ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯೊರ್ವಳು, ಕಾಲೇಜಿನ ಹಾಸ್ಟಲ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆಕೆಯ ಪೋಷಕರು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ.

ಚಿಕ್ಕಬಳ್ಳಾಫುರ: ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ಕ್ಷುಲ್ಲಕ ಕಾರಣಗಳಿಗೆ ಪ್ರಾಣವನ್ನೇ ತ್ಯಜಿಸುತ್ತಿದ್ದಾರೆ. ಅದರಂತೆ ಇದೀಗ ಇಂಜಿನಿಯರಿಂಗ್(Engineering) ಓದುತ್ತಿದ್ದ  ಹಾಸ್ಟೆಲ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಹೌದು ಕೋಲಾರ(Kolar) ಜಿಲ್ಲೆ ಶ್ರೀನಿವಾಸಪುರ ತಾಲೂಕು ಎಲ್ದೂರು ನಿವಾಸಿಯಾದ ಪ್ರೀತಿ ಎಂಬ 22 ವರ್ಷದ ಯುವತಿ, ಚಿಕ್ಕಬಳ್ಳಾಫುರ (Chikkaballapur) ನಗರ ಹೊರಹೊಲಯದ ಪ್ರತಿಷ್ಠಿತ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ಇನ್ ಪಾರ್ಮಮೇಷನ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ವಿದ್ಯಾಬ್ಯಾಸ ಮಾಡುತ್ತಾ, ಕಾಲೇಜಿನ ಲೇಡಿಸ್ ಹಾಸ್ಟಲ್(Hostel)​ನಲ್ಲಿ ತಂಗಿದ್ದಳು, ಆದ್ರೆ, ನಿನ್ನೆ(ಜು.4) ಮಧ್ಯಾಹ್ನ ರೂಮ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಇದರಿಂದ ಆಕೆಯ ಪೋಷಕರು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರೀತಿ, ನಿನ್ನೆ ಬೆಳಿಗ್ಗೆ ಕಾಲೇಜಿಗೆ ಹೋಗಿರಲಿಲ್ಲ. ಹಾಸ್ಟಲ್​ನಲ್ಲಿಯೇ ಇದ್ದಳು. ಮೈಯಲ್ಲಿ ಹುಷಾರು ಇಲ್ಲ, ಆದ್ದರಿಂದ ಕಾಲೇಜಿಗೆ ಹೋಗಲ್ಲವೆಂದು ಹಾಸ್ಟಲ್ ವಾರ್ಡನ್ ಹಾಗೂ ಸ್ನೇಹಿತೆಗೆ ತಿಳಿಸಿದ್ದಾಳೆ. ಇದಾದ ಬಳಿಕ 12 ಗಂಟೆ ಸಮಯದಲ್ಲಿ ಆಕೆಯ ಸ್ನೇಹಿತೆ ಪ್ರೀತಿಗೆ ಹುಷಾರ್​ ಇರಲಿಲ್ಲ, ಹೇಗಿದ್ದಾಳೆ ಎಂದು ನೋಡಲು ಆಕೆಯ ರೂಮ್ ಬಳಿ ಹೋಗಿ ನೋಡಿದಾಗ, ಪ್ರೀತಿ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿದ್ದಾಳೆ.

ಇನ್ನು ವಿಷಯ ಗೊತ್ತಾಗುತ್ತಿದ್ದಂತೆ ಕಾಲೇಜಿನ ಆಡಳಿತ ಮಂಡಳಿ ತಕ್ಷಣ ರೂಮ್​ಗೆ ಆಗಮಿಸಿ ನೋಡುವಷ್ಟರಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಆದ್ರೂ, ಶವ ಕೆಳಗೆ ಇಳಿಸಿ ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಿದ್ದಾರೆ. ಏನೂ ಪ್ರಯೋಜನವಾಗಿಲ್ಲ. ಮನೆಯ ವೈಯಕ್ತಿಕ ಸಮಸ್ಯೆಯೋ, ಅಥವಾ ಕಾಲೇಜು ಸಮಸ್ಯೆಯೋ. ಯಾವುದನ್ನೂ ಸ್ಪಷ್ಟಪಡಿಸದ ಪ್ರೀತಿ, ತಂಗಿದ್ದ ರೂಮ್​ನಲ್ಲಿಯೇ ಶವವಾಗಿ ಪತ್ತೆಯಾಗಿದ್ದು, ಪೋಷಕರು ಅನುಮಾನ ವ್ಯಕ್ತಪಡಿಸಿ ವಿಜಯಪುರ ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *