ಅವರು ಖತರ್ನಾಕ್ ದಂಪತಿಗಳು. ಖಾಕಿ ಪಡೆಯನ್ನೇ ನಿದ್ದೆಗೆಡಿಸಿದ್ದ ಆ ಗಂಡ ಹೆಂಡತಿ ಮಾಡುತ್ತಿದ್ದದ್ದು ಮನೆ ಹಾಳು ಕೆಲಸ, ಆದ್ರೆ, ಜನರಿಗೆ ತೋರಿಸೋದು ಮಾತ್ರ ಹೈಫೈ ಜೀವನವನ್ನ. ಈ ಐನಾತಿ ಪತಿ ಪತ್ನಿ ನಡೆಸುತ್ತಿದ್ದ ದಂಧೆ ಎಂಥದ್ದು ಗೊತ್ತಾ? ಇಲ್ಲಿದೆ ನೋಡಿ.

ಜನರ ಕಣ್ಣಿಗೆ ಹೈಪೈ ಲೈಫ್, ಮಾಡೋದು ಮಣ್ಣು ತಿನ್ನುವ ಕೆಲಸ: ಸೇಂದಿ ಮಾಫಿಯಾದ ಕಿಲಾಡಿ ದಂಪತಿ ಅರೆಸ್ಟ್

ರಾಯಚೂರು

ರಾಯಚೂರು: ಜಿಲ್ಲೆಯಲ್ಲಿ ಕಲಬೆರಕೆ ಸೇಂದಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಸಿಎಚ್ ಪೌಡರ್ ಅನ್ನೋ ನಿಷೇಧಿತ ಕೆಮಿಕಲ್​​ನಿಂದ ತಯಾರಿಸಲಾಗುವ ಈ ಸೇಂದಿ ಬೆಲೆ, ಲೀಟರ್​ಗೆ 10, 20 ರಿಂದ 50 ರವರೆಗೆ. ಅದು ಕ್ವಾಲಿಟಿ ಮೇಲೆ, ಹೆಚ್ಚು ಕಡಿಮೆಯಾಗುತ್ತದೆ. ಕಲಬೆರಿಕೆ ಸೇಂದಿ ಬ್ರಾಂಡೆಡ್​​ ಮದ್ಯಕ್ಕಿಂತಲೂ ಹೆಚ್ಚು ನಶೆ ಏರಿಸುತ್ತತ್ತಂತೆ. ಇದೇ ಕಾರಣಕ್ಕೆ ಕೂಲಿ, ಕಾರ್ಮಿಕ ವರ್ಗದ ಜನ ಕಡಿಮೆ ಬೆಲೆಗೆ ಸೀಗುವ ಈ ಸೇಂದಿಯನ್ನ ಸೇವಿಸುತ್ತಾರೆ. ಅದನ್ನ ಬಂಡವಾಳವನ್ನಾಗಿಸಿಕೊಂಡಿದ್ದ ನಜ್ಮಾ ಎಂಬ ಮಹಿಳೆ ನಗರದ ಸ್ಲಂವೊಂದರಲ್ಲಿ ಈ ದಂಧೆ ನಡೆಸುತ್ತಿದ್ದಳು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಟೀಂ ಅವರು ಈ ಖತರ್ನಾಕ್ ನಜ್ಮಾಳ ಮನೆ ಮೇಳೆ ದಾಳಿ ನಡೆಸಿ, ಆಕೆಯನ್ನ ರೆಡ್ ಹ್ಯಾಂಡ್ ಆಗಿ ಸೆರೆಹಿಡಿದಿದ್ದಾರೆ.

