ಬೆಂಗಳೂರು: ನಕಲಿ ಸಹಿತ ಹುಲಿಯ ಉಗುರು ಪೆಂಡೆಂಟ್‌ ಪ್ರಚೋದನೆ ಮಾಡಿದಂತಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ್‌  ಖಂಡ್ರೆ ತಿಳಿಸಿದ್ದಾರೆ,

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,  ರಾಜ್ಯದಲ್ಲಿ ರಿಯಾಲಿಟಿ ಶೋನಲ್ಲಿ ಹುಲಿ ಉಗುರಿನ ಆಭರಣ ಹಾಕಿಕೊಂಡಿರುವ ವ್ಯಕ್ತಿ ಬಗ್ಗೆ ಚರ್ಚೆ ನಡೆದಿದೆ. ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಬಳಸೋದು ಶಿಕ್ಷಾರ್ಹ ಅಪರಾಧವಾಗಿದೆ. ನಶಿಸಿ ಹೋಗುತ್ತಿರುವ ಪ್ರಾಣಿಗಳ ರಕ್ಷಣೆ ಮಾಡಲು ಈ ಕಾಯ್ದೆ ಮಾಡಲಾಗಿದೆ ಎಂದರು.

ಈ ಕಾಯ್ದೆ ಬಗ್ಗೆ ಜನರಿಗೆ ಭಯ ಬೇಡ, ಆದರೆ ಅದರ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಯಾರೂ ವನ್ಯಜೀವಿ ಉತ್ಪನ್ನಗಳನ್ನು ಉಪಯೋಗ ಮಾಡಬಾರದು.  ನಟ ಜಗ್ಗೇಶ್‌ ೨೦, ೩೦ ವರ್ಷದ ಹಿಂದೆ ನಮ್ಮ ತಾಯಿ ಕೊಟ್ಟಿದ್ದರು ಎಂಬ ಹೇಳಿಕೆ ನೀಡಿದ್ಧಾರೆ. ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ ಸತ್ಯಾಂಶ ಹೊರ ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು  ಎಂದು ಅವರು ಹೇಳಿದರು.

ನಟ ದರ್ಶನ್‌ ಸೇರಿದಂತೆ ೮ ದೂರುಗಳು ಬಂದಿವೆ. ಯಾರ ಯಾರದ್ದು ಎಂಬ ಮಾಹಿತಿಗಳನ್ನು ಅಧಿಕಾರಿಗಳು ನೀಡುತ್ತಾರೆ. ಯಾವುದೇ ಸೆಲಿಬ್ರಿಟಿಗಳಾಗಲಿ ಹುಲಿಯ ಉಗುರು ಪೆಂಡೆಂಟ್‌  ಧರಿಸಿದ್ದರೆ ಅವರ ವಿರುದ್ಧ ಅದು ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಎಫ್‌ಎಸ್‌ಎಲ್‌ ನಿರ್ಧರಿಸಲಿದೆ. ಇದಾದ ನಂತರ ಕಾನೂನಾತ್ಮಕ ಕ್ರಮವನ್ನುಕೈಗೊಳ್ಳಲಾಗುವುದು ಎಂದರು.

Leave a Reply

Your email address will not be published. Required fields are marked *