ್ನು ದೃಢೀಕರಿಸಿದ ರಾಜ್ಯ ಬಿಜೆಪಿ ಮುಖ್ಯಸ್ಥ ವಿ.ಡಿ.ಶರ್ಮಾ ಅವರು, ಜೂ.22 ರಂದು ಬಿಜೆಪಿಯ ರಾಜ್ಯ ಘಟಕವು  ಪ್ರಾರಂಭಿಸಿದ ರಾಣಿ ದುರ್ಗಾವತಿ ಗೌರವ ಯಾತ್ರೆಯಲ್ಲಿ ಸಮಾರೋಪ ಭಾಷಣ ಮಾಡಲು ಪ್ರಧಾನಿ ಜುಲೈ 1 ರಂದು ಶಹದೋಲ್‌ಗೆ ಭೇಟಿ ನೀಡಲಿದ್ದಾ

ಮಧ್ಯಪ್ರದೇಶದ (Madhya Pradesh) ಶಹದೋಲ್ (Shahdol) ಜಿಲ್ಲೆಗೆ ಪ್ರಧಾನಿ  (Narendra Modi) ಶನಿವಾರ(ಜುಲೈ1)ಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಪ್ರದೇಶ ಬಿಜೆಪಿ ಪ್ರಕಾರ ಮೋದಿ ಅವರು ‘ರಾಣಿ ದುರ್ಗಾವತಿ ಗೌರವ್ ಯಾತ್ರೆ’ ಕಾರ್ಯಕ್ರಮ ಮತ್ತು ನ್ಯಾಷನಲ್ ಸಿಕಲ್ ಸೆಲ್ ಅನೇಮಿಯಾ ನಿವಾರಣೆ ಮಿಷನ್(National Sickle Cell Anemia Elimination Mission) ಅನ್ನು ಪ್ರಾರಂಭಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಆಯುಷ್ಮಾನ್ ಕಾರ್ಡ್‌ಗಳ ವಿತರಣೆ ಸೇರಿದಂತೆ ಪ್ರಧಾನಿ ಮೋದಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರಾಜ್ಯ ಬಿಜೆಪಿಯ ಹಿರಿಯ ಕಾರ್ಯಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಧಾನಮಂತ್ರಿಯವರು ಶಾಹದೋಲ್ ಜಿಲ್ಲೆಯ ಪಕಾರಿಯಾ ಗ್ರಾಮಕ್ಕೆ ಭೇಟಿ ನೀಡಲಿದ್ದು ಗ್ರಾಮದ ವಿವಿಧ ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ರಾಜ್ಯಾದ್ಯಂತ ಸುಮಾರು 3.57 ಕೋಟಿ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್‌ಗಳ ವಿತರಣೆಯನ್ನು ಕೂಡಾ ಮೋದಿ ಮಾಡಲಿದ್ದಾರೆ.ಆಯುಷ್ಮಾನ್ ಕಾರ್ಡ್ ವಿತರಣೆ ಸಮಾರಂಭವನ್ನು ರಾಜ್ಯಾದ್ಯಂತ ನಗರ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಮತ್ತು ಅಭಿವೃದ್ಧಿ ಬ್ಲಾಕ್‌ಗಳಲ್ಲಿ ಆಯೋಜಿಸಲಾಗಿದೆ.

ಇದೇ ವೇಳೆ 16 ನೇ ಶತಮಾನದ ಮಧ್ಯಭಾಗದಲ್ಲಿ ಗೊಂಡ್ವಾನಾದ ಆಡಳಿತ ರಾಣಿಯಾಗಿದ್ದ ರಾಣಿ ದುರ್ಗಾವತಿಗೆ ಮೋದಿ ಗೌರವ ನಮನ ಸಲ್ಲಿಸಲಿದ್ದಾರೆ. ಮೊಘಲರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೆಚ್ಚೆದೆಯ, ನಿರ್ಭೀತ ಮತ್ತು ಧೈರ್ಯಶಾಲಿಯಾಗಿದ್ದಾರೆ ರಾಣಿ ದುರ್ಗಾವತಿ.

ಮೋದಿ ಸಂಜೆ 5 ಗಂಟೆಗೆ ಶಹದೋಲ್ ಜಿಲ್ಲೆಯ ಪಕಾರಿಯಾ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಬುಡಕಟ್ಟು ಸಮುದಾಯದ ಮುಖಂಡರು, ಸ್ವ-ಸಹಾಯ ಗುಂಪುಗಳು, ಗ್ರಾಮ ಫುಟ್ಬಾಲ್ ಕ್ಲಬ್ ಕ್ಯಾಪ್ಟನ್‌ಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಪ್ರಧಾನಿ ಮೋದಿಯವರ ಭೇಟಿಯ ವರದಿಯನ್ನು ದೃಢೀಕರಿಸಿದ ರಾಜ್ಯ ಬಿಜೆಪಿ ಮುಖ್ಯಸ್ಥ ವಿ.ಡಿ.ಶರ್ಮಾ ಅವರು, ಜೂ.22 ರಂದು ಬಿಜೆಪಿಯ ರಾಜ್ಯ ಘಟಕವು  ಪ್ರಾರಂಭಿಸಿದ ರಾಣಿ ದುರ್ಗಾವತಿ ಗೌರವ ಯಾತ್ರೆಯಲ್ಲಿ ಸಮಾರೋಪ ಭಾಷಣ ಮಾಡಲು ಪ್ರಧಾನಿ ಜುಲೈ 1 ರಂದು ಶಹದೋಲ್‌ಗೆ ಭೇಟಿ ನೀಡಲಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮಗಳಿಗಾಗಿ ಪ್ರಧಾನಿ ಮೋದಿ ಈ ಹಿಂದೆ ಜೂನ್ 27 ರಂದು ಶಹದೋಲ್‌ಗೆ ಭೇಟಿ ನೀಡಬೇಕಿತ್ತು. ಆದರೆ ಭಾರೀ ಮಳೆಯಿಂದಾಗಿ ಭೇಟಿಯನ್ನು ಮುಂದೂಡಲಾಗಿತ್ತು.

Leave a Reply

Your email address will not be published. Required fields are marked *