ಈ ವೇಳೆ ಈ ಕಿಲಾಡಿ ಲೇಡಿ ನಜ್ಮಾ ಮಾತ್ರ ಈ ದಂಧೆ ನಡೆಸುತ್ತಿಲ್ಲ. ಆಕೆಯ ಪತಿ ಇಬ್ರಾಹಿಂ ಕೂಡ ಇದೇ ದಂಧೆಕೋರ. ಪತಿ ಇಬ್ರಾಹಿಂ ಹಾಗೂ ಪತ್ನಿ ನಜ್ಮಾ ಇಬ್ಬರು, ಸಂಸಾರದ ಜೊತೆ ಇಂಥಹ ಕೆಟ್ಟ ಕೆಲಸವನ್ನೂ ಮಾಡುತ್ತಿದ್ದಾರೆ. ಇವರು ಜನರ ಕಣ್ಣಿಗೆ ಸಾಚಾಗಳ ಥರ, ಒಳ್ಳೆ ಹೈಟೆಕ್ ಮನೆಯಲ್ಲಿ ಜೀವನ ನಡೆಸುತ್ತಾರೆ. ಆದರೆ, ದಂಧೆ ನಡೆಸೋದು ಮಾತ್ರ ಸ್ಲಂಗಳಲ್ಲಿ. ಈ ಸ್ಲಂಗಳಲ್ಲಿನ ಮನೆಯಲ್ಲೇ ಕಲಬೆರಿಕೆ ಸೇಂದಿ ತಯಾರಿಸಲಾಗುತ್ತಿದ್ದು, ತಯಾರಿಕೆಗೆ ಬೇಕಾಗುವ ನಿಷೇಧಿತ ಕ್ಲೋರಲ್ ಹೈಡ್ರೇಡ್​ ಅಂದ್ರೆ, ಸಿಎಚ್ ಪೌಡರ್, ಸಕ್ಕರೆ, ಪೇಸ್ಟ್, ಈಸ್ಟ್ ಸೇರಿ ವಿವಿಧ ಕಚ್ಚಾ ವಸ್ತುಗಳ ಮೂಲಕ ಕಲಬೆರಿಕೆ ಸೇಂದಿ ತಯಾರಿಸುತ್ತಿದ್ದರು.

ದಂಪತಿಗೆ ಕರೆ ಮಾಡಿದ್ರೆ ಸಾಕು ಎಲ್ಲ ರೆಡಿ

ಈ ಸೇಂದಿ ಕುಡಿಯೋ ಜನ ಈ ಖತರ್ನಾಕ್ ದಂಪತಿಗೆ ಕರೆ ಮಾಡಿದ್ರೆ ಸಾಕು ಎಲ್ಲ ರೆಡಿ ಇರುತ್ತಿತ್ತು. ಈ ರೀತಿ ಸೇಂದಿ ಮಾಫಿಯಾದಲ್ಲಿ ಇಬ್ರಾಹಿಂ ಹಾಗೂ ನಜ್ಮಾ ದಂಪತಿ ಆಕ್ಟಿವ್ ಆಗಿದ್ದರು. ಈ ಖತರ್ನಾಕ್ ಗಂಡ ಹೆಂಡತಿಗೆ ದೊಡ್ಡ ಜಾಲದ ಸಂಪರ್ಕವಿದೆ. ಆ ನೆಟ್​ವರ್ಕ್ ಮೂಲಕ ನಿಷೇಧಿತ ಸಿಎಚ್​ ಪೌಡರ್ ತಂದು ಇಂತಹ ಅಕ್ರಮ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ದಾಳಿ ಮಾಡಿದ್ದು, ಈ ವೇಳೆ 200 ಲಿಟರ್ ಸೇಂದಿ, 500 ಗ್ರಾಂ ಸಿಎಚ್ ಪೌಡರ್, 200 ಗ್ರಾಂ ಸಕ್ಕರೆ, ಈಸ್ಟ್ ಸೇರಿ ಇನ್ನಿತರ ವಸ್ತುಗಳು ಪತ್ತೆಯಾಗಿದೆ. ಈ 10 ಗ್ರಾಂ ಸಿಎಚ್ ಪೌಡರ್ ಬೆಲೆ 200 ರೂಪಾಯಿ.

ಇನ್ನು ಈ ಖತರ್ನಾಕ್ ದಂಪತಿ ಎಷ್ಟು ನಟೋರಿಯಸ್ ಅಂದ್ರೆ, ಚುನಾವಣೆ ಸಮಯದಿಂದ ಈವರೆಗೆ ಒಟ್ಟು 6 ಪ್ರಕರಣಗಳು ದಾಖಲಾಗಿದ್ರೂ, ಈ ದಂಧೆ ಬಿಟ್ಟಿಲ್ಲ. ಜಾಮೀನಿನ ಮೇಲೆ ಹೊರ ಬಂದು ಮತ್ತೆ ಇದೇ ಚಾಳಿ ಮುಂದುವರೆಸಿದ್ದರು. ಸದ್ಯ ಈ ಬಗ್ಗೆ ಅಬಕಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತ್ನಿ ನಜ್ಮಾಳನ್ನ ವಶಕ್ಕೆ ಪಡೆಯಲಾಗಿದ್ದು, ಪತಿ ಇಬ್ರಾಹಿಂ ತಲೆಮರೆಸಿಕೊಂಡಿದ್ದಾನೆ. ಅದೆನೆ ಇರಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರೊ ಇಂಥವರನ್ನ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಬೇಕಿದೆ.

Leave a Reply

Your email address will not be published. Required fields are marked *