ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತನ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು 2.8 ಕೋಟಿ ರೂ. ಅಕ್ರಮ ಹಣ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಹೈದರಾಬಾದ್ ನ ಆಪ್ತ ಮಹೇಶ್ ರೆಡ್ಡಿ ನಿವಾಸ ಸೇರಿದಂತೆ 12 ಕಡೆ ಶನಿವಾರ ಬೆಳಿಗ್ಗೆ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ.
ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಗುತ್ತಿಗೆದಾರರ ಮನೆ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ತೆಲಂಗಾಣ ವಿಧಾನಸಭಾ ಚುನಾವಣೆಗೆ ರವಾನೆಯಾಗುತ್ತಿದ್ದ ಹಣ ಎಂದು ಶಂಕಿಸಿದ್ದರು. ಈ ಗುತ್ತಿಗೆದಾರ ಕಾಂಗ್ರೆಸ್ ಮುಖಂಡರ ಆಪ್ತ ಎಂದು ಹೇಳಲಾಗಿತ್ತು.

ಇದೀಗ ಹೈದರಾಬಾದ್ ನಲ್ಲಿರುವ ಡಿಕೆ ಶಿವಕುಮಾರ್ ಆಪ್ತರ ನಿವಾಸದ ಮೇಲೆ ದಾಳಿ ನಡೆದಿದ್ದು, ಪತ್ತೆಯಾಗಿರುವ 2.8 ಕೋಟಿ ರೂ. ನಗದು ಚುನಾವಣೆಗೆ ಬಳಸಲು ಗೌಪ್ಯವಾಗಿ ಇರಿಸಲಾಗಿತ್ತು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *