ಟೆಲ್ ಅವಿವ್: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಯುದ್ಧ ಮುಂದುವರೆದಿದ್ದು, ಯಾವುದೇ ಕಾರಣಕ್ಕೂ ನಾವು ಹಿಂದೆ ಸರಿಯಲ್ಲ. ಗೆಲುವಿನ ತನಕ ವಿರಮಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ನೇತನ್ಯಾಹು ಪ್ರತಿಜ್ಞೆ ಮಾಡಿದ್ದಾರೆ.

ಹಮಾಸ್ ಬಂಡುಕೋರರು ಒತ್ತೆಯಾಳಾಗಿಟ್ಟುಕೊಂಡವರಲ್ಲಿ ಇಬ್ಬರನ್ನು ಬಿಡುಗಡೆ ಮಾಡಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು, ಗೆಲುವಿನ ಕಡೆಯ ಕ್ಷಣದವರೆಗೂ ಹೋರಾಟ ನಡೆಸುತ್ತೇವೆ. ಬಾಂಬ್ ದಾಳಿಯಲ್ಲಿ ಯಾವುದೇ ವಿರಾಮವಿಲ್ಲ ಎಂದು ತಿಳಿಸಿದ್ದಾರೆ.

ಮಾಸ್ ವಿರುದ್ಧದ ಹೋರಾಟಕ್ಕೆ ೧೪ನೇ ದಿನ ತುಂಬಿದೆ. ಗಾಜಾ ಆರೋಗ್ಯ ಸಚಿವಾಲಯದಿಂದ ಮಾಹಿತಿಗಳ ಪ್ರಕಾರ ಈವರೆಗೂ ೪,೧೩೭ ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ೧೩ ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್ನಲ್ಲಿ ೧೪೦೦ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಆಕ್ರಮಣದ ಸಮಯದಲ್ಲಿ ಹಮಾಸ್ ೨೦೩ ಜನರನ್ನು ಒತ್ತೆಯಾಳಾಗಿರಿಸಿಕೊಂಡಿದೆ. ಅವರನ್ನು ಬಿಡುಗಡೆ ಮಾಡುವವರೆಗೂ ನಾವು ದಾಳಿ ಮುಂದುವರೆಸುತ್ತೇವೆ ಎಂದು ನೇತನ್ಯಾಹು ಹೇಳಿದ್ದಾರೆ.

ಹಮಾಸ್ನೊಂದಿಗಿನ ಯುದ್ಧಕ್ಕೆ ಮೂರು ಹಂತಗಳಿವೆ, ಮೊದಲು ವಾಯುದಾಳಿ ಮತ್ತು ನೆಲದ ಕುಶಲತೆಯಿಂದ ದಾಳಿ ಮಾಡುತ್ತೇವೆ, ನಂತರ ಪ್ರತಿರೋಧದ ಹಮಾಸ್ ನೆಲೆಗಳಲ್ಲಿ ದಾಳಿ ಮಾಡಲಾಗುತ್ತದೆ. ಅಂತಿಮವಾಗಿ ಗಾಜಾ ಪಟ್ಟಿಯಲ್ಲಿ ಜೀವನ ಸುಗಮಗೊಳಿಸಲಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *