ಭಾರತ ಕ್ರಿಕೆಟ್ ತಂಡದ ದಂತಕತೆ ಸ್ಪಿನ್ ಮಾಂತ್ರಿಕ ಬಿಷನ್ ಸಿಂಗ್ ಬೇಡಿ ನಿಧನರಾಗಿದ್ದಾರೆ. ಅವರಿಗೆ ೭೭ ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ಬಿಷನ್ ಸಿಂಗ್ ಬೇಡಿ ಸೋಮವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
೧೯೬೭ರಿಂದ ೧೯೭೯ರವರೆಗೆ ಸುಮಾರು ೧೦ ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದ ಬಿಷನ್ ಸಿಂಗ್ ಬೇಡಿ ಎಡಗೈ ಸ್ಪಿನ್ನರ್ ಆಗಿದ್ದರು. ಅಲ್ಲದೇ ೨೨ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.
೬೭ ಟೆಸ್ಟ್ ಗಳಲ್ಲಿ ೨೬೬ ವಿಕೆಟ್ ಪಡೆದಿದ್ದ ಬೇಡಿ, ೧೦ ಏಕದಿನ ಪಂದ್ಯಗಳಲ್ಲಿ ಭಾರತ ತಂಡ ಪ್ರತಿನಿಧಿಸಿದ್ದರು. ೧೯೭೫ರ ವಿಶ್ವಕಪ್ ನಲ್ಲಿ ಭಾರತ ತಂಡದ ಪರ ಆಡಿದ್ದ ಬೇಡಿ ಭಾರತ ತಂಡ ಏಕದಿನ ಕ್ರಿಕೆಟ್ ನಲ್ಲಿ ದಾಖಲಿಸಿದ ಮೊದಲ ತಂಡದಲ್ಲಿದ್ದರು.