ರಕ್ಷಣಾ ಸಚಿವರನ್ನು ವಜಾಗೊಳಿಸಿದ ಬೆನ್ನಲ್ಲೇ ಇದೀಗ ಚೀನಾದ ಹಣಕಾಸು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರನ್ನು ವಜಾಗೊಳಿಸಲಾಗಿದೆ.
ಚೀನಾ ಸರ್ಕಾರ ಯಾವುದೇ ಕಾರಣ ನೀಡಿದೇ ಒಬ್ಬರ ಹಿಂದೆ ಒಬ್ಬರಂತೆ ಸಂಪುಟದಿಂದ ತೆಗೆದು ಹಾಕಲಾಗುತ್ತಿದೆ. ಸಂಪುಟ ಪುನರಚನೆ ಹಿನ್ನೆಲೆಯಲ್ಲಿ ಸಚಿವರನ್ನು ವಜಾಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ.
ಚೀನಾ ಸರಕಾರ ವಿತ್ತ ಸಚಿವ ಸ್ಥಾನದಿಂದ ಲಿಯು ಕುನ್ ಅವರನ್ನು ತೆಗೆದು ಹಾಕಲಾಗಿದ್ದು, ಅವರ ಸ್ಥಾನಕ್ಕೆ ಲ್ಯಾನ್ ಫೊಯೆನ್ ಅವರನ್ನು ನೇಮಿಸಲಾಗಿದೆ.
ಇದಕ್ಕೂ ಮುನ್ನ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ವಾಂಗ್ ಜಿಂಗ್ ಜಾಂಗ್ ಅವರನ್ನು ತೆರವುಗೊಳಿಸಲಾಗಿದ್ದು, ಯಿನ್ ಹೆಜುನ್ ಅವರನ್ನು ನೇಮಕ ಮಾಡಲಾಗಿದೆ. ವಾಂಗ್ 2012ರಿಂದ ರಾಜ್ಯ ಸಚಿವರಾಗಿದ್ದು, ನಂತರ 2018ರಿಂದ ಪೂರ್ಣ ಪ್ರಮಾಣದ ಸಚಿವರಾಗಿ ಬಡ್ತಿ ಪಡೆದಿದ್ದರು.